;

ಕೂಡ್ಲಿಗಿ:ಕ.ರಾ.ರೈತ ಸಂಘದಿಂದ ಬರಪೀಡಿತ ತಾಲೂಕೆಂದು ಘೋಷಿಸುವಂತೆ ಹಕ್ಕೊತ್ತಾಯ…!!!

ಕೂಡ್ಲಿಗಿ:ಕ.ರಾ.ರೈತ ಸಂಘದಿಂದ ಬರಪೀಡಿತ ತಾಲೂಕೆಂದು ಘೋಷಿಸುವಂತೆ ಹಕ್ಕೊತ್ತಾಯ.. ವಿಜಯನಗರ ಜಿಲ್ಲೆ ಕೂಡ್ಲಿಗಿ:ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸುವಂತೆ, ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ. ಕೂಡ್ಲಿಗಿ ತಾಲೂಕು ಘಟಕದ ಪದಾಧಿಕಾರಿಗಳು, ಹಕ್ಕೊತ್ತಾಯ ಮಾಡಿದ್ದಾರೆ. ತಹಶಿಲ್ದಾರರ ಮೂಲಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿದ್ದಾರೆ. ಹಾಗೂ ಸಂಘಟನೆಯಿಂದ ರೈತ ಹಿತಾಸಕ್ತಿಯ ಮೇರೆಗೆ ತಮ್ಮ ಹಲವು ಬೇಡಿಕೆಗಳನ್ನು, ಈಡೇರಿಸುವಂತೆ ಈ ಮೂಲಕ ಅವರು ಒತ್ತಾಯಿಸಿದ್ದಾರೆ. ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಕೆ.ಹಟ್ಟಿ ದೇವರ ಮನಿ ಮಹೇಶ ನೇತೃತ್ವದಲ್ಲಿ, ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಯ ಹಲವು ರೈತರು ಮನವಿ ಪತ್ರನೀಡಿದ್ದಾರೆ. ತಹಶಿಲ್ದಾರರಾದ ಟಿ.ಜಗದೀಶ್ ರವರು ಮನವಿ ಪತ್ರ ಸ್ವೀಕರಿಸಿದರು, ಮನವಿಯನ್ನು ನಿಯಮದಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ತಲುಪಿಸುವುದಾಗಿ ತಿಳಿಸಿದರು…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;