;

ಚಿತ್ರದುರ್ಗ ಹಾಗೂ ತುಮಕೂರು ಎರಡೂ ಜಿಲ್ಲೆಯಲ್ಲಿ ಬಹು ಸಂಖ್ಯಾತರಾದ ಕಾಡುಗೊಲ್ಲರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡದ ಕಾರಣ ಕಾಂಗ್ರೆಸ್ ಸೋಲಿಸಲು ಕಾಡುಗೊಲ್ಲರ ಕರೆ…!!!

ಚಿತ್ರದುರ್ಗ ಹಾಗೂ ತುಮಕೂರು ಎರಡೂ ಜಿಲ್ಲೆಯಲ್ಲಿ ಬಹು ಸಂಖ್ಯಾತರಾದ ಕಾಡುಗೊಲ್ಲರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡದ ಕಾರಣ ಕಾಂಗ್ರೆಸ್ ಸೋಲಿಸಲು ಕಾಡುಗೊಲ್ಲರ ಕರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಚಿತ್ರದುರ್ಗ ಚಳ್ಳಕೆರೆ ಹೊಸದುರ್ಗ. ಹೊಳಲ್ಕೆರೆ ತುಮುಕೂರು ಜಿಲ್ಲೆಯ ಶಿರಾ ಪಾವಗಡ, ಗುಬ್ಬಿ ಚಿಕ್ಕನಾಯಕನಹಳ್ಳಿ ಮಧುಗಿರಿ ಕೊರಟಗೆರೆ ಹಾಸನಜಿಲ್ಲೆ ಯ ಅರಸೀಕೆರೆ ಬಳ್ಳಾರಿ ಜಿಲ್ಲೆ ಮತ್ತು ದಾವಣಗೆರೆ ಜಿಲ್ಲೆಯಲ್ಲಿ 25 ಕ್ಷೇತ್ರಕ್ಕಿನ್ನ ಹೆಚ್ಚು ಕ್ಷೆತ್ರಗಳಲ್ಲಿ ಕಾಡುಗೊಲ್ಲರು ನಿರ್ಣಾಯಕರಗಿರುತ್ತಾರೆ. ಜೊತೆಗೆ ಸ್ವಾತಂತ್ರ ಬಂದಾಗಿಂದ ಕಾಂಗ್ರೆಸ್ ಪಕ್ಷಕ್ಕೆ ಕಾಡುಗೊಲ್ಲರ ಮತಗಳು ಸಂಪ್ರದಾಯಕ ಮತಗಳು ಆಗಿವೆ. ಇದನ್ನು ಲೆಕ್ಕಿಸದೆ ಕಾಂಗ್ರೆಸ್ ಪಕ್ಷ ಕಾಡುಗೊಲ್ಲರನ್ನ ನಿರ್ಲಕ್ಷಿಸುವ ಮೂಲಕ ಕಾಡುಗೊಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಹಿರಿಯೂರು ಚಿತ್ರದುರ್ಗ ಹಾಗೂ ಕ್ಷೇತ್ರಕ್ಕೆ 4 ರಿಂದ 5 ಜನ ಕಾಡು ಗೊಲ್ಲ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೂ ಶಿರಾ ಕ್ಷೇತ್ರಕ್ಕೆ ಡಾ. ಸಾಸಲು ಸತೀಶ್ ಒಬ್ಬರೇ ಅರ್ಜಿ ಸಲ್ಲಿಸಿದ್ದರು. ಶಿರಾ ಕ್ಷೇತ್ರಕ್ಕೆ ಸಾಸಲು ಸತೀಶ್ ರವರಿಗೆ ಟಿಕೆಟ್ ಕೊಟ್ಟೇ ಕೊಡುತ್ತೆವೆ ಎಂದು ಹೇಳಿದ ರಾಜ್ಯ ಕಾಂಗ್ರೆಸ್ ನಾಯಕರು ಕೊನೆ ಗಳಿಗೆಯಲ್ಲಿ ಜಯಚಂದ್ರ ರವರಿಗೆ ಟಿಕೆಟ್ ಕೊಟ್ಟು ಕಾಡುಗೊಲ್ಲರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇದರ ಪರಿಣಾಮ ಡಾ. ಪರಮೇಶ್ವರ್ ಜಯಚಂದ್ರ. ಕೆ. ಏನ್. ರಾಜಣ್ಣ ನವರಿಗೆ ಕಾಡುಗೊಲ್ಲರು ಮತಗಳು ಇವರ ವಿರುದ್ಧ ಚಲಾಯಿಸಿ ಇವರನ್ನು ಸೋಲಿಸಲು ಕರೆ ನೀಡಿದರು. ತುಮಕೂರು ಜಿಲ್ಲೆ ಮತ್ತು ಚಿತ್ರದುರ್ಗ ಜಿಲ್ಲೆಯ ಗೊಲ್ಲ ಜನಾಂಗದ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷ ಕಡೆಗಣಿಸಿ ಬೇರೆಯವರಿಗೆ ಟಿಕೆಟ್ ನೀಡಿರುವುದು ಕಾಂಗ್ರೇಸ್ ಪಕ್ಷದ ಸೋಲಿಗೆ ಕಾರಣವಾಗಬಹುದು ಎಂದು ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್ ರವರು ಹೋರಾಟ ಕಾಡುಗೊಲ್ಲ ಜನಾಂಗದ ಪರ ಹೋರಾಟ ನಡೆಸಿದರು. ನಮ್ಮ ಜನಾಂಗವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು. ಒಂದು ಪಕ್ಷದಲ್ಲಿ ನಮ್ಮ ಜನಾಂಗದ ಅಭ್ಯರ್ಥಿಗಳನ್ನು ಕಡೆಗಣಿದ್ದೆ ಆದರೆ ನಮ್ಮ ಜಿಲ್ಲೆಯಲ್ಲಿ ಮತ್ತು ತುಮಕೂರು ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಮತವನ್ನು ಹಾಕದೆ ಸೋಲಿಸಲು ಕಾಡುಗೊಲ್ಲರಿಗೆ ಕರೆ ನೀಡಿದರು.ಈ ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್ ,ರಂಗಸ್ವಾಮಿ, ಚಿತ್ತಯ್ಯ ಕುಮಾರ್ ನಾಗೇಂದ್ರಪ್ಪ ಮಂಜುನಾಥ್ ಶ್ರೀನಿವಾಸ್ ಕೃಷ್ಣ ಉಪಸ್ಥಿತರಿದ್ದರು..

ವರದಿ.ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *