ತುಂಗಭದ್ರಾ ಅಣೆಕಟ್ಟಿನಿಂದ ಕಾಲುವೆಗಳಿಗೆ ನೀರು ಹರಿಸಲು ಸಂಸದರಾದ ಕರಡಿ ಸಂಗಣ್ಣ ಒತ್ತಾಯ
ರೈತರ ಹಿತ ದೃಷ್ಟಿಯಿಂದಾಗಿ ತುಂಗಭದ್ರ ಅಣೆಕಟ್ಟಿನಿಂದ ಕಾಲುವೆಗಳಿಗೆ ನೀರು ಹರಿಸಲು ಅಗತ್ಯ ಕ್ರಮ ವಹಿಸಲು ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ಒತ್ತಾಯಿಸಿದ್ದಾರೆ
ಪ್ರಸ್ತುತ ತುಂಗಭದ್ರಾ ಅಣೆಕಟ್ಟಿಗೆ 76.19 ಟಿಎಂಸಿ ನೀರು ಸಂಗ್ರಹಣೆಯಾಗಿದೆ ಅಲ್ಲದೆ ನೀರಿನ ಹರಿವು ಉತ್ತಮವಾಗಿದ್ದು ಮಳೆ ಕೂಡ ಉತ್ತಮವಾಗಿ ಆಗುತ್ತಿರುವುದರಿಂದ ಜಲಾಶಯ ಅತಿ ಶೀಘ್ರದಲ್ಲಿ ಭರ್ತಿಯಾಗಲಿದೆ ಕೊಪ್ಪಳ ಬಳ್ಳಾರಿ, ವಿಜಯನಗರ ಹಾಗೂ ರಾಯಚೂರು ಜಿಲ್ಲೆಯ ರೈತರಿಗೆ ಇದು ಜೀವನದಿಯಾಗಿದ್ದು ರೈತರು ಈಗಾಗಲೇ ಭತ್ತದ ನಾಟಿಗಾಗಿ ಸಸಿ ಮಡಿಗಳನ್ನ ಸಿದ್ಧಪಡಿಸಿಕೊಂಡು ನೀರಿಗಾಗಿ ಕಾಯುತ್ತಿದ್ದಾರೆ ಕಾರಣ ತಡ ಮಾಡದೆ ಐಸಿಸಿ ಸಭೆ ಕರೆದು ಇಲ್ಲವೇ ಸರಕಾರದಿಂದ ವಿಶೇಷ ಅನುಮತಿ ಪಡೆದು ನೀರನ್ನು ಕೂಡಲೇ ಕಾಲುವೆಗಳಿಗೆ ಹರಿಸಬೇಕೆಂದು ಅಧಿಕಾರಿಗಳಿಗೆ ಸಚಿವರಲ್ಲಿ ಮತ್ತು ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ…

ವರದಿ. ಸಂಗೀತ ಪಾಟೀಲ್ ಕೊಪ್ಪಳ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
