ಗ್ರಾಮ ಪಂಚಾಯತಿಯಲ್ಲಿ ನರೇಗಾ ಕೂಲಿ ಕಾರ್ಮಿಕರ ಕಳಿಲಿ ಸರಿಪಡಿಸಲು ಕಾರ್ಮಿಕರ ಆಗ್ರಹ…
ಸಂಡೂರು ತಾಲೂಕು ವಿಠಲಪುರ ಗ್ರಾಮ ಪಂಚಾಯತಿಯಲ್ಲಿ ನರೇಗಾ ಕೂಲಿ ಕಾರ್ಮಿಕರ ಕೂಲಿ ನೀಡುವ ವಿಷಯದಲ್ಲಿ ತಾರತಮ್ಯವಾಗಿದೆ ಎಂದು ಕೂಲಿ ಕಾರ್ಮಿಕರು ಆರೋಪಿಸಿದರು. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನೂರು ದಿನಗಳ ಕಾಲ ಕೂಲಿ ಕಾರ್ಮಿಕರಿಗೆ ಕೂಲಿ ನೀಡುವುದಾಗಿ ಸರ್ಕಾರ ಆದೇಶದ ಪ್ರಕಾರ ನರೇಗಾ ಕೂಲಿ ಕಾರ್ಮಿಕರ ಕೆಲಸ ಮತ್ತು ವೇತನದಲ್ಲಿ ತಾರತಮ್ಯವನ್ನು ಮಾಡಿದ್ದು ಸರಿಪಡಿಸಲು ಕಾರ್ಮಿಕರು ಆಗ್ರಹಿಸಿದರು. ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಇವರಿಗಳಿಂದ ಕೂಲಿ ಕಾರ್ಮಿಕರ ಗುಂಪುಗಳಿಗೆ ಗುಂಪು ಗುಂಪಿನ ಮಧ್ಯೆ ವೇತನ ತಾರತಮ್ಯ ಉಂಟಾಗಲು ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಗಳು ಕಾರಣ ಎಂದು ನೇರವಾಗಿ ಆರೋಪ ಮಾಡಿದರು. ಆಳುಗಳ ಸಂಖ್ಯೆ ಮತ್ತು ವೇತನದಲ್ಲಿ ತಾರತಮ್ದ ವಿಷಯ ಕಾರ್ಮಿಕರಲ್ಲಿ ದುಃಖವನ್ನುಂಟು ಮಾಡಿದೆ. ಕಾರ್ಮಿಕರು ಮಾಧ್ಯಮದ ಮುಂದೆ ತಮ್ಮ ನೋವನ್ನು ಹೇಳಿಕೊಂಡರು. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಂದ ಮೇಟಿ ಮೇಟಿಗಳ ಮಧ್ಯೆ ಗುಂಪು ಗುಂಪುಗಳ ಬಗ್ಗೆ ಭೇದಭಾವ ಉಂಟಾಗುತ್ತದೆ. ಒಬ್ಬ ಮೇಟಿಯ ಗುಂಪಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಿ ಇನ್ನೊಂದು ಗುಂಪಿನ ಮೇಟಿಯ ಗುಂಪಿಗೆ ಸ್ಪಂದಿಸದೆ ಇರುವುದು ನಮಗೆ ನೋವಾಗಿದೆ ಇದನ್ನು ಕೂಡಲೇ ಸರಿಪಡಿಸಬೇಕಾಗಿ ಮನವಿ ಮಾಡಿದರು. ನರೇಗಾ ಇಂಜಿನಿಯರ್ ರವರೂ ಕೂಡ ನಮ್ಮೆಲ್ಲರನ್ನ ಸರಿಸಮನಾಗಿ ನೋಡದೆ ಭೇದಭಾವ ಮಾಡಿದ್ದಾರೆ.ಎಲ್ಲರೂ ಕೂಲಿ ಮಾಡಿದ್ದು. ಪ್ರತಿದಿನ ಜಿಪಿಎಸ್ ಫೋಟೋಗಳನ್ನು ಹಾಕಿದ್ದು ಇದೆಲ್ಲ ಮಾಡಿದರು ಸಹ ನಮ್ಮ ಗುಂಪಿನ ಕಾರ್ಮಿಕರಿಗೆ ಸರಿಯಾದ ಕೂಲಿ ನೀಡದೆ ಅದರಲ್ಲಿ ಒಬ್ಬರಿಗೆ ರೂ.350, 275,250, ಈ ರೀತಿಯಾಗಿ ವೇತನದಲ್ಲಿ ಇಂಜಿನಿಯರ್ ರವರು ತಾರತಮ್ಯ ಮಾಡಿರುವುದು ಕಂಡು ಬಂದಿರುವುದು ನಮ್ಮತ್ರ ದಾಖಲೆ ಇದೆ ಎಂದು ಮಾಧ್ಯಮದಲ್ಲಿ ಮುಂದೆ ಅಳಲು ತೋರಿಸಿದರು. ಪಂಚಾಯತಿಯ ಕೆಲವರ ಸಿಬ್ಬಂದಿಯಿಂದ ನಮಗೆ ಬಾರಿ ತೊಂದರೆಯಾಗಿದ್ದು ಇವರನ್ನು ಕೂಡಲೇ ಕೆಲಸದಿಂದ ತೆಗೆದು ಬದಲಾವಣೆ ಮಾಡಬೇಕಾಗಿ ವಿನಂತಿ ಮಾಡಿದರು.. ಮತ್ತು ಕೂಲಿ ಕಾರ್ಮಿಕರ ಸಮಸ್ಯೆಯನ್ನು ಆಲಿಸಿದ ರೈತರ ಸಂಘದ ಅಧ್ಯಕ್ಷರು ಶಂಕರ್ ಅವರು ಕೂಲಿ ಕಾರ್ಮಿಕರಿಗೆ ಆದಂತ ಅನ್ಯಾಯವನ್ನ ನಾವು ಸಹಿಸುವುದಿಲ್ಲ ಎಂದು. ಪಂಚಾಯಿತಿ ಮುಂದೆ ಕಾರ್ಮಿಕರೊಂದಿಗೆ ಸ್ವಲ್ಪ ಸಮಯದ ವರೆಗೂ ಪ್ರತಿಭಟಿಸಿದರು. ಮತ್ತು ಅಧಿಕಾರಿಗಳು 12 ಗಂಟೆಯಾದರೂ ಅಧಿಕಾರಿಗಳ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ರೀತಿಯಾಗಿ ಭೇದಭಾವವನ್ನು ಮಾಡಬಾರದು ಎಂದು ಎಚ್ಚರಿಕೆ ನೀಡಿದರು. ಇವರು ಬಡ ಕಾರ್ಮಿಕರು ಸರ್ಕಾರ ಆದೇಶಿಸಿದ ಪ್ರಕಾರ ಎಲ್ಲರಿಗೂ ಸಮಾನ ಕೂಲಿ ಸಮಾನ ವೇತನ ಅನ್ನುವಂತ ಉದ್ದೇಶವನ್ನು ಅಧಿಕಾರಿಗಳು ಮನಸ್ಸಿನಲ್ಲಿ ಇಟ್ಟುಕೊಂಡು ಇವರಿಗೆ ನ್ಯಾಯವನ್ನು ಒದಗಿಸಬೇಕು ಇಲ್ಲದಿದ್ದರೆ ಮುಂದಿನ ಹೋರಾಟ ನಾವೆಲ್ಲರೂ ಕೂಡ ಸೇರಿಕೊಂಡು ತಾಲೂಕ್ ಪಂಚಾಯತ್ ಕಾರ್ಯಾಲಯದ ಮುಂದೆ ಪ್ರತಿಭಟಿಸಲು ತಯಾರಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಊರಿನ ಗ್ರಾಮಸ್ಥರು ಕಾರ್ಮಿಕ ಮೇಟಿಗಳು ಭಾಗವಹಿಸಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
