ಚಿಕ್ಕೋಡಿ ನಗರದಲ್ಲಿ ಭೀಮ ದ್ವನಿ ಸಂಘಟನೆ ವತಿಯಿಂದ ಭ್ರಷ್ಟಾಚಾರ ವಿರುದ್ಧ ಪೂರ್ವ ಬಾವಿ ಸಭೆ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ನೆರವೇರಲಾಯಿತು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕು ಇಂದು ದಿನಾಂಕ 21/06/2026 ರಂದು ಲೋಕೋಪಯೋಗಿ ಇಲಾಖೆಯ ಪ್ರವಾಸಿಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ ಭೀಮ ದ್ವನಿ ಸಂಘಟನೆಯ ಸಭೆಯಲ್ಲಿ ಚರ್ಚಿಸಿಸಾಲದ ವಿಷಯ ಗಳು.
1) ಪ್ರತಿ ಗ್ರಾಮಗಳಲ್ಲಿ ಗ್ರಾಮ ಘಟಕ ಮಾಡುವುದು ಡಾ // ಬಿ ಆರ್ ಅಂಬೇಡ್ಕರ್ ರವರ ತತ್ವ ಸಿದ್ಧಾಂತಗಳಲ್ಲಿ ಮಾರ್ಗದರ್ಶನ ನೀಡುವುದು
2) ಗ್ರಾಮ ಪಂಚಾಯತ್ ಮಟ್ಟದಲ್ಲಿ ಎಸ್ ಸಿ ಎಸ್ ಟಿ ಜನಾಂಗದ ಅನುದಾನ ದುರ್ಬಳಕೆ ವಿರುದ್ಧ ವಗ್ಗಟಾಗಿ ದ್ವನಿ ಎತ್ತುವುದು.
3) ಮಹಿಳೆ ಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯ ಕ್ಕೆ ಒಳಗಾದ ವ್ಯಕ್ತಿಗೆ ನ್ಯಾಯ ಸಿಗುವವರೆಗೆ ಅವರ ಜೊತೆ ನಿಲ್ಲುವುದು.
4) ಲೋಕೋಪಯೋಗಿ ಇಲಾಖೆ , ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ , ಸಣ್ಣ ನೀರಾವರಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಇನ್ನೂ ಅನೇಕ ಸರ್ಕಾರಿ ಇಲಾಖೆಯ ಭ್ರಷ್ಟಾಚಾರ ದ ವಿರುದ್ಧ ಹೋರಾಟ ಮಾಡುವುದು.
5) ಎಸ್ ಸಿ ಎಸ್ ಟಿ ನೌಕರರ ಮೇಲೆ ನಡೆಯುವ ಅನ್ಯಾಯ ಹಾಗೂ ದಬ್ಬಾಳಿಕೆ ಕಂಡಿಸುವುದು.ಇನ್ನೂ ಅನೇಕ ಮುಖ್ಯ ವಾದ ವಿಷಯಗಳನ್ನು ಚರ್ಚಿಸಲಾಯಿತು.
ಹಾಗೂ ಚಿಕ್ಕೋಡಿಯಲ್ಲಿ ಈ ಸಭೆಯನ್ನು ಉದ್ದೇಸಿಸಿ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಬಸವರಾಜ್ ಕಟ್ಟಿಮನಿಯವರು ಸಂಘಟನೆಯ ಕುರಿತು ಮಾತನಾಡಿದರು. ಸಂಘಟನೆಯ ಸಂಸ್ಥಾಪಕರು /ರಾಜ್ಯಾಧ್ಯಕ್ಷರಾದ ಶ್ರೀ ಮಿಲಿಂದ್ ಐಹೋಳೆಯವರು ಸಭೆ ಕುರಿತು ಮತ್ತು ಸಂಘಟನೆ ಕಟ್ಟುವ ಕುರಿತು ಪ್ರತಿಯೊಬ್ಬ ಪದಾಧಿಕಾರಿಗಳು ತಾಲೂಕು ಮಟ್ಟದ ಸಂಘಟನೆ ಎಲ್ಲ ಪದಾಧಿಕಾರಿಗಳ ನೇಮಕಾತಿ ಪೂರ್ತಿ ಗೊಳಿಸಿ ಮತ್ತು ಜಿಲ್ಲಾ ಸಮಿತಿ ಅಖಂಡ ಬೆಳಗಾವಿ ಮತ್ತು ಚಿಕ್ಕೋಡಿ ಈ ಎರಡು ಕ್ಷೆತ್ರಗಳನ್ನು ಗಟ್ಟಿಯಾದ ಸಂಘಟನೆ ಕಟ್ಟಿಬೇಕು ಎಂದು ಎಲ್ಲ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಗೌರವಧ್ಯಕ್ಷರಾದ ಮಹಾಲಿಂಗ ಎಚ್ ಗಗ್ಗರಿ ಯವರು ಸಂಘಟನೆಯ ಕುರಿತು ಮತ್ತು ಎಲ್ಲ ಪದಾಧಿಕಾರಿಗಳಿಗೆ ತಾಲೂಕು ಮತ್ತು ಜಿಲ್ಲಾ ಕಮಿಟಿಯನ್ನು ಪೂರ್ಣ ಗೊಳಿಸಿ ಮತ್ತು ಭ್ರಷ್ಟಾಚಾರದ ವಿರುದ್ಧ ಹೊರಡಲು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಗೌರವಧ್ಯಕ್ಷರಾದ ಮಹಾಲಿಂಗ ಎಚ್ ಗಗ್ಗರಿ ಯವರು ಸಂಘಟನೆಯ ಕುರಿತು ಮತ್ತು ಎಲ್ಲ ಪದಾಧಿಕಾರಿಗಳಿಗೆ ತಾಲೂಕು ಮತ್ತು ಜಿಲ್ಲಾ ಕಮಿಟಿಯನ್ನು ಪೂರ್ಣ ಗೊಳಿಸಿ ಮತ್ತು ಭ್ರಷ್ಟಾಚಾರದ ವಿರುದ್ಧ ಹೊರಡಲು ಕರೆ ನೀಡಿದರು.
ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಮಿಲಿಂದ್ ಐಹೋಳೆ, ರಾಜ್ಯ ಗೌರವಧ್ಯಕ್ಷರಾದ ಮಹಾಲಿಂಗ ಎಚ್ ಗಗ್ಗರಿ, ರಾಜ್ಯ ಉಪಾಧ್ಯಕ್ಷರು ಬಸವ ರಾಜ್ ಕಟ್ಟಿಮನಿ, ಸುನಿತಾ ಮೊದಗಿ, ವೀಣಾ ಹುಚ್ಚನಟ್ಟಿ, ಬೆಳಗಾವಿ ಜಿಲ್ಲಾಧ್ಯಕ್ಷರಾದ ಪ್ರಕಾಶ್ ಹೊಸಮನಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಧ್ಯಕ್ಷರು ಮುಕೇಶ್ ಲಂಬುಗೋಳ ಎಲ್ಲ ಮಹಿಳಾ ಜಿಲ್ಲಾ ತಾಲೂಕು ಅಧ್ಯಕ್ಷರು ಮತ್ತು ಪುರುಷ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಕಮಿಟಿಯ ಎಲ್ಲ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ : ಮಹಾಲಿಂಗ ಎಚ್ ಗಗ್ಗರಿ ಜಿಲ್ಲಾ ವರದಿಗಾರರು ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
