ವರದಿ.ಮಂಜುನಾಥ್, ಎಚ್
ಚಿತ್ರದುರ್ಗ: ಮೊಳಕಾಲ್ಮುರು/ ತಾಲೂಕಿನ ಕೋನಸಾಗರ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಶ್ರೀನಿತ್ಯ ಸಾಂಭುವ ಟ್ರಸ್ಟ್‌ನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಗ್ರಾಮದ ನೂರಾರು ಮಹಿಳೆಯರು ಭಾಗವಹಿಸಿ ವಿವಿಧ ರೀತಿಯ ಬಣ್ಣ ಬಣ್ಣದ ರಂಗೋಲಿಸಿ ತಮ್ಮ ಕಲಾ ನೈಪುಣ್ಯ ಪ್ರದರ್ಶಿಸಿದರು. ಸ್ವಚ್ಛ ಪರಿಸರ, ಹಸಿರೀಕರಣ, ಪ್ಲಾಸ್ಟಿಕ್ ಮುಕ್ತ ಗ್ರಾಮ ಸೇರಿ ವಿವಿಧ ರೀತಿಯಲ್ಲಿ ರಂಗೋಲಿ ಬಿಡಿಸಿ ಜನಸಾಮಾನ್ಯರನ್ನು ಜಾಗೃತರನ್ನಾಗಿಸುವಂತ ಅರಿವಿನ ರಂಗೋಲಿಗಳು ನೋಡುಗರ ಗಮನ ಸೆಳೆದರು. ರಂಗೋಲಿ ಸ್ಪರ್ಧೆಯಲ್ಲಿ ಮಹೇಶಮ್ಮ ಪ್ರಥಮ ಬಹುಮಾನ ಗಾಯಿತ್ರಿ ಗೋವಿಂದರಾಜು, ದ್ವಿತಿಯಾ ಬಹುಮಾನ ಶಾರದ ವಿಜಯಕುಮಾರ್, ತೃತೀಯಾ ಸ್ಥಾನ ಪಡೆದರು. ಸಮಾಧಾನಕರ ಬಹುಮಾನ ಪಡೆದರು. ತಿರ್ಪುಗಾರರಾಗಿ ಎಸ್.ಎಂ.ಲಕ್ಷ್ಮೀಕಾಂತ ಚಾರಿ, ಬಿ.ಜಿ ನಾಗರಾಜ, ರಾಧಮ್ಮ, ದುರ್ಗಾಂಭಿಕ, ಗ್ರಾಪಂ ಸದಸ್ಯ ಮಲ್ಲಿಕಾರ್ಜುನ, ಯರಿಸ್ವಾಮಿ, ಚಂದ್ರಣ್ಣ, ಮಹಾಂತೇಶ, ಮಹೇಶ, ನೀಲ ರಾಜ, ದೇವರಾಜ, ತಿಪ್ಪೇಸ್ವಾಮಿ, ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
