ಸವದತ್ತಿ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ “ ಭೀಮ್ ದ್ವನಿ ಸಂಘಟನೆ ಸಭೆ ಅದ್ದೂರಿಯಾಗಿ ನೆರವೇರಲಾಯಿತು.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕು ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ *ಇಂದು ದಿನಾಂಕ: 02-08-2026 ರಂದು ದಲಿತ ಸಂಘರ್ಷ ಸಮಿತಿ – “ಭೀಮ ಧ್ವನಿ” ಸಂಘಟನೆಯ ಸವದತ್ತಿ ತಾಲೂಕು ಸಭೆಯು ಸವದತ್ತಿಯಲ್ಲಿ ಅದ್ದೂರಿಯಾಗಿ ಜರುಗಿತು.*
ಈ ಸಭೆಯನ್ನು ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರವರ ಜಿಲ್ಲಾ ಪ್ರವಾಸದ ವೇಳಾಪಟ್ಟಿಯ ಪ್ರಕಾರ ಆಯೋಜಿಸಲಾಗಿತ್ತು.
*ಈ ಸಭೆಯ ಅಧ್ಯಕ್ಷತೆಯನ್ನು* ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ *ಶ್ರೀ ಮಿಲಿಂದ್ ಐಹೊಳೆ* ಅವರು ವಹಿಸಿದ್ದರು.
**ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರಾದ
**ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ *ಶ್ರೀ ಬಸವರಾಜ ಕಟ್ಟಿಮನಿರವರು ಈ ಸಭೆಯನ್ನು ಉದ್ದೇಶಿಸಿ ಸಂಘಟನೆಯ ಪ್ರತಿ ಪಧಾಧಿಕಾರಿಗಳು ಗ್ರಾಮ ಹೋಬಳಿ ತಾಲೂಕು ಮಟ್ಟದಲ್ಲಿ ಅಚ್ಚುಕಟ್ಟಾಗಿ ಕೆಲಸಮಾಡಬೇಕು ಮಾತನಾಡಿದರು ರಾಜ್ಯ ಗೌರವಾಧ್ಯಕ್ಷರಾದ *ಶ್ರೀ ಮಹಾಲಿಂಗ ಗಗ್ಗರಿ* ರವರು ಡಾ // ಬಿ ಆರ್ ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳಿಗೆ ಕಟ್ಟುಬದ್ಧರಾಗಿ ತಾಲೂಕು ಅಧ್ಯಕ್ಷರು ಮಹಿಳಾ ಮತ್ತು ಪುರುಷ ತಾಲೂಕು ಅಧ್ಯಕ್ಷರು ಪ್ರತಿ ಗ್ರಾಮದ ಸಮುದಾಯದ ಕೇರಿಗಳಿಗೆ ಬೆಟ್ಟಿ ನೀಡಿ ಅಲ್ಲಿರುವ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸಮಾಡಬೇಕು ನೀವು ಒಬ್ಬ ಒಳ್ಳೆಯ ಉತ್ತಮ ನಾಯಕನಾಗಿ ಗುರುತಿಸಬೇಕು. ಹಣದ ಆಸೆಗೆ ಬಲಿಯಾಗಿ ನಿಮ್ಮ ನಾಯಕತ್ವ ಕಳೆದುಕೊಳ್ಳಬೇಡಿ ಶಿಕ್ಷಣ ಸಂಘಟನೆ ಹೋರಾಟ ಈ ಮೂರು ಸಿದ್ಧಾಂತ ಬದ್ಧರಾಗಿ ಮಕ್ಕಳಿಗೆ ಹಾಗೂ ಸಮುದಾಯಕ್ಕೆ ಜಾಗ್ರತೆ ಮೂಡಿಸುವ ಜವಾಬ್ದಾರಿ ಮತ್ತು ತಾಲೂಕಿನಲ್ಲಿ ನಡೆಯುವ ಭ್ರಷ್ಟಾಚಾರದ ವಿರುದ್ಧ ಹೊರಡಲು ಜನರ ದ್ವನಿಯಾಗಿ ನಿಲ್ಲಬೇಕು ಎಂದು ಮಾತನಾಡಿದರು.ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳಾದ *ಶ್ರೀ ಸಂತೋಷ್ ಗುಡ್ಡಪ್ಪನವರ* ರವರು ಪ್ರತಿ ಪದಾಧಿಕಾರಿಗಳು ಗ್ರಾಮ ಪಂಚಾಯತಗಳಿಗೆ ಭೇಟಿ ನೀಡಿ ನಮಗೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಿ ಗ್ರಾಮ ಪಂಚಾಯತ್ ಗಳಲ್ಲಿ ಸಿಗುವ ಅವಕಾಶಗಳನ್ನು ಬಳಿಸಿಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾನ್ಯ ರಾಜ್ಯಾದಕ್ಷರಾದ ಮಿಲಿಂದ್ ಐಹೋಳೆ ಯವರು ಸಭೆಯನ್ನು ಉದ್ದೇಶೀಸಿ ಮಾತನಾಡಿದರು.
ಉಪಸ್ಥಿತರಿದ್ದ ಗಣ್ಯರು:**
ರಾಜ್ಯ ಗೌರವಾಧ್ಯಕ್ಷರಾದ *ಶ್ರೀ ಮಹಾಲಿಂಗ ಗಗ್ಗರಿ* ರವರು
ರಾಜ್ಯ ಉಪಾಧ್ಯಕ್ಷರಾದ *ಶ್ರೀ ಬಸವರಾಜ ಕಟ್ಟಿಮನಿ* ರವರು
ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿಗಳಾದ *ಶ್ರೀ ಸಂತೋಷ್ ಗುಡ್ಡಪ್ಪನವರ* ರವರು ರಾಜ್ಯ ಮಹಿಳಾ ಕಾರ್ಯಾಧ್ಯಕ್ಷರಾದ *ಶ್ರೀಮತಿ ಸುನಿತಾ ಮೋದಗಿ* ರವರು
ರಾಜ್ಯ ಮಹಿಳಾ ಕೋಶಾಧ್ಯಕ್ಷರಾದ *ಶ್ರೀಮತಿ ವೀಣಾ ಹುಚ್ಚನಟ್ಟಿ* ರವರು
ಬೆಳಗಾವಿ ಜಿಲ್ಲಾ ಜಿಲ್ಲಾಧ್ಯಕ್ಷರಾದ *ಶ್ರೀ ಪ್ರಕಾಶ್ ಹೊಸಮನಿ* ರವರು ಮಹಿಳಾ ಜಿಲ್ಲಾಧ್ಯಕ್ಷರಾದ ಶ್ರೀ ಕುಮಾರಿ ಹನಮವ್ವ ಮರೆನ್ನವರ ಮತ್ತು
ಇನ್ನುಳಿದಂತೆ ಬೆಳಗಾವಿ ಜಿಲ್ಲಾ ಮಹಿಳಾ ಮತ್ತು ಪುರುಷ ಅಧ್ಯಕ್ಷರು ಹಾಗೂ ಸವದತ್ತಿ ತಾಲೂಕಿನ ಪುರುಷ ಮತ್ತು ಮಹಿಳಾ ತಾಲೂಕಾಧ್ಯಕ್ಷರುಗಳು, ಎಲ್ಲಾ ಪದಾಧಿಕಾರಿಗಳು, ಹಿರಿಯರು, ಸಮುದಾಯದ ಯುವಕರು ಹಾಗೂ ತಾಯಂದಿರು ಈ ಸಭೆಯಲ್ಲಿ ಬಹು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸವದತ್ತಿ ತಾಲೂಕಿನ ಸಭೆಯನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಶಿಸ್ತುಬದ್ಧವಾಗಿ ನಡೆಸಿದ ಎಲ್ಲಾ ಸವದತ್ತಿ ತಾಲೂಕಿನ ಕುಲಬಾಂಧವರಿಗೆ ಹಾಗೂ ತಾಯಂದಿರಿಗೆ ಸಂಘಟನೆಯ ವತಿಯಿಂದ ಹೃತ್ಪೂರ್ವಕ ವಂದನೆಗಳು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
