ಕ್ಯಾನ್ಸರ್ ಕಾಯಿಲೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ: ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್ ಎಂ.ಡಿ…!!!

ಕ್ಯಾನ್ಸರ್ ಕಾಯಿಲೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಗತ್ಯವಿದೆ: ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್ ಎಂ.ಡಿ

ಕ್ಯಾನ್ಸರ್ ಪ್ರಥಮ ಹಂತದಲ್ಲಿ ಗುರುತಿಸಿದರೆ ಗುಣಪಡಿಸಿಕೊಳ್ಳುವ ಕಾಯಿಲೆ‌. ನಿರ್ಲಕ್ಷ್ಯ ಬೇಡ ಕ್ಯಾನ್ಸರ್ ಲಕ್ಷಣ ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ. ಕ್ಯಾನ್ಸರ್ ಕಾಯಿಲೆ ಬಗ್ಗೆ ಆರೋಗ್ಯ ಸಿಬ್ಬಂದಿಗಳು ಸಾರ್ವಜನಿಕರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್ ಎಂ.ಡಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಆಸಾಂಕ್ರಮಿಕ ರೋಗಗಳ ಘಟಕ(ಎನ್.ಸಿ.ಡಿ)ದ ಸಹಯೋಗದಲ್ಲಿಂದು ನಡೆದ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕ್ಯಾನ್ಸರ್‌ ಕಾಯಿಲೆಗೆ ಪ್ರಥಮ ಹಂತದಲ್ಲಿಯೆ ಚಿಕಿತ್ಸೆ ತೆಗೆದುಕೊಂಡರೆ ಅದು ಮಾರಣಾಂತಿಕ ಆಗುವುದಿಲ್ಲ. ಭಾರತ ದೇಶದಲ್ಲಿನ ಜನರು ಅತಿಹೆಚ್ಚು ಸಾವನ್ನಪ್ಪುತ್ತಿರುವುದು ಕ್ಯಾನ್ಸರ್ ಕಾಯಿಲೆಯಿಂದ. ದೇಶದ ಅತೀ ಹೆಚ್ಚು ಕ್ಯಾನ್ಸರ್ ರೋಗಿ ಹೊಂದಿರುವ ರಾಜ್ಯ ಕೇರಳ ವಾಗಿದ್ದು, ಕರ್ನಾಟಕ 6 ಸ್ಥಾನದಲ್ಲಿದೆ ಎಂದರು.

ಕ್ಯಾನ್ಸರ್ ಬರುವುದಕ್ಕೆ ಮುಖ್ಯ ಕಾರಣ ತಂಬಾಕು ಸೇವೆನೆ, ಅದ್ದರಿಂದ ತಂಬಾಕು ಸೇವನೆಯಿಂದ ದೂರವಿದ್ದು ಮಂಡ್ಯ ಜಿಲ್ಲೆಯನ್ನು ತಂಬಾಕು ಮುಕ್ತ ಜಿಲ್ಲೆಯನ್ನಾಗಿಸೋಣ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರಾಗೃಹ ಅಧೀಕ್ಷಕರಾದ ಟಿ.ಕೆ ಲೋಕೆಶ್, ಜಿಲ್ಲಾ‌ ಶಸ್ತ್ರ ಚಿಕಿತ್ಸಕರಾದ ಡಾ.ನಾಗರಾಜು,ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ ಸೇರಿದಂತೆ ಇನ್ನಿತರರು ಹಾಜರಿದ್ದರು…

ವರದಿ. ಸುರೇಶ್. ಮಂಡ್ಯ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend