‘ಕಾಂಗ್ರೇಸ್ ಭದ್ರಕೋಟೆಗೆ ದಶಮಾಪುರ ಗ್ರಾಮ ಪಂಚಾಯತಿ ‘
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮ ಪಂಚಾಯಿತಿಯ 2ನೇ ಅವದಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ಮಾನ್ಯ ತಹಸೀಲ್ದಾರ್ , ಚುನಾವಣಾ ಅಧಿಕಾರಿಯ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಒಟ್ಟು 17ಜನ ಸದಸ್ಯರುಗಳಲ್ಲಿ 14 ಜನ ಸದಸ್ಯರುಗಳು ಹಾಜರಾಗಿದ್ದಾರೆ ,ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹೊಸಕೆರೆ ಗ್ರಾಮದ S ಮರಿಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದಶಮಾಪುರ ಗ್ರಾಮದ ಶ್ರೀಮತಿ ಸುಮತಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ದಶಮಾಪುರ ಗ್ರಾಮ ಪಂಚಾಯಿತಿ ಕೂಡ ಕಾಂಗ್ರೆಸ್ ನ ಭದ್ರ ಕೋಟೆಯಾಗಿ ಮಾರ್ಪಟ್ಟಿದೆ
ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀಮತಿ ಸರಳ ನೇತೃತ್ವದ ಸಿಬ್ಬಂಧಿಗಳು ಯಾವುದೇ ಅಚಾತುರ್ಯ ನಡೆಯದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪರಸಪ್ಪ.ವಿ.ಎಂ, ಕಾರ್ಯದರ್ಶಿಯಾದ ಅಡಿವೆಪ್ಪ, ಡಿ.ಈ.ಓ. ರಾಘವೇಂದ್ರ, ಬಳ್ಳಾರಿ ನಾಗರಾಜ್ , ಕೆ.ಎಸ್. ಸಚ್ಚಿದಾನಂದ, ಜಂಬಣ್ಣ ಸೂಗೂರು, ಮುದ್ದಿಬಸಪ್ಪ, ಎಂ.ಗಂಗಮ್ಮ, ಅಂಗಡಿ ವೀರಮ್ಮ, ಹೆಚ್.ಎಸ್.ರೋಹಿಣಿ, ವೀರೇಶ್.ಎಂ, ,ದುರುಗಮ್ಮ, ಕೆ.ಮರಿಯಪ್ಪ, ನಾಗಮ್ಮ, ಕಾಂಗ್ರೆಸ್ ಪಕ್ಷದ ಸರ್ವ ಸದಸ್ಯರು ಗ್ರಾಮ ಪಂಚಾಯತ್ ಸಿಬ್ಬಂಧಿಗಳು ಹಾಗು ಇತರರು ಉಪಸ್ಥಿತರಿದ್ದರು..

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
