- ವರದಿ. ಎಚ್ಚರಿಕೆ ಪತ್ರಿಕಾ ವರದಿಗಾರ

*ಕುರೇಮಾಗನಹಳ್ಳಿ:ಆಕಸ್ಮಿಕ ಬೆಂಕಿಗೆ 5ಲಕ್ಷ ರೂ ಮೆಕ್ಕೇಜೋಳ ಭಸ್ಮ*<->ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕು ಕುರೆಮಾಗನಹಳ್ಳಿ ಯಲ್ಲಿ,15ಎಕರೆಯಲ್ಲಿ ಬೆಳೆದಿದ್ದ 5ಲಕ್ಷ ರೂ ಬೆಲೆಯ ಮೆಕ್ಕೇಜೋಳಕ್ಕೆ.ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿರೋ ಘಟನೆ ಗುರುವಾರ ಸಂಜೆ ಜರುಗಿದೆ,
ಗ್ರಾಮದ ರೈತ ಈರಣ್ಣ ತನ್ನ ಕಣದಲ್ಲಿ ಒಕ್ಕಣಿ ಮಾಡಲು ಮಕ್ಕೇಜೋಳದ ಸಂಗ್ರಹಿಸಿಟ್ಟಿದ್ದ.ಮೆಕ್ಕೇಜೋಳದ ಬೃಹತ್ ರಾಶಿಗೆ ಬೆಂಕಿ ತಗುಲಿದ್ದು,ಕೂಡಲೇ ಸಾರ್ವಜನಿಕರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ ಪ್ರಯೋಜನವಾಗಿಲ್ಲ.ಜ್ವಾಲೆಗೆ 5ಲಕ್ಷ ರೂ ಬೆಲೆಯಷ್ಟು ಮೆಕ್ಕೇಜೋಳ ಸಂಪೂರ್ಣ ಭಸ್ಮ ಆಗಿದೆ ಎಂದು ಹೇಳಲಾಗಿದೆ, ಸ್ಥಳಕ್ಕಾಗಮಿಸಿದ ದಾವಣಗೆರೆ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಡೆದಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
