ಪರಮಪೂಜ್ಯ ಶ್ರೀ ಶೋ ಬ್ರ ಶ್ರೀ ಸೋಮಲಿಂಗೇಶ್ವರ ಅಪ್ಪಾಜಿಯವರ 5ನೆಯ ಪುಣ್ಯರಾಧನೆ ಬಿಳಗಿ ತಾಲೂಕಿನ ಮುಂಡಗನೂರ್ ಗ್ರಾಮದಲ್ಲಿ ಶ್ರೀ ಶಂಭುಲಿಂಗ ಆಶ್ರಮದ ಶ್ರೀ ಸೋಮಲಿಂಗೇಶ್ವರ ಅಪ್ಪಾಜಿಯವರ ಐದನೆಯ ಪುಣ್ಯರಾಧನೆ ನಿಮಿತ್ಯವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಪೂಜ್ಯ ಅಪ್ಪಾಜಿಯವರ ಭಾವಚಿತ್ರದೊಂದಿಗೆ ಡೊಳ್ಳಿನ ವಾಲಗ ಕುಂಭ ಆರತಿ ತೆಗೆದುಕೊಂಡು ಕೃಷ್ಣಾ ನದಿಯಲ್ಲಿ ಪೂಜೆ ಮಾಡಿಕೊಂಡು ಮೆರವಣಿಗೆಯೊಂದಿಗೆ ಶ್ರೀ ಮಠಕ್ಕೆ ಆಗಮಿಸಲಾಯಿತು ನಂತರ ಬ್ರಹ್ಮ ವೇದಿಕೆಯ ಮೇಲೆ ಸಾನಿಧ್ಯವನ್ನ ಶ್ರೀ ಪ ಪೂ ಜ್ಞಾನಾನಂದ ಮಹಾಸ್ವಾಮಿಗಳು ಜ್ಞಾನಸಿದ್ದಾಶ್ರಮ ಬಿಳಿಗಿ ಕ್ರಾಸ್ ಇವರು ವಹಿಸಿಕೊಂಡಿದ್ದರು ವೇದಿಕೆಯ ಮೇಲೆ ಕೊಳುರ್ ಗ್ರಾಮದ ಶಂಭುಲಿಂಗೇಶ್ವರ ಆಶ್ರಮದ ಶ್ರೀ ಪ ಪೂ ಕೃಷ್ಣ ಗೌಡ ಪಾಟೀಲ್ ಹಾಗೂ ಶ್ರೀ ಸರಸ್ವತಿ ಮಾತಾಜಿ ಜ್ಞಾನಸಿದ್ದಾಶ್ರಮ ಬೆಳಗಿ ಕ್ರಾಸ್ ಹಾಗೂ ರಬಕವಿಯ ಅಜ್ಜನವರು ಮತ್ತು ಶರಣ ಶ್ರೀ ರಂಗಪ್ಪ ಇಟ್ಟನ್ನವರ್ ಉಪಸ್ಥಿತರಿದ್ದರು ವಿಷಯ ಶ್ರೀ ಗುರು ವಚನ ಉಪದೇಶವನಾಲಿಸಿ ದಾಗಲಹುದು ನರರಿಗೆ ಮುಕುತಿ ಎಂಬ ವಿಷಯದ ಮೇಲೆ ಪೂಜ್ಯರು ಉಪದೇಶವನ್ನು ಮಾಡಿದರು ಶ್ರೀ ಬಿ ಎಂ ಗಡಿಗಿ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು …

ವರದಿ ಬಿ ಎಂ ಗಡಗಿ ಮುಂಡಗನೂರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
