;

ಆರೋಗ್ಯ ಶಿಬಿರದಲ್ಲಿ ಸಾವಿರಾರು ಜನರ ತಪಾಸಣೆ…!!!

ಆರೋಗ್ಯ ಶಿಬಿರದಲ್ಲಿ ಸಾವಿರಾರು ಜನರ ತಪಾಸಣೆ
ಕೂಡ್ಲಿಗಿ :- ಜನ್ಮ ಕೊಟ್ಟ ಮಾತೆ ಋಣ ಹಾಗೂ ಜನ್ಮ ನೀಡಿದ ಮಣ್ಣಿನ ಋಣ ತೀರಿ ಸುವುದು, ಪ್ರತಿಯೊಬ್ಬರ ಆಧ್ಯ ಕರ್ಥವ್ಯವಾಗಿದೆ. ಈ ನಿಟ್ಟಿನಲ್ಲಿ ವೈಧ್ಯರು ಹಾಗೂ ಸಮಾಜ ಸೇವಕರೂ ಆದ ಮಾಜಿ ಶಾಸಕ ದಿವಂಗತ ಶ್ರೀ ಎನ್‌ಟಿ ಬೊಮ್ಮಣ್ಣನವರ ಪುತ್ರ ಡಾ. ಎನ್.ಟಿ.ಶ್ರೀನಿವಾಸರವರು, ಉಚಿತ ಆರೋಗ್ಯ ಶಿಬಿರಗಳಂತಹ ಸಮಾಜ ಸೇವಾಕಾರ್ಯಗಳ ಮೂಲಕ. ಋಣ ತೀರಿಸುವ ಪ್ರಯತ್ನದಲ್ಲಿ, ಪ್ರಾಮಾಣಿಕತೆ ಮೆರದಿದ್ದಾರೆ ಎಂದು
ಕಾನಮಡಗು ದಾಸೋಹ ಮಠದ ಧರ್ಮಾಧಿಕಾರಿ ಐಮಡಿಶರಣಾರ್ಯರು ನುಡಿದರು. ಅವರು ಕಾನಹೊಸಹಳ್ಳಿಯ ಶರಣೇಶ್ವರ ವಿದ್ಯಾಸಂಸ್ಥೆ,ವಿದ್ಯಾ ನಿಕೇತನ ಶಾಲೆಯಲ್ಲಿ ಫೆಬ್ರವರಿ26 ಭಾನುವಾರದಂದು , ಡಾ, ಎನ್.ಟಿ.ಶ್ರೀನಿವಾಸ ಅಭಿಮಾನ ಬಳಗದಿಂದ. ಮಾಜಿ ಶಾಸಕ ದಿ,ಎನ್.ಟಿ.ಬೊಮ್ಮಣ್ಣ ನವರ ಸ್ಮರಣಾರ್ಥಕ ವಾಗಿ, ಆಯೋಜಿಸಲಾಗಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆಯನ್ನು ಗಣ್ಯರೊಂದಿಗೆ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ ಶುಗರ್ ಹೃದ್ರೋಗಹಾಗು ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿದೆ ಇವು ಶ್ರೀಮಂತ ಕಾಯಿಲೆಗಳಾಗಿದ್ದು ಬಡ ಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ಗ್ರಾಮೀಣ ಭಾಗದ ಬಡ ಜನರು ಕೂಲಿ ಕಾರ್ಮಿಕರು ನಿರ್ಗತಿಕರು ಕೂಲಿ ಮಾಡಿಕೊಂಡು ಬದುಕುವುದೇ ಕಷ್ಟ ಇಂತಹ ಕಾಯಿಲೆಗಳನ್ನು ತೋರಿಸಿಕೊಂಡು ಆರೋಗ್ಯವಂತರಾಗಿರಲು ಅಸಾಧ್ಯ ಕಾರಣ ಇಂತಹ ಉಚಿತ ಆರೋಗ್ಯ ಶಿಬಿರಗಳ ಮೂಲಕ ಚಿಕಿತ್ಸೆ ಗೋಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂದು ಹೇಳಿ ಇಂತಹ ಆರೋಗ್ಯ ಶಿಬಿರಗಳ ಮೂಲಕ ಧರ್ಮ ಕಾರ್ಯ ಮಾಡುತ್ತಿರುವ ಡಾ ಶ್ರೀನಿವಾಸ್ ರವರಿಗೆ ಶುಭವಾಗಲಿ ಎಂದು ಆಶೀರ್ವದಿಸಿದರು.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಯಾಗಿರುವ ಡಾ:ಎನ್, ಟಿ, ಶ್ರೀನಿವಾಸ್ ಮಾತನಾಡಿ ನಾನು ಕೂಡ ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದು, ಬಡತನದ ಪರಿಚಯ ನನಗೂ ಇದ್ದು ಒಂದು ಉನ್ನತ ಸ್ಥಾನಹೊಣೆ ಹೊಂದಿದ ಮೇಲೆ ಬಡ ಜನರ ಸೇವೆಯನ್ನು ಅವರ ಋಣವನ್ನು ಈ ರೀತಿಯ ಆರೋಗ್ಯ ಶಿಬಿರಗಳ ಮೂಲಕವೇ ತೀರಿಸಲು
ಸಾಧ್ಯ ಎಂಬುದನ್ನು ಅರಿತಿದ್ದೇನೆ ಎಂದರು ಈ ಶಿಬಿರದಲ್ಲಿ ಸಾಕಷ್ಟು ಜನ ತಾವೆಲ್ಲರೂ ಬಂದಿರುವುದು ನನಗೆ ತುಂಬಾ ಸಂತೋಷ ಯಾರು ಕೂಡ ಈ ಶಿಬಿರದ ಸೌಲಭ್ಯದಿಂದ ವಂಚಿತರಾಗಬೇಡಿ ಏಕೆಂದರೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಜಿಲ್ಲಾ ಪಂಚಾಯತಿಯಲ್ಲಿ ಹಂತ ಹಂತವಾಗಿ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುವುದು ಪ್ರತಿಯೊಬ್ಬರೂ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಲು ಹೇಳಿದರು ಈ ಶಿಬಿರದ ಕಾರ್ಯಕ್ರಮದಲ್ಲಿ ಶರಣೇಶ್ವರ ವಿದ್ವಾ ಸಂಸ್ಥೆಯ ಅಧ್ಯಕ್ಷರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆಎಂ ಶಶಿಧರ ಅವರು ಉಚಿತ ಆರೋಗ್ಯ ಶಿಬಿರದ ವಿಷಯದ ಬಗ್ಗೆ ಹಾಗೂ ಡಾ: ಶ್ರೀನಿವಾಸ್ ರವರ ಕುರಿತು ಮಾತನಾಡಿದರು.


ಈ ಶಿಬಿರದಲ್ಲಿ ಹೊಸಹಳ್ಳಿ ಸೇರಿದಂತೆ, ನೆರೆ ಹೊರೆ ಗ್ರಾಮಗಳ ಜನರು. ತಾಲೂಕಿನ ವಿವಿದ ಕಡೆಯಿಂದ ಆಗಮಿಸಿದ್ದ, ಸುಮಾರು 2000ಕ್ಕೂ ಹೆಚ್ಚಿನ ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಹಾಗೂ ಇತರೆ ಸಾವಿರಕ್ಕೂ ಹೆಚ್ಚು ಜನರು,ಇತರೆ ಅನಾರೋಗ್ಯಕ್ಕೆ ತಪಾಸಣೆ ಮಾಡಿಸಿಕೊಂಡರು. ಶಿಬಿರದಲ್ಲಿ ವೃದ್ಧರು, ಮಹಿಳೆಯರು,ಮಕ್ಕಳು, ಸೇರಿದಂತೆ. ಸಾವಿರಾರು ಜನರು ತಪಾಸಣೆ ಮಾಡಸಿಕೊಂಡರು. ಶಿಬಿರದಲ್ಲಿ ವಿಶೇಷ ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಮಾಡಿ ಸ್ಥಳದಲ್ಲಿ ಬಗೆಹರಿಯುವ ಕಾಯಿಲೆಗಳಿಗೆ ಔಷಧ ಮತ್ತು ಚಿಕಿತ್ಸೆ ನೀಡಿದರು ಇನ್ನು ಹೆಚ್ಚಿನ ಹಾಗೂ ಚಿಕಿತ್ಸೆ, ಮತ್ತು ವಿಶೇಷವಾಗಿ ಮಹಿಳೆಯರ ಖಾಯಿಲೆಗಳಿಗೆ ತಪಾಸಣೆ, ಚಿಕಿತ್ಸೆ ಮತ್ತು ಔಷಧಿ ವಿತರಣೆ, ಮಕ್ಕಳ ಖಾಯಿಲೆಗಳು, ಹೃದ್ರೋಗ,ಸಕ್ಕರೆ ಖಾಯಿಲೆ,ರಕ್ತದೊತ್ತಡ,ಕ್ಷಯ,ಜ್ವರ,ಅಲರ್ಜಿ, ಪಿತ್ತಕೋಶ ತೊಂದರೆ,ಹರ್ನಿಯಾ,ಮೂತ್ರಪಿಂಡದಲ್ಲಿ ಕಲ್ಲು,ಪೈಲ್ಸ್,ಮಲಬದ್ದತೆ,ಹೊಟ್ಟೆನೋವು, ಅಲ್ಸರ್, ಗ್ಯಾಸ್ಟ್ರಿಕ್,ಮೂಳೆ ಸವೆತ,ಕೀಲುನೋವು, ಬೆನ್ನುನೋವು,ಬೆನ್ನು ಹುರಿ ತೊಂದರೆ ಸೇರಿದಂತೆ ಇತರೆ ಖಾಯಿಲೆಗಳಿಗೆ.ಉಚಿತವಾಗಿ ತಪಾಸಣೆ ಮಾಡಲಾಯಿತು. ರೈತರು ಹಾಗೂ ಕಾರ್ಮಿಕರು, ಸರ್ವ ಸಾರ್ವಜನಿಕರು. ಶಿಬಿರದ ಸದುಪಯೋಗ ಪಡೆದುಕೊಂಡರು. ಹೊಸಹಳ್ಳಿ ಗ್ರಾಮದ ಮುಖಂಡರು, ಸ್ಥಳೀಯ ವಿವಿದ ಜನಪ್ರತಿನಿಧಿಗಳು, ವಿವಿದ ಸಂಘ ಸಂಸ್ಥೆಗಳ ಮುಖಂಡರು, ಸಮಾಜ ಸೇವಕರು, ಗಣ್ಯಮಾನ್ಯರು,ವೇದಿಕೆಯಲ್ಲಿದ್ದರು. ಡಾ,ಎನ್.ಟಿ.ಶ್ರೀನಿವಾಸರು ನೇತೃತ್ವದಲ್ಲಿ ಬೆಂಗಳೂರು, ಇಂಗ್ಲೆಂಡ್, ತುಮಕೂರು ಹಲವು ವೈದ್ಯರ ತಂಡ ಹಾಗೂ ಸಿಬ್ಬಂದಿ, ಎನ್.ಟಿ.ಶ್ರೀನಿವಾಸ ಅಭಿಮಾನಿ ಬಳಗದ ಸರ್ವಪದಾಧಿಕಾರಿಗಳು. ಹಾಗೂ ಸರ್ವ ಸದಸ್ಯರು, ಕೂಡ್ಲಿಗಿ ತಾಲೂಕಿನ ವಿವಿದ ಭಾಗದ ನಾಗರೀಕರು ಸಾರ್ವಜನಿಕರು, ಶರಣೇಶ್ವರ ವಿದ್ಯಾಸಂಸ್ಥೆಯ ಸಿಬ್ಬಂದಿ ವರ್ಗ. ಶಿಬಿರದಲ್ಲಿ ಭಾಗಿಯಾಗಿದ್ದರು
ಕಾನ ಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಶಿಬಿರಕ್ಕೆ ಸಹಕಾರ ನೀಡಲಾಗಿತ್ತು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;