ಇಂದು ಶಿಕ್ಷಕ ಶಿವಲಿಂಗ ಹೆಡೆಯವರಿಗೆ ಎಜ್ಯುಕೆಶನ ಐಕಾನ 2023 ಪ್ರಶಸ್ತಿ ಪ್ರಧಾನ…!!!

ಇಂದು ಶಿಕ್ಷಕ ಶಿವಲಿಂಗ ಹೆಡೆಯವರಿಗೆ ಎಜ್ಯುಕೆಶನ ಐಕಾನ 2023 ಪ್ರಶಸ್ತಿ ಪ್ರಧಾನ.
ಬೀದರ: ಶ್ರೀ ನಾನಕ ಝೀರಾ ಸಾಹಿಬ್ ಫೌಂಡೆಷನ (SNJSF) ಟ್ರಸ್ಟವತಿಯಿಂದ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಆಚರಿಸುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯು ಕಲ್ಯಾಣ ಕರ್ನಾಟಕ ಪ್ರದೆಶದ ಶಿಕ್ಷಕರು ಅಥವಾ ಶಿಕ್ಷಣ ತಜ್ಞರು, ಶಿಕ್ಷಣ ಕ್ಷೇತ್ರದಲ್ಲಿ ಅವರು ಮಾಡಿದ ಗಮನಾರ್ಹ ಸಾಧನೆಯನ್ನು ಗುರುತ್ತಿಸಿ “ಕಲ್ಯಾಣ ಕರ್ನಾಟಕ ಎಜ್ಯುಕೆಶನ ಐಕಾನ” ಎಂಬ ಪ್ರಶಸ್ತಿಗೆ ಈ ವರ್ಷ ಸಂಪನ್ಮೂಲ ಶಿಕ್ಷಕರಾದ ಶಿವಲಿಂಗ ಹೆಡೆಯವರನ್ನು ಆಯ್ಕೆಮಾಡಲಾಗಿದ್ದು, ಇವರು 2021 ರ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ,ಇನ್ನತರ‌ ಹಲವು ಪ್ರಶಸ್ತಿ ಪಡೆದಿರುತ್ತಾರೆ. ಇವರು ಶಿಕ್ಷಣ ಕ್ಷೇತ್ರದಲ್ಲಿ ಅಲ್ಲದೆ ಸಾಹಿತಿ ಕ್ಷೇತ್ರದಲ್ಲಿಯೂ ಗಣನಿಯ ಸೆವೆ ಸಲ್ಲಿಸಿರುತ್ತಾರೆ. ಪ್ರತಿಯೊಂದು‌ ಮಗುವಿನ ಅಚ್ಚುಮೆಚ್ಚಿನ ಶಿಕ್ಷಕರ ಸಾಲಿನಲ್ಲಿ ನಿಲ್ಲುವ ಶಿಕ್ಷಕ ಶಿವಲಿಂಗ ಹೆಡೆ. ಇವರು ಹುಟ್ಟುರಿನ ಸರಕಾರಿ ಫ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ‌ ಕಾರ್ಯನಿರ್ವಹಿಸುತ್ತಿದ್ದಾರೆ.
ಇಂದಿನ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕ ಶಿವಲಿಂಗ ಹೆಡೆಯವರಿಗೆ “ಕಲ್ಯಾಣ ಕರ್ನಾಟಕ ಎಜ್ಯುಕೆಶನ ಐಕಾನ 2023” ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷರಾದ ಡಾ.ಬಲಬೀರ್ ಸಿಂಗ್ ಹಾಗೂ ಕಾರ್ಯಕ್ರಮ ಸಂಯೋಜಕರಾದ ಪ್ರೋ.ಜ್ಯೋತಿ ಐನಾಪೂರ ಅವರು ತಿಳಿಸಿರುತ್ತಾರೆ…

ವರದಿ: ಸುನೀಲ ಮೇತ್ರೆ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend