;

ಕಲ್ಲು ಗಣಿಗಾರಿಕೆ ಮುಂದೊಂದು ದಿನ ದುರಂತದ ಇತಿಹಾಸ ಬರೆಯದಿರಲಿ…!!!

ವರದಿ. ಬಸವರಾಜ್ ಹಿರೇಮಠ್

ಮುದಗಲ್ಲು

ಕಲ್ಲು ಗಣಿಗಾರಿಕೆ ಮುಂದೊಂದು ದಿನ ದುರಂತದ ಇತಿಹಾಸ ಬರೆಯದಿರಲಿ..

ಪ್ರಕೃತಿ ಸೃಷ್ಟಿಸಿರುವ ಸೌಂದರ್ಯ ಮನುಷ್ಯ ತನ್ನ ಸ್ವಾರ್ಥಕ್ಕೆ. ಹಣದ ದಾಹಕ್ಕೆ ಬಳಸಿಕೊಳ್ಳುತ್ತಿರುವುದು ದುರಂತವೆ ಸಾರಿ.

ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಮುದಗಲ್ ಚರಿತ್ರೆಯಲ್ಲಿ ಐತಿಹಾಸಿಕತೆಯ ತಾಣವಾಗಿದೆ. 11ನೇ ಶತಮಾನದಲ್ಲಿ ವಿದ್ಯಾಕೇಂದ್ರವಾಗಿದ್ದ ಮುದಗಲ್ಲು ತದನಂತರ 14ನೇ ಶತಮಾನದಲ್ಲಿ ಯಾದವ ರಾಜವಂಶ ಆಡಳಿತಕ್ಕೆ ಒಳಪಟ್ಟಿತ್ತು.ನಂತರ ಮಲ್ಲಿಕ್ ನಬೀ . ಬಿಜಾಪುರ ಆದಿಲ್ ಶಾಹಿ ಮತ್ತು ಕೊನೆಗೆ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯರ ಕೈವಶವಾಗುತ್ತಾ ಬಂದಿದ್ದ ಈ ಮುದಗಲ್ಲಿನ ಮಹಾ ಕೋಟೆ ಇಂದು ಅಕ್ಷರಶ: ಇಂದು ಗಣಿಗಾರಿಕೆಯ ಮಾಲೀಕರ ಕೈವಶವಾಗಿದೆ .ಇತಿಹಾಸ ಸಾರುವ ಸುಂದರವಾದ ಪ್ರತಿಯೊಂದು ಕಲ್ಲುಗಳು ವಿರೂಪವಾಗಿ ನರಳಿ ಅಳುತ್ತಿವೆ.

ಇಲ್ಲಿಯ ಜನಗಳು ಸಹ ಕಲ್ಲುಗಣಿಗಾರಿಕೆಯ ದೂಳಿಗೆ ನೊಂದು ಬೆಂದು ಹೋಗಿದ್ದಾರೆ. ಅಲ್ಲದೆ ಪ್ರತಿಕ್ಷಣವೂ ಜೀವನವನ್ನು ಸದಾ ಕೈಯಲ್ಲಿ ಹಿಡಿದುಕೊಂಡು ಭಯದಲ್ಲಿ ಬದುಕುತ್ತಿದ್ದಾರೆ .ಇಲ್ಲಿ ರಾಜಾರೋಷವಾಗಿ ಯಾವುದೇ ನೀತಿ ನಿಯಮಗಳುನ್ನು ಅನುಸರಿಸದೆ ಗಣಿಗಾರಿಕೆ ನಡೆಯುತ್ತಿದೆ .

ಕಲ್ಲುಗಣಿಗಾರಿಕೆಯಿಂದ ಐತಿಹಾಸಿಕ ಪ್ರಸಿದ್ಧಕೋಟೆಯ ಗೋಡೆಗಳು ಮತ್ತು ಅಲ್ಲಿಯ ಪುರಾತನ ಸ್ಮಾರಕಗಳಿಗೆ ಹಾನಿ ತಪ್ಪಿದ್ದಲ್ಲ .

ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ
ಮುದಗಲ್ ಸುತ್ತಮುತ್ತ ಗಣಿಗಾರಿಕೆಯನ್ನು ನಿಷೇಧಿಸಬೇಕು. ಅಲ್ಲಿಯ ವಾತಾವರಣ ಮತ್ತು ಐತಿಹಾಸಿಕ ಕೋಟೆಯನ್ನು ಸಂರಕ್ಷಿಸಬೇಕು .

ಮುಂದೊಂದು ದಿನ ಶಿವಮೊಗ್ಗದಲ್ಲಿ ಸಂಭವಿಸಿದಂತ‌ಹ ದುರಂತ ಸ್ಪೋಟಕ ಸಂಭವಿಸಿ .ಮುದುಗಲ್ ನಗರದ ಜನರಿಗೆ ಮತ್ತು ಕೋಟೆಗಳಿಗೆ ಯಾವುದೇ ಹಾನಿಯಾಗದಂತೆ ನಿಗಾವಹಿಸಬೇಕು

ಸಂಬಂಧಪಟ್ಟ ಇಲಾಖೆಯವರು ತ್ವರಿತವಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿಯ ನಾಗರಿಕರು ಮತ್ತು
ವಿವಿಧ ಸಂಘಟನೆಗಳು
ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಗಣಿಗಾರಿಕೆ ಇಲಾಖೆ ಮತ್ತು ಒತ್ತಾಯಿಸಿದ್ದಾರೆ..

.ಭವಿಷ್ಯದಲ್ಲಿ ನಾಡಿನ ಮತ್ತು ದೇಶದ ಇತಿಹಾಸ ಮತ್ತು ಐತಿಹಾಸಿಕ ತಾಣಗಳು ಉಳಿಯಬೇಕಾದರೆ ಸರಕಾರ ಇಂತಹ ಐತಿಹಾಸಿಕ ಸ್ಥಳದ ಸುತ್ತಮುತ್ತಲು ಕನಿಷ್ಠ 50 ಕಿಲೋಮೀಟರ್ ವರೆಗೂ ಯಾವುದೇ ಗಣಿಗಾರಿಕೆ ಕೈಗಾರಿಕೆ ಮುತ್ತು ಕಾರ್ಖಾನೆಗಳಿಗೆ ಅವಕಾಶ ನೀಡಬಾರದು ಅಂದಾಗ ಮಾತ್ರ ಭಾರತದ ಪರಂಪರೆ.ಮುಂದಿನ ಪೀಳಿಗೆಗೆ ಕೊಂಡೊಯ್ಯಬಹುದು ಎಂಬುದು ನಮ್ಮ ಒಂದು ಪತ್ರಿಕೆಯ ಆಶಯ…

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;