ಪತಂಜಲಿ ಯೋಗ ಸಂಸ್ಥೆ ,ಪತ್ರಕರ್ತ ಸಂಘಗಳಿಂದ 12ನೇ ವರ್ಷದ ಯೋಗ ದಿನಾಚರಣೆ…
ಹೊನ್ನಾಳಿಯ ಪಟ್ಟಣದಲ್ಲಿರುವ ಶ್ರೀ ಹಿರೇಕಲ್ಮಠದ ಆವರಣದಲ್ಲಿ ಇಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಶ್ರೀ ಷ,ಬ್ರ ಶ್ರೀ ಒಡೆಯರ್ ಡಾಕ್ಟರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮತ್ತು ಮಾಜಿ ಸಚಿವರಾದ ಎಂಪಿ ರೇಣುಕಾಚಾರ್ಯ ಮತ್ತು ಪತಂಜಲಿ ಯೋಗ ಸಂಸ್ಥೆಯ ಪ್ರಕಾಶ್ ಹೆಬ್ಬಾರ್, ಮಾಜಿ ಸೈನಿಕ ಸಂಘದ ಅಧ್ಯಕ್ಷರಾದ ವಾಸಪ್ಪ,, ಆಯುರ್ವೇದ ವೈದ್ಯರಾದ ಜಿತೇಂದ್ರ ಬಿಸಾಟಿ, ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ,ಡಾ,ಒಡೆಯರ್ ಷ,ಬ್ರ,ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯಮಹಾಸ್ವಾಮಿಗಳು ಆರೋಗ್ಯ ಭಾಗ್ಯ ಉತ್ತಮ ಆರೋಗ್ಯಕ್ಕೆ ಪ್ರತಿದಿನ ಯೋಗ ಮಾಡಿ ಆರೋಗ್ಯವಂತರಾಗಿರಿ ಇಂದಿನ ಯುವಕರು ಯೋಗಭ್ಯಾಸವನ್ನು ಮರೆತೆ ಬಿಟ್ಟಿದ್ದಾರೆ ಬೆಳಗಾಯಿತು ಎಂದರೆ ಮೊಬೈಲ್ ಬಿಟ್ಟರೆ ಜೀವನವೇ ಇಲ್ಲ ಹಾಗೆಯೇ ಹಲವಾರು ದುಶ್ಚಟಗಳ ದಾಸರಾಗಿದ್ದಾರೆ ,
ಯೋಗ ಮಾಡಿದರೆ ಅಂತ ದುಶ್ಚಟಗಳಿಂದ ಮನಸಿಗೆ ಕಡಿವಾಣಹಾಕಬಹುದು ಎಂದು ತಿಳಿಸಿದರು ಪತಂಜಲಿ ಯೋಗ ಸಂಸ್ಥೆಯ. ತಾಲುಕು ಅಧ್ಯಕ್ಷರಾದ ಪ್ರಕಾಶ್ ಹೆಬ್ಬಾರ್ ಮಾತನಾಡಿ ಆರೋಗ್ಯವಂತ ಮನುಷ್ಯ ಯೋಗ ಮಾಡಬೇಕು ಜೀವನದಲ್ಲಿ ನೆಮ್ಮದಿಯಾಗಿ ಮತ್ತು ಲವಲವಿಕೆಯಿಂದ ಇರಬೇಕೆಂದರೆ ಪ್ರತಿದಿನ ಬೆಳಿಗ್ಗೆ ಯೋಗ ಪ್ರಾಣಾಯಾಮ ಮಾಡಿದರೆ ಮನುಷ್ಯನ ಪ್ರತಿದಿನ ಲವಲವಿಕೆಯಿಂದ ಮನಸ್ಸು ಶಾಂತವಾಗಿ ಇರುತ್ತದೆ ಎಂದು ತಿಳಿಸಿದರು
ಡಾ,ಜೀತೆಂದ್ರ ಮಾತನಾಡಿ ಮಿತ ಆಹಾರ ಸೇವನೆ ಮಧ್ಯಾಹ್ನ ನಿದ್ರೆ ಮಾಡಬಾರದು ಮನುಷ್ಯ ಆರೋಗ್ಯವಾಗಿರಲು 8 ತಾಸು ನಿದ್ರೆ ಸಾಕು, ಯೋಗದಿಂದ ಅನೇಕ ಉಪಯೋಗವಿದ್ದು ನಾವುಗಳು ಪ್ರತಿದಿನ ಯೋಗ ಮಾಡಿ ಆರೋಗ್ಯವಂತರಾಗಿರಬೇಕು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಂಸ್ಥೆಯ ಎಲ್ಲಾ ಸದಸ್ಯರು ಮತ್ತು ಅನೇಕ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
