;

ಮಾಜಿ ಶಾಸಕ ನೇಮಿರಾಜ್ ನಾಯಕ್ ಗೆ ಕೊನೆಯ ಕ್ಷಣದಲ್ಲಿ ಟಿಕೆಟ ಕೈತಪ್ಪಿದ ಹಿನ್ನೆಲೆ ಯಲ್ಲಿ ಕಾರ್ಯ ಕರ್ತರ ಅಳಲು…!!!

ಮಾಜಿ ಶಾಸಕ ನೇಮಿರಾಜ್ ನಾಯಕ್ ಗೆ ಕೊನೆಯ ಕ್ಷಣದಲ್ಲಿ ಟಿಕೆಟ ಕೈತಪ್ಪಿದ ಹಿನ್ನೆಲೆ ಯಲ್ಲಿ ಕಾರ್ಯ ಕರ್ತರ ಅಳಲು
ಹ.ಬೊ. ಹಳ್ಳಿ ಪಟ್ಟಣದ ಮಂಗನ ಹಳ್ಳಿ ಸಂಜೀವ ಮೂರ್ತಿ, ಇವರ ಬಯಲು ಜಾಗದಲ್ಲಿ ಹಮ್ಮಿ ಕೊಂಡಿದ್ದ ಸಮಾನ ಮನಸ್ಕ ಕಾರ್ಯಕರ್ತರ ಸಭೆ ನಡೆಯಿತು. ಬಿಜೆಪಿ ಮಾಜಿ ಶಾಸಕರಾದ, ಶ್ರೀ ನೇಮಿರಾಜ್ ರವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಯಲ್ಲಿ ಭಾರಿ ಜನಸ್ತೋಮ ದಲ್ಲಿ ಸಮಾನ ಮನಸ್ಕ ಕಾರ್ಯಕ್ರಮ ನಡೆಯಿತು. ಈ ವೇಳೆಯಲ್ಲಿ ನಾನು ಸುಮಾರು 15 ವರ್ಷಗಳಿಂದ ಒಂದು ಭಾರಿ ಶಾಸಕನಾಗಿ , ಈ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನ ಸಾಕಷ್ಟು ಮಾಡಿದ್ದೇನೆ . ಆದರೆ ಏರಡು ಸಾರಿ ಸೋಲನ್ನು ಅನುಭವಿಸಿದರು ಸಹ ನಾನು ಬಿಜೆಪಿ ಪಕ್ಷ ಬಿಡಲಿಲ್ಲ ಆದರೂ ನನ್ನ ಮತದಾರರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ನನಗೆ ಏನ್ ಕಷ್ಟ ಬಂದರೂ ಪಕ್ಷ ಬಿಟ್ಟು ಹೊರಟವನಲ್ಲ. ಬಿಜೆಪಿ ಮುಖಂಡರು ನಿನಗೆ ಟಿಕೆಟ್ ಕೊಟ್ಟಿದ್ದೇವೆ . ಅಂತ ಹೇಳಿ ಕೊನೆಗಳಿಗೆ ಯಲ್ಲಿ ಬೇರೆ ಅಭ್ಯರ್ಥಿಯನ್ನು ಘೋಷಣೆ ಮಾಡಿದರು. ಮುಂದಿನ ಬೆಳವಣಿಗೆಗೆ ನನ್ನ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ಮುಂದಿನ ಸ್ಪರ್ಧೆಗೆ ಇಳಿಯುತ್ತೇನೆ. ಎಂದು ಭಾವುಕರಾಗಿ , ತಮ್ಮ ಅಳನ್ನು ಕಾರ್ಯಕರ್ತರೊಂದಿಗೆ ತೋಡಿಕೊಂಡರು. ಶ್ರೀಮತಿ ವಾಣಿ ನೇಮರಾಜ್ ನಾಯ್ಕ ಮಾತನಾಡಿ, ದಯವಿಟ್ಟು ನಿಮ್ಮ ಸೇವೆಗಾಗಿ ನಮ್ಮ ಯಜಮಾನರನ್ನು ಒಂದು ಬಾರಿ ಬೆಂಬಲಿಸಿ, ನಿಮ್ಮ ಸೇವೆಗಾಗಿ ಸದಾ ಸಿದ್ಧರಿರುತ್ತಾರೆ. ಈ ಬಿಜೆಪಿ ಪಕ್ಷವು ಕೊನೆ ಗಳಿಗೆಯಲ್ಲಿ ಟಿಕೆಟ್ ಕೊಡದೆ ಮೋಸ ಮಾಡಿಬಿಟ್ಟರು. ದಯವಿಟ್ಟು ನಮ್ಮವರು ಯಾವುದೇ ಪಕ್ಷಕ್ಕೆ ನಿಂತರು ಅವರನ್ನು ಗೆಲ್ಲಿಸಿ, ಎಂದು ಸೆರೆಗೊಡ್ಡಿ ಅಳುತ್ತ ಬೇಡಿಕೊಂಡರು. ಹಾಗೂ ಇನ್ನೂ ಅನೇಕ ನೇಮಿರಾಜ್ ನಾಯಕ್ ಸ್ವಾಭಿಮಾನಿಗಳ ಹಿರಿಯ ಮುಖಂಡರುಗಳು ಮಾತನಾಡಿದರು. ಈ ವೇಳೆಯಲ್ಲಿ ಸಾವಿರಾರು ಕಾರ್ಯಕರ್ತರು .ಭಾಗವಹಿಸಿದ್ದರು. ಬಿಜೆಪಿಯ ಸದಸ್ಯರುಗಳು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;