SBIಗೆ ಭೇಟಿ ನೀಡಿ ಗ್ರ‍ಾಹಕರ ಸಮಸ್ಯೆ ಆಲಿಸಿದ MLA Dr.NTಶ್ರೀನಿವಾಸ್…!!!

SBIಗೆ ಭೇಟಿ ನೀಡಿ ಗ್ರ‍ಾಹಕರ ಸಮಸ್ಯೆ ಆಲಿಸಿದ MLA Dr.NTಶ್ರೀನಿವಾಸ್-ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ SBIಗೆ ಸೆ4 ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಛೇರಿಗೆ, MLA Dr.NTಶ್ರೀನಿವಾಸ್ ರವರು ಭೇಟಿ ನೀಡಿ ಗ್ರಾಹಕರ ಸಮಸ್ಯೆಗಳನ್ನು ಆಲಿಸಿದರು. ಸ್ಟೇಟ್ಸ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಗಳ ಪೈಕಿ, ಕೂಡ್ಲಿಗಿ ಪಟ್ಟಣದಲ್ಲಿ ಒಂದೇ ಬ್ಯಾಂಕ್ ಇರುವುದರಿಂದ. ಬ್ಯಾಂಕ್ ನ ಕಛೇರಿಯಲ್ಲಿ ಸದಾ ತುಂಬಾ ಗ್ರಾಹಕರು ತುಂಬಿರುತ್ತಿದ್ದು, ಗ್ರಾಹಕರಿಗೆ ತೊಂದರೆ ಆಗುತ್ತಿರುವುದನ್ನು ಮನಗಂಡ ಶಾಸಕರು. ತಾಲೂಕಿನ ಎಲ್ಲ‍ಾ ಹೋಬಳಿಗಳಲ್ಲಿ ಹೋಬಳಿ ಮಟ್ಟದಲ್ಲಿ, ಗ್ರಾಹಕರ ಸೇವಾ  ಕೇಂದ್ರಗಳನ್ನು ಸ್ಥಾಪಿಸಬೇಕು ಎಂದರು. ಅಗತ್ಯ ಇರುವೆಡೆ
ಹೆಚ್ಚುವರಿಯಾಗಿ ನೌಕರರನ್ನು ತುಂಬುವುದರಿಂದ, ಬ್ಯಾಂಕ್ ಕಛೇರಿಯ ಒತ್ತಡ ತಗ್ಗಿಸಬಹುದು.  ಆಧಾರ ಕಾಡ್೯  ತಿದ್ದುಪಡಿ, ಹಾಗೂ ಸೇರ್ಪಡೆ ವೇಳೆ ಅಕ್ಷರ ದೋಷ ಸಮಸ್ಯೆ ಕಂಡುಬರದಂತೆ ನೋಡಿಕೊಳ್ಳಬೇಕು.  ಜನರು  ಆಧಾರ್ ಕಾಡ್೯ಗಾಗಿ ವಿನಾಕಾರಣ ಅಲೆದಾಡುವುದನ್ನು, ತಪ್ಪಿಸಲು ಅಗತ್ಯ ಕ್ರಮಗಳನ್ನು ಶೀಘ್ರವೇ ಕೈಗೊಳ್ಳಬೇಕು ಎಂದರು. ಬ್ಯಾಂಕ್ ಮುಂಭಾಗದಲ್ಲಿ ಗ್ರ‍ಾಹಕರ ವಾಹನ ನಿಲುಗಡೆಗಾಗಿ, ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಜರುಗಿಸಬೇಕು. ಬ್ಯಾಂಕ್ ಸಿಬ್ಬಂದಿಗಳು ಗ್ರಾಹಕರೊಂದಿಗೆ ಸಹನೆ ಹಾಗೂ ಸೌಜನ್ಯದಿಂದ, ಸ್ನೇಹ ಜೀವಿಗಳಾಗಿ  ವರ್ತಿಸಬೇಕೆಂದರು. ಜೊತೆಗೆ ಸೆಕ್ಯೂರಿಟಿ ಗಾಡ್೯ ಗಳನ್ನು, ಅಗತ್ಯಕ್ಕೆ ತಕ್ಕಂತೆ ನೇಮಿಸಿಕೊಳ್ಳಬೇಕು ಎಂದು ಅಧಿಕಾರಿಗೆ ಸೂಚಿಸಿದರು. ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಯವರು ಹಾಜರಿದ್ದರು, ಗ್ರ‍ಾಹಕರು ಮತ್ತು ನಾಗರೀಕರು ಉಪಸ್ಥಿತರಿದ್ದರು….

 

ವರದಿ .ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend