ತಮ್ಮಯ್ಯಗುಡ್ಡ ಗ್ರಾಮ ಇಡೀ ಊರಿಗೆ ಊರೇ ಖಾಲಿ ಖಾಲಿ..!
ಕೂಡ್ಲಿಗಿ ತಾಲೂಕಿನ ತಮ್ಮಯ್ಯಗುಡ್ಡ ಗ್ರಾಮದಲ್ಲಿ ಜರುಗಿದ ಗ್ರಾಮದೇವತೆಗಳಾದ ಶ್ರೀ ಗುಳೇವು ಮಾರಮ್ಮ ಮತ್ತು ಸುಂಕ್ಲಮ್ಮದೇವಿಯ ಜಾತ್ರೆ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಯಿತು ಜಾತ್ರೆ ಸಂಪ್ರದಾಯ ಪಾಲನೆ ಹಿನ್ನೆಲೆಯಲ್ಲಿ ಒಂದು ದಿನದ ಮಟ್ಟಿಗೆ ಇಡೀ ಊರಿನ ಸುತ್ತ ಮುಳ್ಳುಬೇಲಿ ಹಾಕಿ ಗ್ರಾಮಸ್ಥರು, ದನಕರು, ಕುರಿ, ಮೇಕೆ, ಕೋಳಿ, ನಾಯಿಯೊಂದಿಗೆ ಗಂಟು ಮೂಟೆ ಕಟ್ಟಿಕೊಂಡು ಊರು ಖಾಲಿಮಾಡಿದರು.
ಗ್ರಾಮದ ಹೊರವಲಯದ ಹಳ್ಳದ ದಂಡೆಯಲ್ಲಿರುವ ಬೇವಿನ ಮರದ ಹತ್ತಿರ ಗ್ರಾಮ ದೇವತೆಯೊಂದಿಗೆ ಆಗಮಿಸಿದ ಜನರು ಅಲ್ಲಿಯೇ ಹಬ್ಬ ಆಚರಿಸುತ್ತಾರೆ ಮಹಿಳೆಯರು ಬುಟ್ಟಿಯಲ್ಲಿ ತಂದಿದ್ದ ರೊಟ್ಟಿ ಕಾಯಿಪಲ್ಲೆ, ಪಾಯಸ, ಅನ್ನಸಾಂಬಾರ್, ಸೇರಿ ವಿವಿಧ ತಿನಿಸು ತಯಾರಿಸಿ ಊಟ ಸವಿಯುತ್ತಾರೆ.
ಗ್ರಾಮದ ಮುಖಂಡರು ಸೇರಿ ಚಿಕ್ಕರಥ ನಿರ್ಮಿಸಿ ಅದರಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಸಮೀಪದ ಬೇವಿನ ಮರದ ಹತ್ತಿರ ಪ್ರತಿಷ್ಠಾಪಿಸುತ್ತಾರೆ
ಈ ದೇವಿಯ ವಿಶೇಷತೆ ಏನಂದ್ರೆ ಜಾತ್ರೆಯ ದಿನ ಗ್ರಾಮದಲ್ಲಿ ಯಾರೂ ಕೂಡ ಇರೋದಿಲ್ಲ. ಮನೆಗಳಿಗೆ ಬೀಗ ಹಾಕಿಕೊಂಡು, ಹತ್ತಾರು ಬಗೆಯ ಸಿಹಿ ತಿಂಡಿ, ತಿನಿಸುಗಳು ಮಾಡಿಕೊಂಡು ಗ್ರಾಮದ ವರವಲಯದ ಬೇವಿನ ಮರದ ಬಳಿ ಮರದ ನೆರಳನ್ನು ಆಶ್ರಯಿಸುತ್ತಾರೆ. ಜಾತ್ರೆಗೆ ಬಂದ ಬೀಗರು ಕೂಡ ಇಲ್ಲಿಯೇ ಉಳಿಯುತ್ತಾರೆ. ಊರ ಹೊರಗಡೆಯೇ ಅಡುಗೆ ಹಬ್ಬದ ಊಟ ಸವಿಯುತ್ತಾರೆ.
ನಂತರ ದೇವಿಯ ಕೆಂಡಾರಾಧನೆ ಪೂಜೆ ನೆರೆವೇರಿಸುತ್ತಾರೆ
ಪುರಾತನ ಕಾಲದಿಂದ ಸಂಪ್ರದಾಯದಂತೆ ಗ್ರಾಮಸ್ಥರು ಪೂರ್ಣಗೊಳಿಸಿದರು.
ಸೂರ್ಯಾ ಕೆಂಪನೆ ಜಾರುವ ಸಮಯಕ್ಕೆ ಗ್ರಾಮಸ್ಥರು, ತಮ್ಮ ತಮ್ಮ ಮನೆಗಳಿಗೆ ದನಕರುಗಳೊಂದಿಗೆ ಮರಳುತ್ತಾರೆ
ಪ್ರತಿ ಮೂರು ವರ್ಷಗಳಿಗೊಮ್ಮೆ ಜರುಗುವ ಈ ವಿಶೇಷ ಜಾತ್ರೆಯಲ್ಲಿ ಸ್ಥಳೀಯ ಸಂಪ್ರದಾಯ ಮತ್ತು ಬುಡಕಟ್ಟು ಸಾಂಸ್ಕೃತಿಕ ಆಚರಣೆಯ ಪದ್ಧತಿಯನ್ನು ಚಾಚೂ ತಪ್ಪದೇ ಪಾಲಿಸಲಾಗುತ್ತದೆ. ಮುಂದಿನ ಪೀಳಿಗೆಗೂ ಹಿಂದಿನ ಸಂಪ್ರದಾಯ, ಆಚಾರ, ವಿಚಾರಗಳನ್ನು ಪರಿಚಯಿಸುವುದು ಆಚರಣೆ ಉದ್ದೇಶವಾಗಿದೆ. ಗ್ರಾಮದಲ್ಲಿ ಬುಡಕಟ್ಟು ಬೇಡರು, ದಲಿತರು ಹಾಗೂ ಮೂರು ಮುಸ್ಲಿಂ ಕುಟುಂಬಗಳು ಸೇರಿ 200ಕ್ಕೂ ಹೆಚ್ಚು ಮನೆಗಳಿವೆ.
ಎಲ್ಲಾ ಸಮುದಾಯದವರು ಏಕತೆಯಿಂದ ಡೊಳ್ಳು ವಾದ್ಯ ಗಳೊಂದಿಗೆ ಶ್ರೀ ಗುಳೇವು ಮಾರಮ್ಮ ಮತ್ತು ಸುಂಕ್ಲಮ್ಮದೇವಿಯ ಆಶೀರ್ವಾದ ಪಡೆದು ಗಮನ ಸೆಳೆದರು…
ವರದಿ: ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
