ವರ್ತಕರು ಹಾಗೂ ರೈತರ ನಡುವೆ ಇರುವ ಸಂಬಂಧ ಉತ್ತಮವಾದದ್ದು!!!! ಕೂಡ್ಲಿಗಿ:ದಿ.12-1-23 ಗುರುವಾರ ಪಟ್ಟಣದ ಕೃಷಿ ಮಾರುಕಟ್ಟೆ ಇಲಾಖೆ ಕೂಡ್ಲಿಗಿ ಪಟ್ಟದಲ್ಲಿ ನೂತನ ಮುಖ್ಯ ಮಾರುಕಟ್ಟೆ ಕಚೇರಿಯನ್ನು ಉದ್ಘಾಟನೆಯನ್ನು ಮಾನ್ಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಅವರು ನೆರವೇರಿಸಿದ ನಂತರ ಮಾತನಾಡಿದ ಶಾಸಕರು.

ಕೊಟ್ಟೂರು ಎಪಿಎಂಸಿಯಿಂದ ವಿಭಜನೆಗೊಂಡು ಕೂಡ್ಲಿಗಿಯಲ್ಲಿದ್ದ ಎಪಿಎಂಸಿ ಮಾರುಕಟ್ಟೆಯನ್ನು ಅನೇಕ ವರ್ಷಗಳ ಹಿಂದೆ ಆರಂಭವಾಗಿತ್ತು ಆದರೂ ಇದನ್ನು ಪ್ರತ್ಯೇಕ ಖರೀದಿ ಕೇಂದ್ರವನ್ನು ತೆರೆಯುವುದಕ್ಕೆ ಸಾಕಷ್ಟು ರೀತಿಯಲ್ಲಿ ಕೃಷಿ ಮಾರುಕಟ್ಟೆ ಇಲಾಖೆಯವರ ಜೊತೆ ಚರ್ಚಿಸಿ ಇಲ್ಲಿನ ರೈತರ ಬಹಳ ದಿನಗಳಿಂದ ಬೇಡಿಕೆಯಾಗಿದ್ದ ಈ ಎಪಿಎಂಸಿ ಮಾರುಕಟ್ಟೆಯನ್ನು ಪ್ರತ್ಯೇಕ ಕೂಡ್ಲಿಗಿಯಲ್ಲಿಯೇ ನಡೆಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಅದಕ್ಕಾಗಿ ವರ್ತಕರು ಹಾಗೂ ರೈತರ ಸಂಬಂಧ ಉತ್ತಮವಾದದ್ದು ಎಂದು ಈ ಸಂದರ್ಭದಲ್ಲಿ ತಿಳಿಸಿದರು ರೀತಿಯಾಗಿ ಖರೀದಿ ಕೇಂದ್ರವನ್ನು ಮಾಡಲು ಇಲ್ಲಿಯವರೆಗೂ ನೆನೆಗುಂದಿಗೆ ಬಿದ್ದಿದ್ದ ಕಾರಣ ತಾಲೂಕಿನ ಜನತೆಗೆ ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನ ಖರೀದಿ ಕೇಂದ್ರ ಆರಂಭಿಸಲಾಗಿದೆ ಅದಕ್ಕಾಗಿ ವರ್ತಕರು ಮತ್ತು ರೈತರ ನಡುವೆ ಇರುವ ಸಂಬಂಧ ಉತ್ತಮವಾದದ್ದು ಈ ಸಂದರ್ಭದಲ್ಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಬಳ್ಳಾರಿ ಮತ್ತು ವಿಜಯನಗರ ಕೃಷಿ ಮಾರುಕಟ್ಟೆ ಇಲಾಖೆ ಉಪ ನಿರ್ದೇಶಕರಾದ ಎಸ್. ಶಾಮ್ ರವರು ಇಲ್ಲಿನ ಎಪಿಎಂಸಿಯ, ಸಿಬ್ಬಂದಿಗಳು ಹಾಗೂ ಮಾನ್ಯ ಶಾಸಕರು ವಿಶೇಷ ಮುತುವರ್ಜಿ ವಹಿಸಿ ಪ್ರತ್ಯೇಕ ಎಪಿಎಂಸಿ ಮಾರುಕಟ್ಟೆಯನ್ನು ಕೂಡ್ಲಿಗಿಯಲ್ಲಿಯೇ ಖರೀದಿ ಕೇಂದ್ರ ಆರಂಭಿಸುವುದಕ್ಕೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚಿಸಿ ಇಲ್ಲಿನ ರೈತರಿಗೆ ಅನುಕೂಲ ಮಾಡಿ ಕೊಟ್ಟಿರುವುದು ಇವರ ಬಹಳ ದಿನಗಳ ಬೇಡಿಕೆಯಾಗಿರುತ್ತದೆ ಎಂದು ತಿಳಿಸಿದರು.

ಮಾನ್ಯ ತಹಶೀಲ್ದಾರ್ ಟಿ. ಜಗದೀಶ್, ತಾ.ಪಂ.ಕಾ.ನಿ. ಅಧಿಕಾರಿ ವೈ ರವಿಕುಮಾರ್ ಪ.ಪಂ. ಅಧ್ಯಕ್ಷೆ ಎಂ.ಶಾರದಭಾಯಿ, ಉಪಾಧ್ಯಕ್ಷೆ ಶ್ರೀಮತಿ ರೇಣುಕಾ ದುರುಗೇಶ್, ಎಪಿಎಂಸಿ ಅಧ್ಯಕ್ಷ ಪೂಜಾರ್ ದುರುಗೇಶ್, ಉಪಾಧ್ಯಕ್ಷ ಜಿ. ಸಿದ್ದೇಶ್, ಕಾನಮಡುಗು ತಿಪ್ಪೇಸ್ವಾಮಿ, ಕೂಡ್ಲಿಗಿ ಪಟ್ಟಣ ಪಂಚಾಯಿತಿ ಸದಸ್ಯರಾದ ಕಾವಲ್ಲಿ ಶಿವಪ್ಪ ನಾಯಕ, ಪಿ .ಚಂದ್ರು, ತಳಾಸ್ ವೆಂಕಟೇಶ್, ಪೂರ್ಯ ನಾಯಕ್, ಕೂಡ್ಲಿಗಿ ಮಂಡಲ ಬಿಜೆಪಿ ಅಧ್ಯಕ್ಷ ಕೆ.ಚನ್ನಪ್ಪ, ರೈತ ಮುಖಂಡರುಗಳಾದ ಕಕ್ಕುಪ್ಪಿ ಬಸವರಾಜ್, ದೇವರ ಮನೆ ಮಹೇಶ್, ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಬಣವಿಕಲ್ಲು ಎರ್ರಿಸ್ವಾಮಿ, ಸೂರ್ಯ ಪಾಪಣ್ಣ, ಭೀಮೇಶ್, ಮಂಜುನಾಥ್ ನಾಯಕ, ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಬಿ. ಸರಸ್ವತಿ ರಾಘವೇಂದ್ರ, ಬಿಜೆಪಿ ನಗರ ಘಟಕದ ಅಧ್ಯಕ್ಷ ನಾರಾಯಣ ಗುನ್ನಳ್ಳಿ, ಬಣವಿಕಲ್ಲು ಪ್ರಥಮ ದರ್ಜೆ ಗುತ್ತಿಗೆದಾರರಾದ ಕೆ. ನಾಗರಾಜ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಚ್. ರೇವಣ್ಣ ಹಾಗೂ ತಾಲೂಕಿನ ರೈತರು ಹಾಗೂ ಬಿಜೆಪಿ ಮುಖಂಡರುಗಳು ತಾಲೂಕಿನ ಗ್ರಾಮದ ಹಲವಾರು ಗ್ರಾಮಸ್ಥರು ಇದ್ದರು.

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
