ದೂರದ ಇಂಗ್ಲೇಂಡ್ ದೇಶದಲ್ಲಿ ಮನೋವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ರವಿಕಿರಣ್ ಚಿಂತನ ಚೇತನ ಕಾರ್ಯಕ್ರಮದಲ್ಲಿ ಉಪನ್ಯಾಸ!!!!! ಕೂಡ್ಲಿಗಿ: ದಿನಾಂಕ.11-1-23 ಬುಧವಾರ ಕೂಡ್ಲಿಗಿಯ ಜೆಸಿಐ, ಚಿಂತನ ಚೇತನ ಮೈದಾನ ಗೆಳೆಯರ ಬಳಗ ಇವರ ಸಹಯೋಗದಲ್ಲಿ ಕೂಡ್ಲಿಗಿ ಪಟ್ಟಣದ ಹುತಾತ್ಮ ಸ್ಮಾರಕದಲ್ಲಿ ಇಂದು ಸಂಜೆ 7: ಗಂಟೆಗೆ ನಡೆಯುವ ಚಿಂತನ ಚೇತನ ಕಾರ್ಯಕ್ರಮದಲ್ಲಿ ಇಂಗ್ಲೆಂಡಿನಲ್ಲಿ ಮನೋವೈದ್ಯರಾಗಿರುವ ಡಾ. ರವಿಕಿರಣ್ ಕಬ್ಬೂರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಡಾ. ರವಿಕಿರಣ್ ಅವರು ಇಂಗ್ಲೆಂಡಿನಲ್ಲಿ ಮನೋವೈದ್ಯರಾಗಿದ್ದಾರೆ ಇವರು ಪ್ರಾಥಮಿಕ ಶಿಕ್ಷಣವನ್ನು ಶಿವಮೊಗ್ಗದ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದಾರೆ. ಮೈಸೂರಿನಲ್ಲಿ ವೈದ್ಯಕೀಯ ಶಾಸ್ತ್ರ ಪದವಿ ಪಡೆದು ಪ್ರತಿಷ್ಠಿತ ಲಂಡನ್ ರಾಯಲ್ ಕಾಲೇಜ್ ಸೈಕ್ರಿಯಾಕ್ಟಿಸ್ ಸಂಯೋಜಕ ಸದಸ್ಯರಾಗಿದ್ದಾರೆ, ಕಳೆದ 20 ವರ್ಷಗಳಿಂದ ಇಂಗ್ಲೆಂಡಿನಲ್ಲಿ ಮನೋವೈದ್ಯರಾಗಿರುವ ಇವರು ಕಲಿಕೆಯಲ್ಲಿ ಅಸಮರ್ಥತೆಯ ಮನೋವೈದ್ಯಶಾಸ್ತ್ರದಲ್ಲಿ ಕನ್ಸಲ್ಟೆಂಟ್ ಆಗಿದ್ದಾರೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೂಡ್ಲಿಗಿ ತಾಲೂಕಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಇವರ ಉಪನ್ಯಾಸವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ…

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
