;

ವೇತನ ಹಾಕದ ಅಧಿಕಾರಿಗಳು, ಹೊರಗುತ್ತಿಗೆ ಅಡುಗೆ ಸಿಬ್ಬಂದಿಗಳ ಪರದಾಟ…!!!

ವರದಿ. ಧನಂಜಯ್ ಹಡಗಲಿ
ವೇತನ ಹಾಕದ ಅಧಿಕಾರಿಗಳು, ಹೊರಗುತ್ತಿಗೆ ಅಡುಗೆ ಸಿಬ್ಬಂದಿಗಳ ಪರದಾಟ
ಹೂವಿನಹಡಗಲಿ: ತಾಲೂಕಿನ ಅನೇಕ ಹಾಸ್ಟೆಲ್ ಗಳು ಕತ್ತೆಬೆನ್ನೂರು, ಮಾಗಳ, ನಾಗತಿಬಸಾಪುರ, ಸೋಗಿ, ಹೊಳಲು, ಬೂದನೂರು, ಹಡಗಲಿ ಪಟ್ಟಣದಲ್ಲಿ ಇರುವ ಹಾಸ್ಟೆಲ್ ಗಳಿಗೆ ಹೊರಗುತ್ತಿಗೆ ಅಡುಗೆ ಸಿಬ್ಬಂದಿಗಳನ್ನು ಹಾಕಿರುವುದಿಲ್ಲ. ಲಾಕ್ ಡೌನ್ ಅವಧಿಯಿಂದ ಹಿಡಿದು, ಇಲ್ಲಿಯ ತನಕ ಅಡುಗೆ ನೌಕರರು, ಹೊಟ್ಟೆಗೆ ಏನೂ ಊಟ ಮಾಡುತ್ತಾರೆಂದು ಚಿಂತನೆ ಮಾಡದೇ ಇರುವುದು ವಿಷಾದದ ಸಂಗತಿ.                                         ಇದ್ದ ಕೆಲಸ ನೆಚ್ಚಿಕೊಂಡು, ಈಗ ನಮ್ಮನ್ನು ಕರೆಯಬಹುದು, ಆಗ ಕರೆಯುತ್ತಾರೆ ಎಂದು ಅಂದುಕೊಂಡರೆ ಮುಗೀತು. ಇವರ ಪರಿಸ್ಥಿತಿ ಅರ್ಥೈಸಿಕೊಳ್ಳಲು ಆಗದ ಸರ್ಕಾರ, ಆಶಾ ಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆಯರು, ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಂಬಳ ಹಾಕುವುದಕ್ಕೆ ಯಾವ ಮಾನದಂಡ ಅನುಸರಿಸಿ, ಸಂಬಳ ಹಾಕಿರುವುರೋ, ಹಾಗೆಯೇ ಹಾಸ್ಟೆಲ್ ಹೊರಗುತ್ತಿಗೆ ಅಡುಗೆ ಸಿಬ್ಬಂದಿಗಳಿಗೆ ಸಂಬಳ ಹಾಕಬೇಕೆಂದು ಇಲ್ಲಿನ ಹೊರಗುತ್ತಿಗೆ ಅಡುಗೆ ನೌಕರರು ತಮ್ಮ ಕಷ್ಟವನ್ನು ಪತ್ರಿಕೆಗೆ ತಿಳಿಸಿದ್ದಾರೆ. ಹಡಗಲಿ ತಾಲೂಕಿನ ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಯಾವ ರೀತಿ ಹೊರಗುತ್ತಿಗೆ ನೌಕರರ ಮೇಲೆ ಕಾಳಜಿ ಇದ್ದಾರೆಂದು ತಿಳಿಯುತ್ತದೆ.                       ಸರ್ಕಾರಿ ನೌಕರರ ಭವನದ ಕೆಳಗೆ ಇರುವ ಬಿಸಿಎಂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಇಂಜಿನಿಯರ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಹಾಕಿದ್ದು,13, ಹುಡುಗರಿಗೆ 6 ಜನ ಪರ್ಮನೆಂಟ್ ಅಡುಗೆ ಸಿಬ್ಬಂದಿ ಹಾಕಿದ ಬಿಸಿಎಂ ಅಧಿಕಾರಿ ಅಶೋಕ ಅವರು, ಹೊರಗುತ್ತಿಗೆ ಅಡುಗೆಯವರನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂಬುದು ತಿಳಿಯುತ್ತದೆ. ಅಲ್ಪಸಂಖ್ಯಾತರ ಬಿಸಿಎಂ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ 40 ಹುಡುಗರು ಇದ್ದಾರೆ ಅದಕ್ಕೆ 7 ಜನ ಇರುವ ಹೊರಗುತ್ತಿಗೆ ಸಿಬ್ಬಂದಿಗಳು, ಕೋವಿಡ್ ಸಮಯದಿಂದ ಹಿಡಿದು ಶರಣಪ್ಪ, ವಿರೂಪಾಕ್ಷ, ಸುಮಾ, ವಸಂತ, ಶಬೀನಾ ಭಾನು, ನಿಂಗಪ್ಪ, ಸಿದ್ದಲಿಂಗಯ್ಯ, ಹಾಸ್ಟೆಲ್ ವಾರ್ಡನ್ ಮಂಜುಳಾ ಸಿಬ್ಬಂದಿಗಳು ಇರುವುದು ಕಂಡು ಬರುತ್ತದೆ.                                      ಬಿಸಿಎಂ ತಾಲೂಕು ವಿಸ್ತರಣಾಧಿಕಾರಿ ಎಂಪಿಎಂ.ಅಶೋಕ ಅವರು ಕೆಲವರಿಗೆ ಸತತವಾಗಿ ಕೆಲಸ ನೀಡಿ, ಉಳಿದ ಹೊರಗುತ್ತಿಗೆ ನೌಕರರನ್ನು ದುಡಿಸಿಕೊಂಡು, ಸಂಬಳ ಹಾಕುವಲ್ಲಿ ನಿರ್ಲಕ್ಷ್ಯ ದೋರಣೆ ತಾಳಿದ್ದು ಸರಿಯಲ್ಲ ಎಂದು ಹೊರಗುತ್ತಿಗೆ ನೌಕರರಾದ ಶ್ರೀಮತಿ ಹೆಚ್.ಮಂಜುಳಾ,ದೇವಕ್ಕ, ಪಾರ್ವತಿ, ಲಲಿತವ್ವ, ಇತರೆ ಸಿಬ್ಬಂದಿಗಳು, ಕೊರೋನ ಸಮಯದಿಂದ ಹಿಡಿದು ವೇತನ ಹಾಕಿಲ್ಲ, ಇವರಿಗೆ ಕೆಲ್ಸ ಕೊಟ್ಟು,ನಮ್ಮನ್ನು ಬಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿ ಕೇಳುವಾಗ ಅವರ ಸಂಕಟ ಎದ್ದು ಕಾಣುತ್ತಿತ್ತು.   ಹೆಚ್. ಮಂಜುಳಾ ಮಾತನಾಡಿ “ಹೊರಗುತ್ತಿಗೆ ಅಡುಗೆಯವರು ಕೆಲಸ ಮಾಡಿ, ಮಾಡಿಟ್ಟ ಅಡುಗೆ ನೀಡಲು ಬರುವ ಸರ್ಕಾರಿ ನೇಮಕದ ಅಡುಗೆ ಸಿಬ್ಬಂದಿಗಳು, ಸೌಟ್ ಅಲ್ಲಾಡು ಸುವುದು, ಬಿಟ್ಟು,ಏನು ಕೆಲಸ ಮಾಡುತ್ತಾರೆ? ನಾವುಗಳು ಹಾಸ್ಟೆಲ್ ನ ಬಂಡೆ ಕ್ಲೀನ್ ಮಾಡಿ, ಕಸ ಗುಡಿಸುವುದಿಂದ ಹಿಡಿದು, ದೂಳ ಒಡೆಯುವುದು, ಕಸ ಮುಸುರಿ ತಿಕ್ಕಿ, ರಾತ್ರಿ ಎಂಟು ಗಂಟೆಗೆ ಮನೆಗೆ ಹೋಗುತ್ತೇವೆ. ಆದರೆ ಪರ್ಮನೆಂಟ್ ಸಿಬ್ಬಂದಿಗಳು ರೇಶನ್ ಕೊಡಲು ಮಾತ್ರ ಬೀಗ ಹಿಡಿದು ಬರುತ್ತಾರೆ. ಆನಂತರ ಹೊರಗಡೆ ಹೋದವರು ಮರಳಿ ಮಕ್ಕಳಿಗೆ ಊಟ ಹಾಕುವಾಗ ಹಾಜುರು ಆಗುತ್ತಾರೆ ಎಂದು ತಮ್ಮ ಕಷ್ಟವನ್ನು ಪತ್ರಿಕೆಗೆ ತೋಡಿಕೊಂಡರು.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;