ಇಟ್ಟಿಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ 2023-24 ನೇ ಸಾಲಿನ ಇಟ್ಟಿಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ದಿನಾಂಕ 8/9/2023 ರ ಶುಕ್ರವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಂಚಮ್ಮನಹಳ್ಳಿ(ಇಟ್ಟಿಗಿ ಪಕ್ಕದ ಹಳ್ಳಿ) ಶಾಲೆಯಲ್ಲಿ ಯಶಸ್ವಿಯಾಗಿ ನೆರವೇರಿತು.ಇಟ್ಟಿಗಿಯ ವಿಶ್ವಭಾರತಿ ಶಾಲೆಯ ಮಕ್ಕಳ ಪ್ಯಾನ್ಸಿ ಡ್ರಸ್ ನಲ್ಲಿ ಸರಸ್ವತಿ & ಉಪಗ್ರಹ ಉಡಾವಣೆ ಎಲ್ಲರ ಗಮನ ಸೆಳೆದು ,ಸರಸ್ವತಿ ವೇಷಕ್ಕೆ ಪ್ರಥಮ ಬಹುಮಾನ ಹಾಗೂ ಚಂದ್ರಯಾನಕ್ಕೆ ನಮ್ಮ ವಿಜ್ಞಾನಿಗಳು ಕಳಿಸಿದ ಉಪಗ್ರಹದ ಬೆಂಡಿನ ಪ್ರತಿರೂಪಕ್ಕೆ ದ್ವಿತೀಯ ಸ್ಥಾನ ಗಳಿಸಿಕೊಂಡಿದ್ದು ವಿಶ್ವಭಾರತಿ ಶಾಲೆಯ ಶಿಕ್ಷಕ& ಶಿಕ್ಷಕಿಯರ ಸಿಬ್ಬಂದಿಗೆ ಹಾಗೂ ಆಡಳಿತ ವರ್ಗಕ್ಕೆ ಅಪಾರ ಸಂತೋಷವನ್ನು ಉಂಟುಮಾಡಿದೆ.

ಈ ಕಾರ್ಯಕ್ರಮವನ್ನು ತುಂಬಾ ವ್ಯವಸ್ಥಿತವಾಗಿ ಅದ್ದೂರಿಯಾಗಿ ಯೋಜನೆ ಮಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ಕೆಂಚಮ್ಮನಹಳ್ಳಿ ಶಾಲೆಯ ಮುಖ್ಯ ಶಿಕ್ಷಕರಿಗೂ ಸಹಶಿಕ್ಷಕರಿಗೂ ಹಾಗೂ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಿಗೂ ಸರ್ವ ಸದಸ್ಯರಿಗೂ ಹಾಗೂ ಗ್ರಾಮದ ಶಿಕ್ಷಣ ಪ್ರೇಮಿಗಳಿಗೂ ಶಾಲೆಯ ಹಳೆಯ ವಿದ್ಯಾರ್ಥಿಗಳಿಗೂ ಗ್ರಾಮದ ಮುಖಂಡರಿಗೂ ಇಲಾಖೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು
ಹಾಗೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಹಡಗಲಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ವಿ.ಬಿ. ಜಗದೀಶ್ ಸರ್. ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಲ್ಲಿಕಾರ್ಜುನ ಎಂ ಇವರಿಗೂ ತುಂಬು ಹೃದಯದ ಧನ್ಯವಾದಗಳು.
ಹಾಗೂ ಇಟ್ಟಿಗಿ ಕ್ಲಸ್ಟರ್ನ ಸರ್ಕಾರಿ ಅನುದಾನಿತ ಅನುದಾನ ರಹಿತ ಹಾಗೂ ವಸತಿ ಶಾಲೆಯ ಎಲ್ಲಾ ಮುಖ್ಯ ಶಿಕ್ಷಕರಿಗೂ ಸಹಶಿಕ್ಷಕರಿಗೂ ಹಾಗೂ ಎಲ್ಲಾ ಶಾಲೆಗಳ ಮುದ್ದು ಮಕ್ಕಳಿಗೂ ಇಲಾಖೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳು.
ಈ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಸಹಾಯ ಮಾಡಿದ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಶಿಕ್ಷಣ ಇಲಾಖೆಯ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು
ಸಮೂಹ ಸಂಪನ್ಮೂಲ ವ್ಯಕ್ತಿ ಇಟ್ಟಿಗಿಯವರು ತಿಳಿಸಿದ್ದಾರೆ…

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
