ನಗರಾಭಿವೃದ್ಧಿಪೌರಾಡಳಿತನಿರ್ದೇಶನಾಲಯವ್ಯಾಪ್ತಿ
ನಗರಸಭೆ ಕಾರ್ಯಾಲಯದಿಂದ ಸೆಪ್ಟಂಬರ್ 17ರಿಂದ
ಅಕ್ಟೋಬರ್ 2ರವರೆಗೆ ಸ್ವಚ್ಚತೆಯೇಸೇವೆ ಕಾರ್ಯಕ್ರಮ
ನಗರಸಭೆ ಸದಸ್ಯರಾದ ಪೌರಾಯುಕ್ತರಾದ ಎ.ವಾಸೀಂ
ಹಿರಿಯೂರು:
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದಂತೆ ನಗರ ಅಭಿವೃದ್ಧಿ ಪೌರಾಡಳಿತ ನಿರ್ದೇಶನಾಲಯದ ವ್ಯಾಪ್ತಿಯ ನಗರಸಭೆ ಕಾರ್ಯಾಲಯ ಹಿರಿಯೂರು ವತಿಯಿಂದ ಸೆಪ್ಟಂಬರ್ 17 ರಿಂದ ಅಕ್ಟೋಬರ್ 2ರವರೆಗೆ ಸ್ವಚ್ಚತೆಯೇ ಸೇವೆ ಸ್ವಚ್ಚತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ನಗರಸಭೆ ಸದಸ್ಯರಾದ ಪೌರಾಯುಕ್ತರಾದ ಎ.ವಾಸೀಂ ಅವರು ಹೇಳಿದರು.
ನಗರದ ರಾಷ್ಟ್ರೀಯ ಅಕಾಡೆಮಿ ಶಾಲೆಯ ಹತ್ತಿರ ಸ್ವಚ್ಚತೆಯ ಕಾರ್ಯಕ್ರಮಕ್ಕೆ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಡಿ.ಸಣ್ಣಪ್ಪ, ಸ್ವಚ್ಚತಾ ಆಂದೋಲನಾ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಆಂದೋಲನಕ್ಕೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಾರ್ವಜನಿಕರು ರಸ್ತೆಯ ಅಕ್ಕಪಕ್ಕ ಚರಂಡಿಗೆ ಕಸ ಹಾಕಬಾರದು. ಪ್ರತಿನಿತ್ಯ ಸಾರ್ವಜನಿಕರು ಮನೆಯ ಸುತ್ತಮುತ್ತ ಸ್ವಚ್ಚತೆ ಕಾಪಾಡಿಕೊಳ್ಳಬೇಕು.ಸ್ವಚ್ಚತೆ ಕಾಪಾಡಿಕೊಳ್ಳುವುದರಿಂದ ಯಾವುದೇ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ. ಒಳ್ಳೆಯ ವಾತಾವರಣ ಕಾಪಾಡಿಕೊಳ್ಳುವುದರ ಜೊತೆಗೆ ಪೌರಕಾರ್ಮಿಕರ ಕಾರ್ಯಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂಬುದಾಗಿ ಅವರು ಹೇಳಿದರು.
ಸ್ಥಾಯಿಸಮಿತಿ ಅಧ್ಯಕ್ಷರಾದ ಎಂ.ಡಿ.ಸಣ್ಣಪ್ಪ ಅವರು ಮಾತನಾಡಿ ನಗರದ ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಸಾರ್ವಜನಿಕರು ಕೈಜೋಡಿಸಬೇಕು. ಕಸವನ್ನು ಸಿಕ್ಕಸಿಕ್ಕಲ್ಲಿ ಹಾಕಬಾರದು. ಪ್ರತಿದಿನ ಬೆಳಗ್ಗೆ ನಗರಸಭೆಯ ಗಾಡಿಗಳು ಬರುತ್ತವೆ. ಆ ಗಾಡಿಗೆ ಹಸಿಕಸ, ಒಣಕಸ ಬೇರ್ಪಡಿಸಿ ಹಾಕುವುದರ ಮೂಲಕ ನಗರದ ಸ್ವಚ್ಚತೆಗೆ ಸಹಕರಿಸಬೇಕು ಎಂಬುದಾಗಿ ಅವರು ಮನವಿ ಮಾಡಿದರು.
ನಗರದ ಸಂಘ-ಸಂಸ್ಥೆಗಳು, ಯುವಕರು, ವಿದ್ಯಾರ್ಥಿಗಳು ನಗರಸಭೆ ಕೈಗೊಳ್ಳುವ ಸ್ವಚ್ಚತೆಗೆ ಕೈಜೋಡಿಸಿದರೆ ನಗರವನ್ನು ಸ್ವಚ್ಚವಾಗಿ ಇಡಲು ಸಾದ್ಯೆ. ನಗರದಲ್ಲಿ ಇರುವ ಶಾಲಾ ಕಾಲೇಜು ವತಿಯಿಂದ ಯಾವುದಾದರೂ ವಾರ್ಡ್ ಗಳಲ್ಲಿ ಸ್ವಚ್ಚತೆಗೆ ವಿದ್ಯಾರ್ಥಿಗಳು ಮುಂದಾಗುವುದರ ಮುಖಾಂತರ ಸಾರ್ವಜನಿಕರಿಗೆ ಅರಿವು ಮೂಡಿಸಲು ಯುವ ಪೀಳಿಗೆ ಮುಂದಾಗಬೇಕು ಎಂಬುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆಯ ಆರೋಗ್ಯನಿರೀಕ್ಷಕರಾದ ಸುನಿಲ್ ಕುಮಾರ್, ಸಂಧ್ಯಾ, ಅಶೋಕ್, ಮಹಾಲಿಂಗಪ್ಪ, ರಾಷ್ಟ್ರೀಯಅಕಾಡೆಮಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಪೌರಕಾರ್ಮಿಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
