ಮೊಬೈಲ್ ಗೆ ದಾಸರಾದರೆ ಅದೋಗತಿ, ಪುಸ್ತಕಗಳ ದಾಸರಾದರೆ ಸದ್ಘತಿ-ಪ್ರಭು ಸ್ವಪ್ಪಿನ ಮಠ-ವಿಜಯನಗರ ಜಿಲ್ಲೆ ಕೂಡ್ಲಿಗಿ: ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿರಬೇಕು, ಅನಿವಾರ್ಯ ಕಾರಣಕ್ಕೆ ಮಾತ್ರ ಸದ್ಬಳಕೆ ಮಾಡಿಕೊಳ್ಳಬೆಕಿದೆ. ಮೊಬೈಲ್ ಗೆ ದಾಸರಾದರೆ ಅದೋಗತಿ ಸಾಧ್ಯ, ಆದರೆ ಪುಸ್ತಕದ ದಾಸರಾದರೆ ಸದ್ಘತಿ ಸಮ್ಮತಿ ಸಾಧ್ಯ ಎಂದು. ಪ್ರಗತಿ ಪರ ರೈತರಾದ ಪ್ರಭು ಸ್ವಪ್ಪಿನ ಮಠ, ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಸೆ8ರಂದು ಪಟ್ಟಣದ ಶ್ರೀರಾಘವೇಂದ್ರ ಪ್ಯಾರಾಮೆಡಿಕಲ್ ಕಾಲೇಜ್ ನಲ್ಲಿ, ಜರುಗಿದ ಅಂತಿಮ ತರಗತಿ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದರು. ಯುವ ಪೀಳಿಗೆ ಹಾಗೂ ವಿದ್ಯಾರ್ಥಿಗಳು, ಅನಿವಾರ್ಯ ಇದ್ದಾಗ ಮಾತ್ರ ಮೊಬೈಲ್ ಸದ್ಭಳಕೆ ಮಾಡಿಕೊಳ್ಳಬೇಕಿದೆ. ಪುಸ್ತಕದ ಕಡೆ ಒಲವು ತೋರಿಸಿದರೆ, ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಬಹುದು. ಜ್ಞಾನವಂತರಾಗಬಹುದು ಹಾಗೂ ಸಮಾಜದಲ್ಲಿ ಗಣ್ಯಾತಿಗಣ್ಯರಾಗಬಹುದು. ಪುಸ್ತಕದ ಗೀಳಿನಿಂದಾಗಿ ವ್ಯಕ್ತಿತ್ವ ವಿಕಸನ ಸಾಧ್ಯ, ಅನಗತ್ಯ ಮೊಬೈಲ್ ಗೀಳಿನಿಂದಾಗಿ ವ್ಯಕ್ತಿತ್ವ ಹಾಗೂ ವ್ಯಕ್ತಿಯ ಅದೋಗತಿ ಸಾಧ್ಯ ಎಂದರು. ವಿದ್ಯಾರ್ಥಿಗಳು ಪೋಷಕರ ಕನಸುಗಳನ್ನು ಸಾಕಾರಗೊಳಿಸಬೇಕಿದೆ, ಸಮಾಜದ ನಿರೀಕ್ಷೆಗಳನ್ನು ಸಫಲಗೊಳಿಸಬೇಕಿದೆ. ವಿದ್ಯಾರ್ಥಿಗಳು ಹಾಗೂ ವಿದ್ಯಕಲಿಸಿದಾತ ಹೆತ್ತವರು ಸಮಾಜದ ಋಣ ತೀರಿಸಬೇಕು, ಅದಕ್ಕಾಗಿ ಸಚ್ಚಾರಿತ್ರ್ಯ ಹಾಗೂ ಉತ್ತಮ ಸಂಸ್ಕಾರ ಹೃದಯ ಶ್ರೀಮಂತಿಕೆ ರೂಡಿಸಕೊಳ್ಳಬೇಕಿದೆ ಎಂದರು. ಹಿರೇಮಠ ಕಾಲೇಜಿನ ಉಪನ್ಯಾಸಕ ಟಿ.ದೇವಪ್ಪ ಮಾತನಾಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತಾಧಿಕಾರಿ, ಹಚ್.ಡಿ.ಸತ್ಯಮೂರ್ತಿ ವಹಿಸಿದ್ದು. ಶ್ರೀಮತಿ ಅಂಬಿಕಾ, ಉಪನ್ಯಾಸಕರಾದ ಅಮೀರ್ ಭಾಷ, ಮಹೇಶ, ಶಿವಕುಮಾರ, ಗಣೇಶ, ಕರಿಬಸಮ್ಮ ವೇದಿಕೆಯಲ್ಲಿದ್ದರು. ವಿವಿದ ಸ್ಪರ್ಧೆ ಗಳಲ್ಲಿ ವಿಚೇತರಾದ ವರಿಗೆ, ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು, ವಿದ್ಯಾರ್ಥಿನಿ ಕೀರ್ತನಾ ಕಾರ್ಯಕ್ರಮ ನಿರೂಪಿಸಿದರು, ರೇಖಾ ವಂದಿಸಿದರು.

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
