ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾಕೃಷಿ ತರಬೇತಿ
ಕೇಂದ್ರದಲ್ಲಿಸೆಪ್ಟಂಬರ್ 3-5ವರೆಗೆರೈತರಿಗೆ ಸಹಜಕೃಷಿ
ಆನಂದಮಯ ಜೀವನಕ್ಕೆ ದಾರಿ ಎನ್ನುವ ವಿಷಯದ
ಕುರಿತು ತರಬೇತಿ:ಕೃಷಿ ನಿರ್ದೇಶಕ ಆರ್.ರಜನೀಕಾಂತ್
ಹಿರಿಯೂರು:
ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸೆಪ್ಟಂಬರ್ 3ರಿಂದ5ರವರೆಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ “ಐಕಾಂತಿಕ ಸಮುದಾಯ” ಸಹಯೋಗದಲ್ಲಿ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಸಹಜ ಕೃಷಿ-ಆನಂದಮಯ ಜೀವನಕ್ಕೆ ದಾರಿ ಎನ್ನುವ ವಿಷಯದ ಕುರಿತು ಮೂರು ದಿನದ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ಆರ್.ರಜನೀಕಾಂತ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸೆಪ್ಟಂಬರ್ 3ರಂದು ಬೆಳಗ್ಗೆ 9ಕ್ಕೆ ಉದ್ಘಾಟನೆ ನೆರವೇರಲಿದ್ದು, ತರಬೇತಿ ಕಾರ್ಯಕ್ರಮದಲ್ಲಿ “ಐಕಾಂತಿಕ ಸಮುದಾಯ”ದ ಪ್ರಗತಿಪರ ಸಹಜ ಕೃಷಿಕರಾಧ ದಾವಣಗೆರೆಯ ರಾಘವ, ಚಿಕ್ಕಜಾಜೂರಿನ ವೀರೇಶ್, ಮಲೆಬೆನ್ನೂರಿನ ಪಾಂಡುರಂಗ, ದಾವಣಗೆರೆಯ ಅಭಿಶೇಕ್, ಹರಿಹರದ ಜಬೀವುಲ್ಲಾ ಕೃಷಿ ಬೆಳೆದು ಬಂದ ಹಾದಿ, ಸುಸ್ಥಿರ ಕೃಷಿ ಪದ್ಧತಿಗಳು, ಸಹಜ ಕೃಷಿ ಪರಿಚಯ, ಸಜೀವಮಣ್ಣು, ನೀರು ನಿರ್ವಹಣೆ ಮತ್ತು
ಸಹಜ ಕೃಷಿಯಿಂದ ಅಂತರ್ಜಲ ಹೆಚ್ಚಿಸುವ ಬಗೆ, ಕಳೆ ನಿರ್ವಹಣೆ, ಕೀಟ ಮತ್ತು ರೋಗ ನಿರ್ವಹಣೆ, ಬಹುಪಯೋಗಿ ಜೀವಂತ ಬೇಲಿ, ತೋಟಗಾರಿಕಾ ಬೆಳೆಗಳಲ್ಲಿ ಗಿಡಗಳ ಸಂಯೋಜನೆ, ಹೊಸದಾಗಿ ತೋಟ ಕಟ್ಟಲು ಅನುಸರಿಸುವ ಕ್ರಮಗಳು, ಹಾಲಿ ಇರುವ ಹಳೆಯ ತೋಟವನ್ನು ಉತ್ತಮ ಪಡಿಸುವ ವಿಧಾನಗಳು.
ತೋಟದ ಕೆಲಸ ಮತ್ತು ಖರ್ಚು ಕಡಿಮೆ ಮಾಡಲು ಇರುವ ಪರಿಹಾರಗಳು, “ಚೌಕಾಬಾರ” ಪದ್ಧತಿಯಲ್ಲಿ ಸುಲಭವಾಗಿ ಬೆಳೆಯಬಹುದಾದ ಸೊಪ್ಪು, ತರಕಾರಿಗಳು, ಬಿದರಿನ ಮಹತ್ವ, ಸಹಜ ಕೃಷಿಯ ಪುಸ್ತಕಗಳ ಪರಿಚಯ ಮತ್ತು ಮಾರಾಟ, ನೇರ ಮಾರುಕಟ್ಟೆ ವ್ಯವಸ್ಥೆ ಹಾಗೂ ಸಹಜ ಜೀವನದ ವಿಚಾರಗಳ ಕುರಿತ ವಿಷಯಗಳನ್ನು ಮಂಡನೆ ಮಾಡಲಿದ್ದಾರೆ.
ಈಗಾಗಲೇ ಸಹಜ ಕೃಷಿಯಲ್ಲಿ ತೊಡಗಿಕೊಂಡಿರುವ ಮತ್ತು ತಮ್ಮ ತಾಲ್ಲೂಕಿನಲ್ಲಿ ಸಹಜ ಕೃಷಿ ಪ್ರಾರಂಭಿಸಲು ಆಸಕ್ತಿ ಇರವ ಹಾಗೂ ಕಾರ್ಯಗಾರದ 3 ದಿನವೂ ಕಡ್ಡಾಯವಾಗಿ ತರಬೇತಿ ಕೇಂದ್ರದಲ್ಲಿ ವಾಸ್ತವ್ಯ ಮಾಡಿ ಭಾಗವಹಿಸುವ ಚಿತ್ರದುರ್ಗ ಜಿಲ್ಲೆಯ ಪರತಿ ತಾಲ್ಲೂಕಿಗೆ 10ರಂತೆ , 6 ತಾಲ್ಲೂಕಿನ 60ಜನ ಉತ್ಸಾಹಿ ಯುವ ಕೃಷಿ ದಂಪತಿಗಳು ಅಥವಾ ರೈತ ಬಾಂಧವರು ದೂರವಾಣಿ ಕರೆ ಮಾಡಿ ಸೆಪ್ಟಂಬರ್ 02ರೊಳಗೆ ನೊಂದಾಯಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂಬುದಾಗಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರಾದ ಆರ್.ರಜನೀಕಾಂತ್ ಅವರು ಮನವಿ ಮಾಡಿದ್ದಾರೆ.
ಈ ಕಾರ್ಯಕ್ರಮವನ್ನು ಆಯೋಜಿಸಲು, ನೋಂದಾವಣಿ ಮಾಡಿಕೊಂಡ ಅರ್ಹ 60ಜನ ರತ ಬಾಂಧವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು. ಹಾಗೂ ತರಬೇತಿಗೆ ಹಾಜರಾಗುವ ರೈತ ಬಾಂಧವರು ಕಡ್ಡಾಯವಾಗಿ ತಮ್ಮ ಎಫ್.ಐ.ಡಿ. ಕಾರ್ಡ್ ಅಥವಾ ಚುನಾವಣೆ ಗುರುತಿನ ಚೀಟಿಯನ್ನು ತರಲು ಮನವಿ ಮಾಡಲಾಗಿದೆ.
ತರಬೇತಿ ಕಾರ್ಯಗಾರವು ಮೊದಲನೇದಿನ 9ಗಂಟೆಗೆ, 2ಮತ್ತು 3ನೇ ದಿನ ಬೆಳಗ್ಗೆ 6.30ರಿಂದ ರಾತ್ರಿ9 ಗಂಟೆಯವರೆಗೆ ವಿವಿಧ ಅವೇಶನ ಮತ್ತು ಚಟುವಟಿಕೆ ಒಳಗೊಂಡಿರುವುದರಿಂದ ಆಸಕ್ತ ಉತ್ಸಾಹಿ ಯುವ ರೈತಬಾಂಧವರು ಭಾಗವಹಿಸುವಂತೆ ಕೋರಿದೆ..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
