;

ಯಲಬುರ್ಗಾ ಪದವಿ ಕಾಲೇಜಿನಲ್ಲಿ ಅಣುಕು ಮತದಾನ…!!!

ಯಲಬುರ್ಗಾ ಪದವಿ ಕಾಲೇಜಿನಲ್ಲಿ ಅಣುಕು ಮತದಾನ

ಕೊಪ್ಪಳ : 18 ವರ್ಷ ತುಂಬಿದ ಪ್ರತಿಯೊಬ್ಬರೂ ಸಂವಿಧಾನ ಬದ್ದವಾಗಿ ಬಂದಿರುವ ಮತದಾನದ ಹಕ್ಕನ್ನು ಚಲಾಯಿಸಬೇಕು. ಚುನಾವಣೆಯಲ್ಲಿ ಕಡ್ಡಾಯ ಮತದಾನ ಮಾಡಬೇಕು ಎಂದು ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ ಅವರು ಹೇಳಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಸ್ವೀಪ್ ಸಮಿತಿ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಫೆ.28ರಂದು ನಡೆದ ಜಿಲ್ಲಾ ಸ್ವೀಪ್ ಕಾರ್ಯಕ್ರಮ ಹಾಗೂ ಇವಿಎಂ ಮತ್ತು ವಿವಿಪ್ಯಾಟ್‌ಗಳ ಕುರಿತ ಯುವ ಮತದಾರರಿಗೆ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪದವಿ ವಿದ್ಯಾರ್ಥಿಗಳು ಮತದಾನದ ಬಗ್ಗೆ ಅರಿವು ಹೊಂದಬೇಕು. ತಾವು ಮತದಾನ ಮಾಡುವುದರ ಜತೆಗೆ ಇತರರಿಗು ಸಹ ಮತದಾನ ಮಾಡಲು ತಿಳಿಸಬೇಕು. ಅಂದಾಗ ಮಾತ್ರ ಶೇಕಡಾ 100 ರಷ್ಟು ಮತದಾನ ಆಗಲು ಸಾಧ್ಯ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಂಶುಪಾಲರಾದ ಶಿವರಾಜ ಗುರಿಕಾರ, ತಾಪಂ ಸಹಾಯಕ ನಿರ್ದೇಶಕರಾದ ಗೀತಾ ಅಯ್ಯಪ್ಪ, ಯೋಜನಾಧಿಕಾರಿಗಳಾದ ಶಿವರಾಜ, ತರಬೇತುದಾರರಾದ ಮಂಜುನಾಥ, ಶೇಖಪ್ಪ, ಸಹ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ತರಬೇತಿ ವೇಳೆ ವಿದ್ಯರ್ಥಿಗಳು ಹುಮ್ಮಸ್ಸಿನಿಂದ ಅಣುಕು ಮತದಾನ ಮಾಡಿದರು…

ವರದಿ. ಸಂಗೀತ ಪಾಟೀಲ್. ಕೊಪ್ಪಳ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;