;

ಬೊಮ್ಮಸಂದ್ರ ಗ್ರಾಮದ ಖಾಸಗಿ ಕಂಪ್ಯೂಟರ್ ಆಪರೇಟರ್ ಕುಟುಂಬ ನೆಂಟರಿಷ್ಟರ ಖಾತೆ…!!!

ಬೊಮ್ಮಸಂದ್ರ ಗ್ರಾಮದ ಖಾಸಗಿ ಕಂಪ್ಯೂಟರ್ ಆಪರೇಟರ್ ಕುಟುಂಬ ನೆಂಟರಿಷ್ಟರ ಖಾತೆ ಹಾಕಿರುವುದು ರೈತರ ಪತ್ತೆ ಹಚ್ಚಿ ಪಟ್ಟಿ ಮಾಡಿರುವುದು.
ಚಳ್ಳಕೆರೆ ತಾಲೂಕಿನ 2022-23 ನೇ ಸಾಲಿನ ಬಿತ್ತನೆ ಮಾಡಿದ ಶೇಂಗಾ,ಈರುಳ್ಳಿ , ತೊಗರಿ, ಸೇರಿದಂತೆ ವಿವಿಧ ಬೆಳೆಗಳು ಅತಿ ವೃಷ್ಠಿ ಹಾಗೂ ಅನಾವೃಷ್ಠಿಗೆ ಸಿಲುಕಿ ಬೆಳೆನಷ್ಟವಾಗಿದ್ದು ಇದರಿಂದ ರೈತರು ಬಿತ್ತನೆ ಬೀಜ ಗೊಬ್ಬರ, ಕೃಷಿ ಚಟುವಟಿಕೆ ಸೇರಿದಂತೆ ಹಾಕಿದ ಬಂಡವಾಳ ಕೈ ಸೇರದೆ ರೈತರು ಸಾಲದ ಸುಳಿಗೆ ಸಿಲುಕುವಂತೆ ಮಾಡಿತ್ತು.
ಬೆಳೆ ನಷ್ಟ ಪರಿಹಾರಕ್ಕಾಗಿ ಚಳ್ಳಕೆರೆ ತಾಲೂಕಿಗೆ ಸುಮಾರು ೮೫ ಕೋಟಿ ರೂ ಬೆಳೆ ನಷ್ಟಪರಿಹಾರ ಬಿಡುಗಡೆ ಮಾಡಿದರೂ ಸಹ ಇನ್ನು ಸುಮಾರು 6 ಸಾವಿರ ರೈತರ ಖಾತೆಗೆ ಬೆಳೆ ನಷ್ಟ ಪರಿಹಾರ ಬಂದಿಲ್ಲ ಇನ್ನು ಕೆಲವರು ನಾವು ದಾಖಲೆಗಳನ್ನು ನೀಡಿದರೂ ಪರಿಹಾರ ಎಂಟ್ರಿ ಮಾಡಿಲ್ಲ ಎಂಬ ಸಾಕಷ್ಟು ಆರೋಪಗಳ ನಡುವೆಯೂ ತಾಲೂಕಿನಲ್ಲಿ ಈಗಾಗಲೆ ಜಾಜೂರು ಹಾಗೂ ಕಾಲುವೆಹಳ್ಳಿ ಕಂದಾಯ ವೃತ್ತದ ವ್ಯಾಪ್ತಿಯಲ್ಲಿ ಸುಮಾರು 20 ಲಕ್ಷ ರೂ ಗಳಿಗೂ ಅಧಿಕ ಹಣವನ್ನು ಬೇರೆಯವರ ಖಾತೆಗೆ ಹಾಕಿ ಲೂಟಿ ಮಾಡಿಕೊಂಡು ಬೇರೆ ಊರಿನಲ್ಲಿರುವ ನೆಂಟರ ಖಾತೆಗೆಗಳಿಗೆ ಹಾಕಿಸಿ ನಂತರ ಅವರಿಗೆ ಕಮಿಷನ್ ನೀಡಿ ಅಧಿಕಾರಿಯೊಬ್ಬರ ಪತ್ನಿಯ ಗೂಗಲ್ ಫೇಗೆ ಹಾಕಿಸಿಕೊಂಡಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು.
ತಳಕು ಠಾಣೆಯಲ್ಲಿ ಇಬ್ಬರು ಗ್ರಾಮಲೆಕ್ಕಾಧಿಕಾರಿಗಳು, ಖಾಸಗಿ ಕಂಪ್ಯೂಟರ್ ಸೆಂಟರ್ ನ ಪತಿ ಪತ್ನಿ , ಒಬ್ಬ ಖಾಸಗಿ ವ್ಯಕ್ತಿ ಹಾಗೂ ಕೆಎಎಎಸ್ ಅಧಿಕಾರಿ ಸೇರಿ ೬ ಜನರ ಮೇಲೆ ಪ್ರಕರಣ ದಾಖಲಾದ ಬೆನ್ನಲ್ಲೇ ಇಬ್ಬರು ಗ್ರಾಮಲೆಕ್ಕಾಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಿದ್ದರು,
ಪ್ರಕರಣದ ತನಿಖೆಯನ್ನು ಪೊಲೀಸ್ ಅಧಿಕಾರಿಗಳು ಪೈಲ್ ಓಪನ್ ಮಾಡುವ ಮುನ್ನವೇ ದೊಡ್ಡೇರಿ ಗ್ರಾಪಂ ವ್ಯಾಪ್ತಿಯ ಬೊಮ್ಮಸಂದ್ರ ಗ್ರಾಮದಲ್ಲಿ ಖಾಸಗಿ ಕಂಪ್ಯೂಟರ್ ಆಪರೇಟರ್ ಕುಟುಂಬಂಸ್ಥರ 58 ಜನರ ಖಾತೆಗೆ 17.52 ಲಕ್ಷ ರೂ ಹಾಕಿ ಬಿಡಿಸಿಕೊಂಡಿರುವುದು ರೈತರೇ ಬೆಳಕಿಗೆ ತಂದಿರುವುದ ಅನ್ನದಾತರಿಗೆ ಅಧಿಕಾರಿಗಳ ಮೇಲೆ ಅನುಮಾನಕ್ಕೆ ಎಡೆ ಮಾಡಿದೆ..

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;