;

ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ, ಪ್ರಸನ್ನಾನಂದಪುರಿ ಸ್ವಾಮೀಜಿ..!!

ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ನಾಯಕನಹಟ್ಟಿ/ ಪಟ್ಟಣದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಾತ್ರೆ ಸಿದ್ದತೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ. ರಾಜ್ಯದ ಬಿಜೆಪಿ ಸರ್ಕಾರ ಎಸ್ಸಿ ಹಾಗೂ ಎಸ್ಸಿ ಜನಾಂಗಕ್ಕೆ ಭಾರಿ ಅನ್ಯಾಯ ಎಸಗುತ್ತಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಹೇಳಿದರು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಒಂದು ಕೋಟಿಯಷ್ಟು ಎಸ್ಪಿ ಹಾಗೂ ಎಸ್ಪಿ ಜನಾಂಗವಿದೆ. ಸರ್ಕಾರ ಎಸ್ಸಿಗೆ ಶೇ.18 ಹಾಗೂ ಎಸ್ಟಿಗೆ ಶೇ.3ರ ಮೀಸಲಾತಿ ನೀಡಿದೆ. ಆದರೆ, ಜನಸಂಖ್ಯೆ ಆಧಾರದ ಮೇಲೆ 1.5ಕೋಟಿ ಎಸ್ಸಿ, ಎಸ್ಟಿಯವರಿಗೆ ಮೀಸಲಾತಿ ಕಡಿಮೆಯಿದೆ. ರಾಜ್ಯದ 28 ಜಿಲ್ಲೆಗಳಲ್ಲಿ 50 ಲಕ್ಷದಷ್ಟು ವಾಲ್ಮೀಕಿ ಜನಾಂಗವಿದೆ. ವಾಲ್ಮೀಕಿ ಸಮುದಾಯದ ರಾಜ್ಯದಲ್ಲಿ ನಾಲ್ಕನೇ ಅತಿ ದೊಡ್ಡ ಸಮುದಾಯವಾಗಿದೆ. ಬಜೆಟ್‌ನಲ್ಲಿ 26 ಸಾವಿರ ಕೋಟಿ ರು.ಗಳನ್ನು ಮೀಸ ಲಿಡಲಾಗಿದೆ ಎಂದು ಹೇಳಲಾಗುತ್ತದೆ. ಆದರೆ, ಈ ಹಣದಲ್ಲಿ ಬಹುಪಾಲು ಹಣವನ್ನು ರಸ್ತೆ ಸೇರಿ ನಾನಾ ಕಾರ್ಯಗಳಿಗೆ ಮಾಡಲಾಗುತ್ತಿದೆ ಹೇಳಿದರು. ಕೊರೋನಾ ಸಂದರ್ಭದಲ್ಲಿ ನಮಗೆ ಮೀಸಲಾದ ಹಣವನ್ನು ಬಳಕೆ ಮಾಡಲಾಗಿದೆ. ಎಸ್ಸಿಪಿ ಟಿಎಸ್ಪಿ ಯೋಜನೆಯಡಿ ಅನ್ಯ ಉದ್ದೇಶಗಳಿಗೆ ಖರ್ಚು ಮಾಡಲಾಗುತ್ತಿದೆ. ಈ ಹಣ ಎಸ್ಸಿ ಹಾಗೂ ಎಸ್ಟಿ ಸಮುದಾಯವನ್ನು ತಲುಪುತ್ತಿಲ್ಲ. ಇಷ್ಟು ವರ್ಷಗಳಾದರೂ ಖರ್ಚು ಎಂದು ಜನಾಂಗದ ಬಡತನ ನಿವಾರಣೆಯಾಗುತ್ತಿಲ್ಲ.
ರಾಜ್ಯ ಸರ್ಕಾರ ಇಡೀ ಎಸ್ಸಿಪಿ ಹಾಗೂ ಟಿಎಸ್ಪಿ
ಯೋಜನೆಯಲ್ಲಿ ಖರ್ಚು ಮಾಡುವ
ಹಣವನ್ನು ನೇರವಾಗಿ ಸಮುದಾಯದ
ಜನುಗೆ ನೇರವಾಗಿ ನೀಡಲಿ. ಹೀಗೆ
ಮಾಡಿದಲ್ಲಿ ಪ್ರತಿ ಎಸ್ಸಿ, ಎಸ್ಟಿ ಜನರಿಗೆ
ಸುಮಾರು 25 ಲಕ್ಷ ರು.ಗಳನ್ನು ನೀಡಬೇಕು.
ಈ ರೀತಿಯಲ್ಲಿ ಸರ್ಕಾರ ಹಣ ನೀಡಿದರೆ ಇದೇ ಹಣದಿಂದ ಮನೆ ನಿರ್ಮಾಣ, ನೀರು ಸೇರಿ ಎಲ್ಲ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ಹೇಳಿದರು. 2014ರಲ್ಲಿ ಎಸ್ಸಿ ಜನಾಂಗ ಬೃಹತ್
ಪ್ರತಿಭಟನೆ ನಡೆಸಿತು. ಇದರಿಂದ ಎಚ್ಚೆತ್ತುಕೊಂಡಿದ್ದ ಜೆಡಿಎಸ್ ಸರ್ಕಾರ ನಿವೃತ್ತ
ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ರಚಿಸಿತ್ತು. ಸಮಿತಿ ವರದಿ ನೀಡಿ ಆರು ತಿಂಗಳಾದರೂ ತೀರ್ಮಾನ ಕೈಗೊಂಡಿಲ್ಲ. ಇದೀಗ ಸಚಿವ ಶ್ರೀರಾಮುಲು ನೇತೃತ್ವದ ಉಪ ಸಮಿತಿ ರಚಿಸಲಾಗಿದೆ. ವಾಲ್ಮೀಕಿ ಜಾತ್ರೆಯೊಳಗೆ ಘೋಷಣೆ ಮಾಡದಿದ್ದರೆ. ರಾಜನಹಳ್ಳಿಯಿಂದ ರಾಜಧಾನಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ರಾಜ ಮಲ್ಲಪ್ಪನಾಯಕ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ ಮಾತನಾಡಿದರು. ಜಿಪಂ ಸದಸ್ಯೆ ಎಚ್.ಪಿ.ಶಶಿರೇಖಾ, ಪಪಂ ಅಧ್ಯಕ್ಷ ಎನ್. ಮಹಾಂತಣ್ಣ, ಸದಸ್ಯರಾದ ಬಸಣ್ಣ ನಾಗರಾಜ್ ಸಮುದಾಯದ ಮುಖಂಡರಾದ ಹರ್ತಿಕೋಟೆ ಜಯಸಿಂಹ, ಜಿ.ತಿಪ್ಪೇಸ್ವಾಮಿ, ಕಾಕಸೂರಯ್ಯ,
ಜಿ.ಬಿ.ಮುದಿಯಪ್ಪ, ಜಿ.ವೈ.ತಿಪ್ಪೇಸ್ವಾಮಿ,
ಬೋರಸ್ವಾಮಿ, ಬಿ.ಶಿವಣ್ಣ ಮತ್ತಿತರರಿದ್ದರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;