;

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊ? ಅಥವಾ ಕಡಪ ಕಲ್ಲಿನ ಮಾರ್ಕೆಟೋ???

ಹುರುಳಿಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗ ಕಡಪ ಬಂಡೆಗಳು ಇದನ್ನು ಕೇಳುವರು ಯಾರು?

ಕೂಡ್ಲಿಗಿ: ತಾಲೂಕಿನ ಹುರುಳಿಹಾಳು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಬಾಗ ಖಾಸಗಿಯವರ ಕಡಪ ಬಂಡೆಗಳು ಸುಮಾರು ದಿನಗಳಿಂದ ಶಾಲೆಯ ಕಾಂಪೌಂಡ್ ಮುಂದೆಯೇ ಇದ್ದು, ಆದರೆ ಇಲ್ಲಿನ ಶಿಕ್ಷಕರು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯವರು‌ ಈ ಕಡಪ ಕಲ್ಲುಗಳನ್ನು ತೆರವುಗೊಳಿಸದೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಅದೆಷ್ಟು ಸರಿಯೆಂದು ಇಲ್ಲಿನ ಗ್ರಾಮಸ್ಥರ ಪ್ರಶ್ನೆಯಾಗಿದೆ.

ಹಾಗೂ ಶಾಲೆಯ ಮುಂಭಾಗವೇ ‌ ಸಾರ್ವಜನಿಕ ಕಸದ ರಾಶಿ, ಮತ್ತು ತಿಪ್ಪೆಗಳು ಈ ಶಾಲೆಯನ್ನು ನೋಡಿದರೆ ಇದು ಸರ್ಕಾರಿ ಶಾಲೆಯ ಜಾಗವೋ? ಇಲ್ಲವೇ ಅನುಮಾನ ಮೂಡುತ್ತಿರುವುದು ಇಲ್ಲಿನ ಅವ್ಯವಸ್ಥೆಗಳೇ ಕಾರಣ ಎಂದು ಇಲ್ಲಿನ ಸ್ಥಳೀಯರ ಪ್ರಶ್ನೆಯಾಗಿದೆ, ಹಾಗೂ ಸುತ್ತಮುತ್ತ‌ ಎಲ್ಲಿ ನೋಡಿದರೂ ಗಿಡಗಂಟೆಗಳು, ಕಸದ ರಾಶಿ, ಸಾರ್ವಜನಿಕ ತಿಪ್ಪೆಗಳು, ಇದೆಲ್ಲವನ್ನು ನೋಡಿದರೆ ಈ ಶಾಲೆಯ ಪರಿಸ್ಥಿತಿ ಮತ್ತು ಸ್ವಚ್ಛತೆ ಅದೆಷ್ಟು ಸರಿಯಾಗಿದೆ ಅನ್ನುವುದೇ ಇಲ್ಲಿನ ಜನರ ಪ್ರಶ್ನೆಯಾಗಿದೆ? ಅದಕ್ಕಾಗಿ ಇಲ್ಲಿನ ಗ್ರಾಮ ಪಂಚಾಯಿತಿಯವರು, ಶಾಲೆಯ ಮುಖ್ಯ ಗುರುಗಳು, ಎಸ್ ಡಿ ಎಂ ಸಿ ಯವರು, ಜನಪ್ರತಿನಿಧಿಗಳು ಕೂಡಲೇ ಸಂಬಂಧಪಟ್ಟವರು, ಶಾಲೆಯ ಮಕ್ಕಳ ವಿದ್ಯಾಭ್ಯಾಸದ ಹಿತ ದೃಷ್ಟಿಯಿಂದ ಶಾಲಾ ಕಾಂಪೌಂಡ್ ಮುಂದುಗಡೆ ಇರುವ‌ ಕಡಪ ಕಲ್ಲುಗಳನ್ನು ತೆರವುಗೊಳಿಸಲು ಜನರು ಆಗ್ರಹಿಸಿದರು…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;