;

ಈ ಬಾರಿ ಕೂಡ್ಲಿಗಿ ವಿಧಾನಸಭಾ ಚುನಾವಣೆಯಲ್ಲಿ ಕಮಲಕ್ಕೆ ಕುತ್ತು , ಕೈಗೆ ಸಿಗಲಿದೆ ತಾಲೂಕಿನ ಮತದಾರರ ಗಮ್ಮತ್ತು, ಈ ಬಾರಿ ತಾಲೂಕಿನಲ್ಲಿ ಕೈಯದ್ದೆ ಅದಿಕಾರದ ಗತ್ತು…!!!

ಈ ಬಾರಿ ಕೂಡ್ಲಿಗಿ ವಿಧಾನಸಭಾ ಚುನಾವಣೆಯಲ್ಲಿ ಕಮಲಕ್ಕೆ ಕುತ್ತು , ಕೈಗೆ ಸಿಗಲಿದೆ ತಾಲೂಕಿನ ಮತದಾರರ ಗಮ್ಮತ್ತು…!!!ಕೂಡ್ಲಿಗಿ ಕ್ಷೇತ್ರದ ಹಾಲಿ ಶಾಸಕರಾದ ಏನ್, ವೈ, ಗೋಪಾಲಕೃಷ್ಣ ರವರ ಹೆಸರು, ಬಿಜೆಪಿ ಪಕ್ಷದಲ್ಲಿ ಬಲು ಜೋರಾಗಿ ಕೇಳಿಬರುತ್ತಿದೆ ಅದೇನೋ ಅಭಿವೃದ್ಧಿಯ ಹರಿಕಾರರಂತೆ ಆದರೆ ಇಂದಿಗೂ ಬರೀ, ಸಿವಿಲ್ ಕಾಂಟ್ರಾಕ್ಟ್ ಗಳ ಕೈಗೊಂಬೆಯಂತೆ ವರ್ತಿಸುವ ಈತ ಇಂದಿಗೂ ಸಹ ಯಾವ ಕ್ಷೇತ್ರದ ಒಬ್ಬ ಸಾಮಾನ್ಯ ಮನುಷ್ಯರನ್ನು ಸಾಧಾರಣವಾಗಿ ಮಾತಾಡಿಸುವ ಅಭಿವೃದ್ಧಿಯ ಗುಣವನ್ನು ಹೊಂದಿಲ್ಲ ಎನ್ನುವ ಮಾತು ಬಲು ಜೋರಾಗಿ ಕೇಳಿ ಬರುತ್ತದೆ ಈ ಒಂದು ಕ್ಷೇತ್ರದಲ್ಲಿ.

ಇವತ್ತು ಏನೇ ಮಾಡಿದರೂ ಸಹ ಇಂದಿನ ಈ ಒಂದು ಕ್ಷೇತ್ರದ ಅಭಿವೃದ್ಧಿಯ ಮನೆ ಮಗನೆಂದು ಹೆಸರಾಗಿರುವ ಬಿ ನಾಗೇಂದ್ರ ಅವರು ಮಾಡಿರುವ ಎಲ್ಲಾ ಒಂದು ಅಭಿವೃದ್ಧಿ ಕಾರ್ಯಕ್ರಮಗಳು ಈಗ ಅಭಿವೃದ್ಧಿ ಹಂತಕ್ಕೆ ಬಂದಿವೆ ಹಾಲಿ ಶಾಸಕರು ಐದು ವರ್ಷದಲ್ಲಿ ಇಷ್ಟು ಮಾಡಲು ಸಾಧ್ಯವೇ ಎನ್ನುವ ಒಂದು ಪ್ರಶ್ನೆ ತಾಲೂಕಿನ ಎಲ್ಲಾ ಸಾರ್ವಜನಿಕರಲ್ಲಿ ಮೂಡಿಬರುತ್ತದೆ ಏಕೆ ಬರೀ ಸಿವಿಲ್ ಕಾಂಟಾಕ್ಟ್ಗಳನ್ನು ಹತ್ತಿರದಲ್ಲಿಟ್ಟುಕೊಂಡು ತನ್ನ ರಾಜಕೀಯವನ್ನು ತಾಲೂಕಿನಲ್ಲಿ ಮುಂದುವರಿಸಲು ಸಾಧ್ಯ ಬಡಬಗ್ಗ ರೈತರು ಸಾರ್ವಜನಿಕರು ಹಾಗೂ ಇನ್ನಿತರರು ಇವರಿಗೆ ಬೇಕಾಗಿಲ್ಲವೆ ಅವರು ಮಾತ್ರ ಮನುಷ್ಯರು ನಾವು ಸಾಮಾನ್ಯ ಮನುಷ್ಯರೆಂದು ಇವರು ದೂರ ಮಾಡುವುದು ಎಷ್ಟು ಸರಿ ಇಂತಹ ಒಂದು ಶಾಸಕರು ನಮಗೆ ಬೇಕೆ ನಮಗೆ ಸಾಮಾನ್ಯ ಜನರಿಗೆ ಮೊದಲು ಸ್ಪಂದಿಸುವ ಶಾಸಕರು ನಮಗೆ ಬೇಕು ಎನ್ನುವ ಒಂದು ಪ್ರಶ್ನೆ ಇಡೀ ತಾಲೂಕಿನಂತೆ ಕೇಳಿ ಬರುತ್ತಿದೆ, ಈ ಒಂದು ಕ್ಷೇತ್ರದಲ್ಲಿ ಈ ಬಾರಿ ತಾಲೂಕಿನಲ್ಲಿ , ಒಂದು ಓಟಿಗೆ ಬಾರಿ ನೋಟಿನ  ಡಿಮ್ಯಾಂಡ್ ಅಂತೇ ಅಂದರೆ ಎಲೆಕ್ಷನ್ ಎದುರಿಸಲು ಸುಮಾರು 40ರಿಂದ 45ಕೋಟಿ ಹಣವನ್ನು ಮಿಸಲಿಟ್ಟಿದ್ದಾರೆ ಸರ್ ಒಂದು ಓಟಿನ ಬೆಲೆಗೆ ಬಾರಿ ಬೆಲೆಯಂತೆ ಈ ಬಾರಿ ನೋಡೋಣ ಎನ್ನುತ್ತಾರೆ ನೊಂದ ಮಾತದಾರರು , ಹಾಲಿ ಈ ಒಬ್ಬ ಶಾಸಕನ ಮನೆ ಮುಂದೆ ಸಾಮಾನ್ಯ ವ್ಯಕ್ತಿ ಹೋದರು ಸಹ ದುರಂಕಾರದಿಂದ ಮಾತನಾಡುವಂಥ ವ್ಯಕ್ತಿ ನಮ್ಮ ಕ್ಷೇತ್ರಕ್ಕೆ ಬೇಕೆ ಎನ್ನುವ ಒಂದು ಸಾಮಾಜಿಕ ಕೂಗು ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ ಹೆಸರಿಗಷ್ಟೇ ಅಭಿವೃದ್ಧಿ ಹರಿಕಾರ ಮನೆ ಮುಂದೆ ಹೋದರೆ ಕ್ಷೇತ್ರ ಜನತೆಗೆ ಒಂದು ಲೋಟ ನೀರು ಸಹ ಕೊಡುವ ಮನೋಭಾವವಿಲ್ಲದ ವ್ಯಕ್ತಿ  ಇವರು ಏನು ಮಾಡೋದು ಹೇಳಿ, ಇಂತ ವ್ಯಕ್ತಿಯನ್ನು  ತೆಗೆದುಕೊಂಡು ಅದೇ ಹಳೆಯ ಶಾಸಕರದ ಬಿ,ನಾಗೇಂದ್ರಪ್ಪನವರ ಮನೆ ಮುಂದೆ ಹೋದರೆ ಯಾರೇ ಕ್ಷೇತ್ರದ ಜನತೆ ಆಗಿರಬಹುದು ಏನನ್ನಾದರೂ ಕೊಡುವ ಅಗತ್ಯವಿಲ್ಲದಿದ್ದರೂ ಸಹ ಅವರು ಯೋಗಕ್ಷೇಮ ಮತ್ತು ನಿಮ್ಮ ಸಂಕಟವನ್ನು ಆಲಿಸಿ ಕಳಿಸುವ ವ್ಯಕ್ತಿಯನ್ನು ನಾವು ಕಳೆದುಕೊಂಡು ಇಂದು ತಾಲೂಕು ಬರಿದಾಗಿದೆ ಎನ್ನುವ ಒಂದು ಕೂಗು ಬಲು ಜೋರಾಗಿ ಕೇಳಿ ಬರುತ್ತದೆ ಈ ಒಂದು ಕ್ಷೇತ್ರದಲ್ಲಿ ಮತದಾರರ ಮನದಾಳದ ಮಾತಿಗೆ ಸ್ಪಂದಿಸುವ ಒಂದು ಕಾರ್ಯಕ್ಕೆ ನಮ್ಮ ಒಂದು ಬರವಣಿಗೆ,ಅದೇನೋ 40%ಕಮಿಷನ್ಗೆ ಬಾರಿ ಮನ್ನಣೆ, ತಾಲೂಕಿನ ಮಣ್ಣಿನ ಮಕ್ಕಳಿಗೆ ದೋರಣೆ ಇಂತವರು ಯಾಕೆ ಬೇಕು ಅನ್ನುತ್ತಾರೆ ಕ್ಷೇತ್ರದ ಬಡ, ಹಾಗೂ ನಿರ್ಗತಿಕ ಮತದಾರರಿಗೆ ಇವರನ್ನು ಕಾಣುವುದೇ ಕಷ್ಟ ರೀ, ಅನ್ನುತ್ತಾರೆ ಮತದಾರ ಪ್ರಭುಗಳು,

ತಾಲೂಕಿನಲ್ಲಿ ಬಾರಿ ಕೆಲಸ ಮಾಡಿದ್ದರೆ, ಬಿಜೆಪಿ ಪಕ್ಷದ ವಿಜಯ ಯಾತ್ರೆ ಯಾಕೆ ಕ್ಷೇತ್ರದಲ್ಲಿ ಮಾಡುವ ಅವಶ್ಯಕತೆ ಇತ್ತು ಇವರಿಗೆ ಅಂದರೆ ತಾಲೋಕಿನ ಮತದಾರರ ಮನದಲ್ಲಿ ಇರುವ ಒಂದು ನಿರ್ಧಾರ ಗೊತ್ತಿರುವುದರಿಂದ ತಾನೇ ಅಷ್ಟೊಂದು ಭರವಸೆಯ ಆಶಯ ಇಲ್ಲದಿರುವ ಕಾರಣ ಇದೆಲ್ಲಾ ದೊಂಬರಾಟ ಯಾಕೆ..???

ಅಧಿಕಾರ ಮುಖ್ಯವಲ್ಲ, ಅಭಿವೃದ್ಧಿಯ ಕಾರ್ಯವೇ ಬಲು ಮುಖ್ಯ, ವಿ. ಲೋಕೇಶ್ ನಾಯಕ್,ಕ್ಷೇತ್ರದಲ್ಲಿ ಎಂತಹ ಪ್ರಭಾವಿ ರಾಜಕಾರಣಿ ಬಂದರೆ ನೇರವಾಗಿ ಟಕ್ಕರು ಕೊಡುವ ಹೆಸರಾಂತ ಅಭ್ಯರ್ಥಿ…!!”

ಅಧಿಕಾರವಿಲ್ಲದಿದ್ದರೂ ಹಠಬಿಡದಾ ಇಂತಹ ವ್ಯಕ್ತಿ ಸಮಾಜಕ್ಕೆ ಬೇಕು ಸುಮಾರು ವರ್ಷಗಳಿಂದ ಕೂಡ್ಲಿಗಿ ಕ್ಷೇತ್ರದ ಮನೆ ಮಗನಂದೆ ಹೆಸರುವಾಸಿಯಾಗಿರುವ ಈ ಒಂದು ವ್ಯಕ್ತಿ ಯಾರ ಅಧಿಕಾರದ ಆಮಿಷವನ್ನು ಒಡ್ಡದೆ ತನ್ನ ಸ್ವಂತ ಖರ್ಚಿನಲ್ಲಿ ಇಂದಿಗೂ ಸಹ ಕ್ಷೇತ್ರವನ್ನು ನೆಲೆ ಕಚ್ಚಿ ಎಲ್ಲಾ ಸಾರ್ವಜನಿಕರ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ಮಾಡುವುದನ್ನು ನೋಡಿದರೆ ಇವರಿಗೆ ನಿಜವಾದ ನಾಯಕರ ಗುಣವಿದೆ ಎನ್ನುವುದು ಕ್ಷೇತ್ರದ ಎಲ್ಲಾ ಗ್ರಾಮಗಳ ಸಾರ್ವಜನಿಕರಿಂದ ಬಲು ಜೋರಾಗಿ ಕೇಳಿ ಬರುವ ಮಾತಿದಾಗಿದೆ, ನೋಡಿ ಸರ್ ನೀವೇ ಸಹ ಬರುವುದು ಕಷ್ಟ ಹಿಂದಿಗೂ ಸಹ ಸಾಮಾನ್ಯ ವ್ಯಕ್ತಿ ಯಾರೇ ಆತನನ್ನು ಮದ್ಯ ರೋಡಲ್ಲಿ ನಿಂತು ಮಾತನಾಡಿಸಿದರೂ ನಗುಮುಖದಿಂದ ಮಾತನಾಡುವ ಇವರು ಕ್ಷೇತ್ರದ ಯಾವ ಹಳ್ಳಿಗೆ ಹೋದರು ಇವರ ಹೆಸರು ಚಿರಪರಿಚಿತ ಇಂದಿಗೂ ಅಧಿಕಾರದ ಒಂದು ಹುಚ್ಚನ್ನು ಒಂದಿರೋದೆ ಕ್ಷೇತ್ರವನ್ನು ನೆಲಕಚ್ಚಿ ನಿಂತು ಪ್ರತಿಯೊಂದು ಕಾರ್ಯಕ್ರಮಕ್ಕೆ ತನ್ನದೇ ಆದ ಕೊಡುಗೆಯನ್ನು ಕೊಟ್ಟ ಮಹಾನ್ ವ್ಯಕ್ತಿ ಇಂಥ ವ್ಯಕ್ತಿ ನಮ್ಮ ಕ್ಷೇತ್ರಕ್ಕೆ ಬೇಕು ಎನ್ನುವುದು ತುಂಬಾ ಬಲು ಜೋರಾಗಿ ಕೇಳಿ ಬರುತ್ತಿರುವ ಮಾತು ಸಾರ್ವಜನಿಕರಲ್ಲಿ ಈ ಬಾರಿ ಇವರಿಗೆ ಯಾವ ಪಕ್ಷದಿಂದ ಟಿಕೆಟ್ ಕೊಟ್ಟರು ಕೊಡದಿದ್ದರೂ ಸಹ ಸ್ವತಂತ್ರ ಅಭ್ಯರ್ಥಿಯಾಗಿ ನಿಂತರೂ ಸಹ ನಾಮ ಕ್ಷೇತ್ರದ ಎಲ್ಲಾ ಒಂದು ಸಾರಜನಿಕರು ಇವರಿಗೆ ಕೈಹಿಡಿಯುವುದು ಸತ್ಯ ಸಂಗತಿ ಮಾತು, ಏಕೆಂದರೆ ಬಡ ಮಕ್ಕಳಿಗೆ ಸರೋಜನಿಕರಿಗೆ ಪ್ರತಿಯೊಂದು ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮಗಳಿಗೆ ತನ್ನ ಕೈಲಾದಷ್ಟು ಸಹಾಯವನ್ನು ಮಾಡಿಕೊಂಡೆ ಬಂದಿರುವ ಇಂತಹ ವ್ಯಕ್ತಿ ನಮ್ಮ ಕ್ಷೇತ್ರಕ್ಕೆ ಬೇಕು ಇಂಥವರಿಗೆ ಅಧಿಕಾರ ಸಿಕ್ಕರೆ ನಿಜವಾಗಿಯೂ ಸಹ ಕ್ಷೇತ್ರ ಅಭಿವೃದ್ಧಿಯಾಗುವುದು ಎನ್ನುವುದೇ ನಮ್ಮ ಉದ್ದೇಶ ಎನ್ನುತ್ತಾರೆ ತಾಲೂಕಿನ ಎಲ್ಲಾ ಗ್ರಾಮಗಳ ಮತದಾರ ಪ್ರಭುಗಳು.

ಇವರ ಒಂದು ಅನಿಸಿಕೆಗೆ ನಮ್ಮ ಒಂದು ಪತ್ರಿಕ ಮಾಧ್ಯಮದ ವರದಿಗಾರ ಕೇಳಿದ ಪ್ರಶ್ನೆ. ಯಾಕೆ ಹಿಂದೆ ನಡೆದ ಚುನಾವಣೆಯಲ್ಲಿ ಇವರನ್ನು ಆಯ್ಕೆ ಮಾಡಿ ತರಬಹುದಿತ್ತಲ್ವ ನೀವು ಏಕೆ ಆ ಒಂದು ಕೆಲಸ ಮಾಡಲಿಲ್ಲ ಎನ್ನುವ ಒಂದು ಪ್ರಶ್ನೆಗೆ, ಮತದಾರ ಪ್ರಭುಗಳು ಕೊಟ್ಟ ಉತ್ತರವಿದು, ಸರ್ ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಇವರಿಗೆ ಟಿಕೆಟ್ ಕೊಟ್ಟಿದ್ದಾರೆ ಇವರೇ ಈ ಕ್ಷೇತ್ರದ ಹಾಲಿ ಶಾಸಕರಾಗಿರುತ್ತಿದ್ದರು ಆದರೆ ಟಿಕೆಟ್ ಕೊಡದ ಪಕ್ಷ ಬೇರೊಬ್ಬರ ಆಯ್ಕೆ ಮಾಡಿ ಬಲು ದೊಡ್ಡ ತಪ್ಪನ್ನು ಮಾಡಿದೆ ಎನ್ನುವುದು ನಮಗೂ ಸಹ ತುಂಬಾ ನೋವಾಗಿದೆ ಸರ್ ಈ ಬಾರಿ ಅವರು ಯಾವ ಪಕ್ಷದಿಂದ ನಿಂತರೂ ಸಹ ನಾವು ಅವರನ್ನು ಕೈ ಹಿಡಿಯುವುದು ಸತ್ಯ ಸಂಗತಿಯ ಮಾತು ಎನ್ನುತ್ತಾರೆ ಸಾರ್ವಜನಿಕರು ಕಾಯ್ದು ನೋಡೋಣ ಕೈಹಿಡಿಯುವರೋ ಅಥವಾ ಕೈ ಬಿಡುವರೋ ಎನ್ನುವುದನ್ನು ನೀವೇ ಉತ್ತರಿಸಿ.

ಕಾಂಗ್ರೆಸ್ ಪಕ್ಷ  ಯಾವೊಬ್ಬರ ಮಾತು ಕೇಳದೆ ಇವರಿಗೆ ಪಕ್ಷದಿಂದ ಟಿಕೆಟ್ ಕೊಟ್ಟರೆ ಇವರೇ  ಮುಂದಿನ ನಮ್ಮ ತಾಲೂಕಿನ ಶಾಸಕರು ಎನ್ನುತ್ತಾರೆ ತಾಲೂಕಿನ ಎಲ್ಲಾ ಗ್ರಾಮಗಳ ಸಾರ್ವಜನಿಕರು,2018ರ ಚುನಾವಣೆಯಲ್ಲಿಯೇ ಇವರಿಗೆ ಪಕ್ಷದಿಂದ ಟಿಕೆಟ್ ಕೊಟ್ಟಿದ್ದರೆ ಇಂದಿನ ಹಾಲಿ ಶಾಸಕರು ಇವರೇ ಇರುತ್ತಿದ್ದರು ಆದರೆ ಪಕ್ಷ ಸ್ವಲ್ಪ ಯಡವಟ್ಟು ಮಾಡಿಕೊಂಡಿದೆ ಅದೇ ತಪ್ಪು ಈ ಬಾರಿ ಮಾಡದಿದ್ದರೆ ಕೂಡ್ಲಿಗಿ ಈ ಬಾರಿ, ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಎನ್ನುವುದು ಮಾತ್ರ ಖಚಿತ, ಎನ್ನುತ್ತಾರೆ ಮತದಾರ ಪ್ರಭುಗಳು, ಹೇಳಿ ಕೇಳಿ, ಕಾಂಗ್ರೆಸ್ ಪಕ್ಷ ಲೋಕೇಶ್ ನಾಯಕ್ ರವರಿಗೆ ಟಿಕೆಟ್ ಕೊಟ್ಟರೆ, ಯಾವ ಪಕ್ಷದವರು ಎಷ್ಟು ಆಮಿಷ ಓಡ್ಡಿದರೂ ನಾವು ಮಾತ್ರ ಲೋಕೇಶ್ ನಾಯಕ್ ರವರ ಪಕ್ಷಕ್ಕೆ ಮತವನ್ನು ಹಾಕುತ್ತೇವೆ ಎನ್ನುತ್ತಾರೆ ತಾಲೂಕಿನ ಸುಮಾರು 80%ಮತದಾರರು ನೋಡೋಣ ವಿಜಯಲಕ್ಷ್ಮಿ ಯಾರಿಗೆ ಒಲೆಯುವಳು ಎಂಬುದನ್ನು…. ಎಚ್ಚರಿಕೆ ಇದು ನೈಜ್ಯ ಸುದ್ದಿಯ ಸಮೀಕ್ಷೆ

 

ವರದಿ. ಮುಕ್ಕಣ್ಣ ಹುಲಿಗುಡ್ಡ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *