ಸ್ಥಳೀಯರಿಗೆ ಬಿಜೆಪಿ ಟಿಕೆಟ್ ನೀಡುವಂತೆ ಮನವಿ
ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಎಸ್ ಟಿ ಮೀಸಲಾಗಿರುವುದರಿಂದ ಸ್ಥಳೀಯ ಎಸ್ ಟಿ ಅಭ್ಯರ್ಥಿಗಳನ್ನು ಲಿಂಗಾಯಿತರು ಗೆಲ್ಲುಸುವುದಿಲ್ಲ ಎಂಬ ಕಳಂಕ ಇದೆ. ಈ ಕಳಂಕವನ್ನು ತಪ್ಪಿಸಿಕೊಳ್ಳಬೇಕಾದರೆ ಬಿಜೆಪಿ ಹೈಕಮಾಂಡ್ ಸ್ಥಳೀಯರಿಗೆ ಈ ಬಾರಿ ಟಿಕೆಟ್ ಕೊಟ್ಟು ನೋಡಿ ನಾವು ಗೆಲ್ಲಿಸುತ್ತೇವೆ ಎಂದು ಬಿಜೆಪಿ ಹೈಕಮಾಂಡ್ ಸ್ಥಳೀಯ ಲಿಂಗಾಯಿತ ಮುಖಂಡರು ಆಗ್ರಹಿಸಿದರು.
ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ, ಶರಣನಗೌಡ ಮಾತನಾಡಿ ಲಿಂಗಾಯಿತರು ಸ್ಥಳೀಯ ಅಭ್ಯರ್ಥಿಗಳಿಗೆ ವಿರೋಧವಿಲ್ಲ ಹೈಕಮಾಂಡ್ ಸ್ಥಳೀಯ ಅಭ್ಯರ್ಥಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೊಟ್ಟು ನೋಡ್ಲಿ ನಾವು ಗೆಲ್ಲಿಸುತ್ತೇವೆಯೋ ಇಲ್ಲವೆಂಬುದು ಗೊತ್ತಾಗುತ್ತದೆ. ಹೈಕಮಾಂಡ್ ಸ್ಥಳೀಯರಿಗೆ ಟಿಕೆಟ್ ನೀಡದಿದ್ದರೆ ನಾವೇನು ಮಾಡಬಹುದು ಹೇಳಿ. ಈ ಬಾರಿ ಬಿಜೆಪಿ ಪಕ್ಷದ ಜಿಲ್ಲಾ ಮುಖಂಡರು ರಾಜ್ಯ ಮುಖಂಡರು ಸ್ಥಳೀಯ ಅಭ್ಯರ್ಥಿಗೆ ಯಾರಿಗೆ ನೀಡಲಿ ನಾವು ಒಗ್ಗಟ್ಟಿನಿಂದ ಅವರನ್ನು ಗೆಲ್ಲಿಸುತ್ತೇವೆ ಎಂದು ತಿಳಿಸಿದರು.
ಬಿಜೆಪಿಯ ಕೂಡ್ಲಿ ಮಂಡಲದ ಅಧ್ಯಕ್ಷ ಚನ್ನಪ್ಪ ಮಾತನಾಡಿ ಈ ಹಿಂದೆ ನಾಗೇಂದ್ರ ಅವರು ಕ್ಷೇತ್ರ ಬಿಟ್ಟು ಹೋಗುವಾಗ ತಮ್ಮ ಆಪ್ತರಿಗೆ ಕಾರ್ಯಕರ್ತರಿಗೆ ತಿಳಿಸಿ ಹೋಗಿದ್ದರು. ಆದರೆ ಎನ್ ವೈ ಗೋಪಾಲಕೃಷ್ಣ ಅವರು ಕಾರ್ಯಕರ್ತರಿಗೆ ತಿಳಿಸಿ ಹೋಗಬೇಕಿತ್ತು. ಅವರೊಬ್ಬ ಪ್ರಬುದ್ಧ ರಾಜಕಾರಣಿಯಾಗಿದ್ದು ಅವರು ವೈಯಕ್ತಿಕ ಕಾರಣಗಳಿಂದಾಗಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಆದರೆ ಹೋಗುವಾಗ ಕಾರ್ಯಕರ್ತರಿಗೆ ತಿಳಿಸಿ ಹೋಗಬೇಕಿತ್ತು, ಇದರಿಂದ ಕಾರ್ಯಕರ್ತರಲ್ಲಿ ತುಂಬಾ ನೋವಾಗಿದೆ. ಎಂದು ಬಿಜೆಪಿಯಲ್ಲಿ ಇಲ್ಲಿಯವರೆಗೂ ಸ್ಥಳೀಯರಿಗೆ ಟಿಕೆಟ್ ನೀಡಿಲ್ಲ ಎಂಬುದು ಅಪವಾದ ಇದೆ ಈ ಬಾರಿ ರಾಜ್ಯ ಮುಖಂಡರು ಸ್ಥಳೀಯ ಅಭ್ಯರ್ಥಿಗೆ ನೀಡಬೇಕೆಂದು ಹಾಗೂ ಸ್ಥಳೀಯವಾಗಿಯೇ ಪ್ರಮುಖರು ಸೇರಿ 13 ಮಂದಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎಂದರು.
ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಲಿಂಗಾಯತ ಮುಖಂಡ ಎಂಬಿ ಅಯ್ಯನಹಳ್ಳಿ ನಾಗಭೂಷಣ ಹಾಗೂ ಬೆಳಕಟ್ಟೆ ಕಲ್ಲೇಶ್ ಗೌಡ್ರು ಮಾತನಾಡಿ ಜಿಲ್ಲಾ ಮತ್ತು ರಾಜ್ಯ ಮುಖಂಡರಿಗೆ ಸ್ಪಷ್ಟವಾಗಿ ಹೇಳಲು ಬಯಸಿದ್ದೇವೆ.
2008 ಮತ್ತು 2013ರ ಹಾಗೂ 2018ರ ಮೂರು ಚುನಾವಣೆಗಳಲ್ಲಿಯೂ ಸಹ ನಮ್ಮ ಕೂಡ್ಲಿ ಕ್ಷೇತ್ರದ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ. ಹೀಗಾಗಿ ನಮ್ಮ ಎಸ್ ಟಿ ಸಮುದಾಯದ ಅಣ್ಣ-ತಮ್ಮಂದಿರಿಗೆ ಅನ್ಯಾಯವಾಗಿದೆ. ವೀರಶೈವರು ಕುರುಬರು ಯಾದವರು ಎಸ್ಸಿಎಸ್‌ಟಿ ಮುಖಂಡರು ಸೇರಿಕೊಂಡು ನಾವೆಲ್ಲ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎಂದರು
ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ರಾಮದುರ್ಗದ ಸೂರ್ಯ ಪಾಪಣ್ಣ ಹಾಗೂ ಎಸ್ ದುರ್ಗೇಶ್ ಮಾತನಾಡಿ ತಳಿಯ ಆಕಾಂಕ್ಷಿ ಪಟ್ಟಿಯಲ್ಲಿ ನಾನು ಒಬ್ಬ ಯಾರಿಗೆ ನೀಡಿದರು ನಾವು ಎಲ್ಲರೂ ಒಗ್ಗಟ್ಟಿನಿಂದ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಂಡು ಬರುತ್ತೇವೆ ಎಂದರು.
ಹಾಗೂ ಎಸ್ಸಿ ಮೋರ್ಚಾದ ಜಿಲ್ಲಾ ಕಾರ್ಯದರ್ಶಿಯಾದ ಎಸ್ ದುರ್ಗೇಶ್ ಮಾತನಾಡಿ ನನ್ನ ಪತ್ನಿ ಕೂಡ್ಲಿಗಿ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾಗಿದ್ದು ರಾಜಕೀಯ ಅನುಭವದ ಆಧಾರದ ಮೇಲೆ ಮಹಿಳಾ ಮೀಸಲು ಪರಿಗಣಿಸಿ ಸ್ಥಳೀಯರ ಸಾಲಿನಲ್ಲಿ ಪತ್ನಿ ರೇಣುಕಾ ದುರ್ಗೇಶ್ ಗೆ ಬಿಜೆಪಿ ಟಿಕೆಟ್ ಹೈಕಮಾಂಡ್ ಗೆ ತಾಲೂಕಿನ ಎಲ್ಲಾ ಬಿಜೆಪಿ ವಿವಿಧ ಮೋರ್ಚಾದ ಪದಾಧಿಕಾರಿಗಳು ನೀಡಲು ಒತ್ತಾಯಿಸಿದರು…

ವರದಿ. ವಿರೇಶ್. ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
