ಕೂಡ್ಲಿಗಿ ತಾಲ್ಲೂಕಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿರುವ ಬಗ್ಗೆ ಕೂಡ್ಲಿಗಿ ತಹಸೀಲ್ದಾರರಿಗೆ ದೂರು…!!!
ಕೂಡ್ಲಿಗಿ: ದಿನಾಂಕ 23.06.2026 ನೇ ಮಂಗಳವಾರ
ಪ್ರೊಫೆಸರ್ ಬಿ ಕೃಷ್ಣಪ್ಪ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ ) ನೋಂದಣಿ ಸಂಖ್ಯೆ 47/74.75 ವತಿಯಿಂದ ಬಡೇಲಡಕು ಗ್ರಾಮದ ವ್ಯಕ್ತಿಯೊಬ್ಬರಿಗೆ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದು ಒಳ ಮೀಸಲಾತಿ ಪಟ್ಟಿಯನ್ನು ನಿರ್ಲಕ್ಷಿಸಿ , ಪ್ರಮಾಣ ಪತ್ರ ನೀಡಿರುತ್ತಾರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾನ್ಯ ತಹಸೀಲ್ದಾರರಿಗೆ ದೂರನ್ನುನೀಡಲಾಯಿತು ಕೂಡ್ಲಿಗಿ ಹೊಬಳಿ
ಬಡೇಲಡಕು ಗ್ರಾಮದ ಶ್ರೀಮತಿ ಇಂದಿರಾ ಗುಂಡಪಲ್ಲಿ ಗಂಡ ವಿ ಅಪ್ಪೂಜಿ ಎಂಬುವವರು ಹಿಂದೂ
ಸಿದ್ದರು ಜಾತಿಗೆ ಸೇರಿದ ಮಹಿಳೆಗೆ ಪರಿಶಿಷ್ಟ ಜಾತಿಯ ಪ್ರ ವರ್ಗ ಎ ಗುಂಪಿನ
ಮಾದಿಗ ಜಾತಿ ಪ್ರಮಾಣ ಪತ್ರ ನೀಡಿದ್ದು. ಮತ್ತು ನಾಡಕಛೇರಿಯಲ್ಲಿನ ಎಲ್ಲಾ ಸೇವೆಗಳಿಗೆ 21 ದಿನಗಳ
ಕಾಲಮಿತಿಯಿದ್ದರೂ ಈ ಅರ್ಜಿಗೆ 06/04/2026 ರಿಂದ 06/06/2026 ರ ವರೆಗೆ ಅಂದರೆ 2 ತಿಂಗಳು
ಅವಧಿಯಲ್ಲಿ ಪ್ರಮಾಣ ಪತ್ರ ಅನುಮೋದನೆಯಾಗಿರುತ್ತದೆ. ಆ ಗ್ರಾಮದ ಗ್ರಾಮಲೆಕ್ಕಾಧಿಕಾರಿಗಳು
ಈ ಅರ್ಜಿಯನ್ನು ತಿರಸ್ಕರಿಸಿರುತ್ತಾರೆ ಅದರೆ ಕೂಡ್ಲಿಗಿ ಹೊಬಳಿ ಕಂದಾಯ ನಿರೀಕ್ಷಕರು ತಮ್ಮ ಪ್ರಭಾವ ಮತ್ತು
ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ
ಮಿಸಲಾತೀಯನ್ನು ಕಸಿದುಕೊಂಡು ಬೇರೆ ಜಾತಿಯವರಿಗೆ ನೀಡುವ ಪಿತೂರಿ ನಡೆಸಿದ್ದಾರೆಂದು ಹಾಗೂ ಅಲ್ಲಿನ
ಸಾರ್ವಜನಿಕ ರೊಂದಿಗೆ ಅನುಚಿತ ವರ್ತನೆ ತೋರುತ್ತಿದ್ದಾರೆ. ಹಾಗಾಗಿ ಈ
ಸಮುದಾಯಕ್ಕೆ ಅನ್ಯಾಯ ಮಾಡುವ ಹೆಚ್ಚಿನ ಸಂಭವವಿದೆ ಹಾಗಾಗಿ ಇವರನ್ನು ಈ ಕೂಡಲೇ ಈ ಹುದ್ದೆಯಿಂದ
ಅಮಾನತು ಮಾಡಬೇಕೆಂದು ಹಾಗೂ ಎಸ್ಸಿ ಜಾತಿ ಪ್ರಮಾಣಪತ್ರ ವನ್ನು ಪಡೆದುಕೊಂಡಿರುವಂತ ಇಂದಿರಾ
ಗುಂಡಪಲ್ಲಿ ಇವರ ವಿರುದ್ಧ ಸಹ ಕಾನೂನು ಕ್ರಮ ಜರಗಿಸಬೇಕು ಹಾಗೂ ಮಾದಿಗ
ಸಮುದಾಯದವರನ್ನು ಹಾಗೂ ಅವರ ಹಕ್ಕುಗಳನ್ನು ರಕ್ಷಿಸಬೇಕೆಂದು ಮಾನ್ಯ ತಹಶೀಲ್ದಾರರಿಗೆ ಪರಿಶೀಲನೆ ಮಾಡಿ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಸಂಚಾಲಕರಾದ ಎಸ್ ದುರುಗೇಶ್ ಕೂಡ್ಲಿಗಿ. ಜಿಲ್ಲಾ ಸಂಘಟನಾ ಸಂಚಾಲಕರಾದ ಕಂದಗಲ್ ಪರಶುರಾಮ್. ಡಿ ಹನುಮೇಶ್ ಗೆದ್ದಲಗಟ್ಟೆ.ಕೂಡ್ಲಿಗಿ ತಾಲೂಕು ಸಂಚಾಲಕ ಬಡೆಲಡಕು ದುರುಗೇಶ್. ತಾಲೂಕು ಸಂಘಟನಾ ಸಂಚಾಲಕರಾದ ಚೌಡಾಪುರ ಬಸವರಾಜ್. ಕಾನಾಮಡುಗು ಎನ್ ಪಕೀರಪ್ಪ. ಕೂಡ್ಲಿಗಿ ಬಿ ಮಹೇಶ.ಕೆ ಮೂಗಪ್ಪ. ಹೊಸಹಳ್ಳಿ ಕರಿಬಸಪ್ಪ. ಐಗಳ ಮಲ್ಲಾಪುರ ಹೆಚ್ ಜಿತೇಂದ್ರ. ರಮೇಶ್. ಕೂಡ್ಲಿಗಿ ಅಜಯ್ ಕುಮಾರ್. ಹಿರೇ ಹೆಗ್ಡಾಳ್ ಪಕೀರಪ್ಪ. ಕೂಡ್ಲಿಗಿ ಇ.ದುರುಗಪ್ಪ. ಜರ್ಮಲೆ ನಾಗರಾಜ್. ಪ್ರಜಾವಾಹಿನಿ ಪತ್ರಕರ್ತ ತಿಪ್ಪೇಸ್ವಾಮಿ ಕೂಡ್ಲಿಗಿ ಇನ್ನು ಇನ್ನು ಮುಂತಾದ ಪದಾಧಿಕಾರಿಗಳು ಹಾಜರಿದ್ದರು .
ವರದಿ: ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
