ಶ್ರೀ ಪಾಂಡುರಂಗ ರುಕ್ಮಿಣಿ ದೇವಸ್ಥಾನ ಕಳಸಾರೋಹಣ ಮೂರ್ತಿ ಪ್ರತಿಷ್ಠಾಪನ ಕಾರ್ಯಕ್ರಮ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹಿರೇ ಹೆಗ್ಡಾಳ್. ಗ್ರಾಮದಲ್ಲಿ ಶ್ರೀ ಚೈತನ್ಯ ಸದ್ಗುರು ಹ,ಭ,ಪ,ಗೋಪಾಲ ಮಹಾರಾಜರು ಅಣ್ಣ ಸಾಹೇಬರು ವಾಸ್ಕಾರ ಮಹಾರಾಜರು ಶ್ರೀ ಕ್ಷೇತ್ರ ಪಂಡರಾಪುರ .ಇವರ ಹಾಗೂ ಮರ್ಬಿಹಾಳ ಹನುಮಂತಪ್ಪ ಹ,ಭ,ಪ, ಇವರ ಕೃಪ ಆಶೀರ್ವಾದದೊಂದಿಗೆ. ಹಾಗೂ ಹಿರೇ ಹೆಗ್ಡಾಳ್ ಗ್ರಾಮದಲ್ಲಿ ಪಾಂಡುರಂಗ ರುಕ್ಮಿಣಿ ಕುರ್ಮಾದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ. ಕಾರ್ಯಕ್ರಮ ಜರುಗಿದ್ದು ಶ್ರೀ ಪಾಂಡುರಂಗ ದೇವಸ್ಥಾನದ ದೇವಸ್ಥಾನದ ಮುಂಭಾಗ ಜಿಗಿಜಿಗಿಸುವ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಮಾವಿನ ತಳಿರು ಬಾಳೆ ಕಂಬ ರಂಗೋಲಿ ಹಾಕಿ ವಿನ್ಯಾಸಗೊಳಿಸಲಾಗಿತ್ತು. ಶ್ರೀ ಪಾಂಡುರಂಗ ರುಕ್ಮಿಣಿ ಕುರ್ಮಾದೇವರ ಮೂರ್ತಿ ಪ್ರತಿಷ್ಠಾಪನೆಗೆ ದಿನಾಂಕ 2 /6/ 2023 ರಲ್ಲಿ ಬೆಳ್ಳಿ ರಥದಲ್ಲಿ ಹೂವಿನ ಅಲಂಕಾರ ಮಾಡಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ ನಂತರ ಊರಿನ ಮಹಿಳೆಯರಿಂದ ಕುಂಭಮೇಳ ದೊಂದಿಗೆ ಕಾರ್ಯಕ್ರಮ ಊರಿನಲ್ಲಿ ಮೆರವಣಿಗೆ ಮುಖಾಂತರ ಜಯ ಘೋಷ ಹಾಕುತ್ತ ಜಯ ಜಯ ರಾಮ ಕೃಷ್ಣ ಹರಿ ಎಂದು ನಾಮಪಡಿಸುತ್ತಾ ಊರಿನ ಗ್ರಾಮದೊಳಗೆ ಪ್ರವೇಶ ಮಾಡುತ್ತ ಮೆರವಣಿಗೆ ಸಕಲ ಭಜನೆಗಳೊಂದಿಗೆ ಮೆರವಣಿಗೆ ಕಾರ್ಯಕ್ರಮ ಮಾಡಿದರು ಭಜನಾ ಸಂಘದ ಕಲಾವಿದರು ಬೇರೆ ಬೇರೆ ಊರಿನಿಂದ ಬಂದು ಮೆರವಣಿಗೆ ಕಾರ್ಯಕ್ರಮ ಮೆರಗು ತಂದರು ನಂತರ ದಿನಾಂಕ 3 /6 2023ರಂದು ಬೆಳಗ್ಗೆ 5:00 ಗಂಟೆಗೆ ಕಾಕಡಾರತಿ ಕಾರ್ಯಕ್ರಮ 7 ಗಂಟೆಯಿಂದ 9 ಗಂಟೆವರೆಗೆ ನಾಮ ಜಪ ಪ್ರವಚನ ಹರಿ ಪಾಠ ಭಜನೆ ಶ್ರೀ ಗಣಪತಿ ಹೋಮ ಪ್ರಾಣ ಪ್ರತಿಷ್ಠಾಪನೆ ಹೋಮ ಪುಣ್ಯ ಹವಾಚನ .ಪುರುಷ ಸೂಕ್ತ ಲಕ್ಷ್ಮಿ ನಾರಾಯಣ ಹೋಮ. ದೇವನಾಂಧಿ .ಮಂಡಲಾದಿ. ದೇವತಾ ಹೋಮ .ನವಗ್ರಹ ಹೋಮ .ಅಷ್ಟದಿಕ್ಪಾಲಕರ ಹೋಮ .ಮೃತ್ಯುಂಜಯ ಹೋಮ .ಜಲವಾಧಿವಾಸ. ಪುಷ್ಪಾ ಧಿವಾಸ ಧಾನ್ಯ ದಿವಾಸ. ಶಯ್ಯಾ ಧೀವಾ. ಕಸಾರೋಹಣ ಸ ಇನ್ನೂ ಇತ್ಯಾದಿ ಕಾರ್ಯಕ್ರಮಗಳು ಜರುಗಿದ ನಂತರ ಪೀಠ ರೋಹಣ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಶ್ರೀ ಜ್ಯೋತಿ ವಾಜೇಂದ್ರ ಆಚಾರ್ಯ ರಾಮಸಾಗರ ಇವರಿಂದ. ಕಾರ್ಯಕ್ರಮಗಳು ಜರುಗಿದವು ಈ ಸಂದರ್ಭದಲ್ಲಿ ಸದ್ಗುರು ಗೋಪಾಲ ಮಹಾರಾಜರು ಇವರ ಕೀರ್ತನ ಹಾಗೂ ಭಜನಾ ದಿಂದ ಹೋಮ ಪೂಜೆ ನಡೆಸಿ ದೇವರ ಮೂರ್ತಿಗೆ ಜೀವ ಕಳ ತುಂಬಿದರು ಹಾಗೂ ಗುಡಿಯ ಗೋಪುರ ಕಳಸಾರೋಹಣ ಪೂಜೆ ಸಲ್ಲಿಸಿದರು ಮಹಾ ಮಂಗಳಾರತಿ ಮಾಡಿ ಸದ್ಭಕ್ತ ಮಂಡಳಿಗೆ ಸಲ್ಲಿಸಿದರು ಈ ಸಂದರ್ಭದಲ್ಲಿ ಶ್ರೀ ಪಾಂಡುರಂಗ ದೇವಸ್ಥಾನ ಹಿರೇ ಹೆಗ್ಡಾಳ್ ಇವರಿಂದ ಹಾಗೂ ಊರಿನ ಸಕಲ ದೈವಸ್ಥರಿಂದ ಸಂಘ ಸಂಸ್ಥೆ . ಪಾಂಡುರಂಗ ಮಾಲಾಧಾರಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸರ್ವ ಸದಸ್ಯರು ಊರಿನ ರೈತಾಪಿ ವರ್ಗದವರು ಹಾಗೂ ಮಹಿಳೆಯರು ಮುಂತಾದವರು ಹಿರೇ ಹೆಗ್ಡಾಳ ಗ್ರಾಮದಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಿದರು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
