;

ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಗೋವರ್ಧನ್ ಅವರ ನೇತೃತ್ವದಲ್ಲಿ ಸಭೆ…!!!

ಬಳ್ಳಾರಿ:ಜ (10)ರಂದು  ನಗರದ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಗೋವರ್ಧನ್ ಅವರು ಸದಾಶಿವ ಆಯೋಗದ ಕುರಿತು  ಮಾತನಾಡಿದರು.  ಹಾಗೂ ಭಾರತದಲ್ಲಿ ಹಲವಾರು ಜಾತಿಗಳಿವೆ. ಇಲ್ಲಿ ಮೇಲ್ಜಾತಿಗಳು , ಮೇಲ್ವವರ್ಗಗಳು, ಕೆಳಜಾತಿಗಳು, ಕೆಳವರ್ಗಗಳು ಶತಮಾನಗಳ ಕಾಲ ಕೆಳಜಾತಿಯ ಜನರಿಗೆ ಶಿಕ್ಷಣದ ಹಕ್ಕು, ಆಸ್ತಿಯ ಹಕ್ಕು, ಸ್ವಾತಂತ್ರ್ಯದ ಹಕ್ಕು ಇತ್ಯಾದಿಗಳನ್ನು ನಿರಾಕರಿಸಿ ಶೋಷಿತ ಗುಲಾಮರಂತೆ ನಡೆಸಿಕೊಂಡು ಬರಲಾಯಿತು. ಈ ರೀತಿಯ ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯನ್ನು ತರಬೇಕೆಂಬುದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕನಸಾಗಿತ್ತು. ಮುಂದುವರೆದು ಈ ದೇಶದಲ್ಲಿರುವ ಭೂಮಿ, ಬಂಡವಾಳ, ಅಧಿಕಾರ, ಸಂಪತ್ತು ಈ ದೇಶದಲ್ಲಿರುವ ಎಲ್ಲಾ ಜನರಿಗೂ ಸಮನಾಗಿ ಹಂಚಿಕೆಯಾದಾಗ ಮಾತ್ರ ಎಲ್ಲರಿಗೂ ಸಮಾನತೆ ಸಿಗುತ್ತದೆಂದು ಹೇಳಿದ್ದರು.


ಅದೇ ರೀತಿ ಭಾರತದಲ್ಲಿ ಬ್ರಾಹ್ಮಣನಿಂದ ಅಸ್ಪೃಶ್ಯ ಜನಾಂಗಗಳವರೆಗೆ ಶ್ರೇಣಿಕೃತ ಜಾತಿ ಪದ್ಧತಿ ಹಾಗೂ ಸಾಮಾಜಿಕ, ಆರ್ಥಿಕ ಅಸಮಾನತೆಗಳು ಶತಮಾನದಿಂದಿವೆ. ಶೂದ್ರ ಹಾಗೂ ಅತಿ ಶೂದ್ರರಾದ ಪರಿಶಿಷ್ಟ ಜನಾಂಗಗಳಲ್ಲಿಯೂ ಸಹ ಶ್ರೇಣಿಕೃತ ವ್ಯವಸ್ಥೆ ತನ್ನ ಕೆನ್ನಾಲಿಗೆ ಚಾಚಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಒಟ್ಟು ಜನಸಂಖ್ಯೆಯ ಆಧಾರದ ಮೇಲೆ ಕ್ರಮವಾಗಿ ಶೇ 15 ಮತ್ತು ಶೇ 3 ಮೀಸಲಾತಿಯು ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ರಂಗಗಳಲ್ಲಿ ಜಾರಿಯಲ್ಲಿದೆ. ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಮಾದಿಗ, ಹೊಲೆಯ, ಕೊರಮ, ಕೊರಚ, ಲಮಾಣಿ ಭೋವಿ, ಸಮಗಾರ ಇತ್ಯಾದಿ ನೂರಾರು ಉಪಜಾತಿಗಳು ಸೇರ್ಪಡೆಯಾಗಿದ್ದು, ಇವೂ ಸಹ ಮನುವಾದಿ ಶ್ರೇಣಿಕೃತ ವ್ಯವಸ್ಥೆಯಿಂದಾಗಿ ಒಂದರ ಕೆಳಗೆ ಮತ್ತೊಂದು ಸಿಕ್ಕಿಕೊಂಡಿದ್ದು, ಅತೀ ದುರ್ಬಲ ಪರಿಶಿಷ್ಟ ಜಾತಿಗಳು ಅವಕ್ಕಿಂತ ಒಂದಿಷ್ಟು ಸಬಲರಾದ ಪರಿಶಿಷ್ಟ ಜಾತಿಗಳೊಂದಿಗೆ ಸ್ಪರ್ಧಿಸಿ ಮೀಸಲಾತಿ ಅವಕಾಶ ಪಡೆಯಲಾಗದೆ ಮೀಸಲಾತಿ ಹಂಚಿಕೆಯಲ್ಲಿ ತಾರತಮ್ಯಗಳಾಗಿವೆ. ಮೇಲ್ದಾತಿ ಮತ್ತು ಮೇಲ್ವರ್ಗಗಳೊಂದಿಗೆ ಹೋರಾಡಿ ಪರಿಶಿಷ್ಟರ ಒಟ್ಟು ಜನಸಂಖ್ಯಾಧಾರದಮೇಲೆ ಪಡೆಯಲಾದ ಮೀಸಲಾತಿ ಪ್ರಮಾಣವನ್ನು ನಂತರದಲ್ಲಿ ಎಲ್ಲಾ ಪರಿಶಿಷ್ಟ ಜಾತಿಗಳಿಗೆ ಹಂಚುವಾಗಲೂ ಸಹ ಆಯಾ ಜಾತಿಗಳ ಜನಸಂಖ್ಯೆಯೇ ಆಧಾರವಾಗಬೇಕಾದುದು ನ್ಯಾಯ ಸಮ್ಮತ. ಸಾಮಾಜಿಕ ಪರಿವರ್ತನೆಗೆ ಹೋರಾಡಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಪರಿಶಿಷ್ಟರಲ್ಲೇ ಅತ್ಯಂತ ದುರ್ಬಲರಾದ ವರ್ಗಗಳಿಗೆ ವಿಶೇಷ ರಕ್ಷಣೆ ಹಾಗೂ ಮೀಸಲಾತಿ ಅಗತ್ಯತೆಗಳನ್ನು ಜನಸಂಖ್ಯೆ ಆಧಾರದಲ್ಲಿಯೂ ಮತ್ತು ಆರ್ಥಿಕ ಹಿಂದುಳಿದುರುವಿಕೆಯನ್ನು ಆಧರಿಸಿ ಪ್ರತಿಪಾದಿಸಿದ್ದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಜನಪರ ಸಂಘಟನೆಗಳೆಲ್ಲಾ ಒಂದಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಯಾಗಬೇಕೆಂದು ಹೋರಾಟ ಮಾಡಿದ್ದರ ಪರಿಣಾಮ ಈ ಹಿಂದಿನ ಧರ್ಮಸಿಂಗ್ ನೇತೃತ್ವದ ಸರ್ಕಾರ ಒಂದು ಆಯೋಗವನ್ನು ರಚನೆ ಮಾಡಿ ಆ ಆಯೋಗದ ಅಧ್ಯಕ್ಷರನ್ನಾಗಿ ನ್ಯಾಯಮೂರ್ತಿ ಎ ಜೆ ಸದಾಶಿವರವರನ್ನು ನೇಮಕ ಮಾಡಿತ್ತು. ನ್ಯಾಯಮೂರ್ತಿ ಸದಾಶಿವರವರು ಏಳು ವರ್ಷಕ್ಕೂ ಹೆಚ್ಚುಕಾಲ ಪರಿಶಿಷ್ಟ ಜಾತಿಗಳ ಸಾಮಾಜಿಕ ಶೈಕ್ಷಣಿಕ ಮತ್ತು ಉದ್ಯೋಗದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ 2012ರಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ವರದಿ ಸಲ್ಲಿಕೆಯಾಗಿ 10 ವರ್ಷಗಳೇ ಕಳೆದರೂ ಸಹ ಯಾವ ಸರ್ಕಾರಗಳೂ ಕೂಡ ವರದಿಯನ್ನು ಅಂಗೀಕರಿಸಿ, ಕೇಂದ್ರಕ್ಕೆ ಕಳುಹಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಇರುವಂತಹ  ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಸಮಿತಿಯು ಸರ್ಕಾರವನ್ನು ಆಗ್ರಿಸುತ್ತೇವೆ. ಈ ಪ್ರತಿಭಟನೆಯಲ್ಲಿ   ಮುಂಡರಿಗಿ ನಾಗರಾಜ್ , ಜಿ ಗೋವರ್ಧನ ,ವಿಜ್ಞೇಶ ,ಕೊಡ್ಲೆ ಮಲ್ಲಿಕಾರ್ಜುನ,  ಶ್ರೀನಿವಾಸ್ ಕರ್ಚೀಡು, ವನ್ನೇಶಿ ಬಿಡಿಹಳ್ಳಿ,ಬಸವನ ಕುಂಟೆ  ಎರಿಸ್ವಾಮಿ, ಇನ್ನು ಹಲವಾರು ದಲಿತ ವಿವಿಧ ಪದಾಧಿಕಾರಿಗಳು ಮುಖಂಡರು ಸದಸ್ಯರು ಇತರರು ಈ ಪ್ರತಿಭಟನೆಯಲ್ಲಿ  ಉಪಸ್ಥಿತರಿದ್ದರು.


ವರದಿ. ಉಮೇಶ್, ಎಚ್, ಬಳ್ಳಾರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;