ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಚೌಡಾಪುರ:ಆಕಸ್ಮಿಕ ಅಗ್ನಿಗೆ ಅಪಾರ ಹಾನಿ*<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಚೌಡಾಪುರದಲ್ಲಿ, ಗ್ರಾಮದ ಕೆ.ಚೌಡಪ್ಪ ತಂದೆ ತಿಂದಪ್ಪ ಇವರ ವಾಸದ ಗುಡಿಸಲು ಹಾಗೂ ಮನೆ. ಆಕಸ್ಮಿಕ ಬೆಂಕಿ ಕೆನ್ನಾಲಿಗೆ ಚಾಚಿದ್ದು,ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಸಂಪೂರ್ಣ ಸುಟ್ಟು ಕರುಕಲಾಗಿವೆ. ಮನೆಯಲ್ಲಿದ್ದ ಬೆಲೆ ಬಾಳುವ ಒಡವೆ ವಸ್ತ್ರಗಳು ಸಂಪೂರ್ಣ ಭಸ್ಮವಾಗಿವೆ, ಹೋರಿಗಳನ್ನು ಮಾರಿಕೊಂಡು ಬಂದ 90ಸಾವಿರ ಹಣ, ಮನೆಯಲ್ಲಿಡಲಾಗಿತ್ತು ಎನ್ನುತ್ತಾರೆ ಮನೆಯೊಡಯ ಚೌಡಪ್ಪ.
ಹಾಗೂ ಸ್ವಲ್ಪ ಬೇರೆ ಹಣವೂ ಇತ್ತೆನ್ನಲಾಗಿದೆ.ಒಟ್ಟಾರೆ 1ಲಕ್ಷಕ್ಕೂ ಹೆಚ್ಚು ನಗದು ಹಣ ಸೇರಿದಂತೆ, ಕಾಳು,ದವಸ ಧಾನ್ಯ,ಒಡವೆ ವಸ್ತ್ರಗಳು ಇತರೆ ಸಾಮಾಗ್ರಿಗಳು ಸೇರಿದಂತೆ. ಒಟ್ಟು ನಾಲ್ಕು ಲಕ್ಷಕ್ಕೂ ಅಧಿಕ ಬೆಲೆಯಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಮನೆಯೊಳಗಿದ್ದ ದವಸ ಧ್ಯಾನ,ಬಟ್ಟೆ ಗಳು ಸಂಪೂರ್ಣ ಸುಟ್ಟು ಭಸ್ಮ ಆಗಿವೆ.ಸ್ಥಳಕ್ಕೆ ಅಗ್ನಿ ಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ,ಈ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
