;

ಕೃಷ್ಣ ನದಿಯ ದಡದಲ್ಲಿ ನಿಲ್ಲದ, ಮರಳು ದಂದೇಕೋರರ ಅಟ್ಟಹಾಸ, ಕಣ್ಣಿದು ಕುರುಡಯಿತಾ ಜಿಲ್ಲಾಡಳಿತ???…!!!

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ರಾಳ ಎಮ್ಮಡಿಗಿ ಸೂಗೂರು 3 ಗ್ರಾಮದ ಕೃಷ್ಣ ನದಿಯಲ್ಲಿ ಟೆಂಡರ್ ಇಲ್ಲದೆ 15ಕ್ಕೂ ಹೆಚ್ಚು ಹಿಟಾಚಿಗಳ ಮೂಲಕ ಅಕ್ರಮ ಗಣಿಗಾರಿಕೆ ಮಾಡಿ ಲಕ್ಷಾಂತರ ಮೆಟ್ರಿಕ್ ಟನ್ನು ಮರಳು ಜಮೀನುಗಳಲ್ಲಿ ಸ್ಟಾಕ್ ಮಾಡಿ ಮತ್ತು ನದಿಯಿಂದ ತುಂಬಿ ನೂರಾರು ಟಿಪ್ಪರ್ಗಳ ಮೂಲಕ ಅಕ್ರಮ ಗಣಿಗಾರಿಕೆ ಮಾಡಿ ಸಾಗಾಣಿಕೆ ಮಾಡುತ್ತಿದ್ದು ಮಾನ್ಯ ಗೌರವನ್ವಿತ ಉಚ್ಚ ನ್ಯಾಯಾಲಯದ WP No11984 / 2021 ಆದೇಶ ಉಲ್ಲಂಘನೆ ಮಾಡಿ ಮತ್ತು ಕೆಲವು ಅಧಿಕಾರಿಗಳು ಅಕ್ರಮ ಗಣಿಗಾರಿಕೆ ಕುಮ್ಮಕ್ಕು ಮಾಡುತ್ತಿದ್ದರು ಸಹ ಮಾನ್ಯ ಸುರಪುರ ತಾಲೂಕಿನ ಬಿಜೆಪಿ ಶಾಸಕರಾದ ಸನ್ಮಾನ್ಯರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಸುಮ್ಮನೆ ಇರುವುದು ಮಾತ್ರ ವಿಷಾದನೀಯ ಸಂಗತಿ ಹಾಗೂ ಸುರಪುರ ಪೊಲೀಸ್ ಇಲಾಖೆಯ ಡಿ, ವೈ, ಎಸ್, ಪಿ, ಮತ್ತು ಸುರಪುರ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ,ಸುರಪುರ ಸರ್ಕಲ್ ಇನ್ಸ್ಪೆಕ್ಟರ್ ಯಾದಗಿರಿ ಜಿಲ್ಲಾಧಿಕಾರಿಗಳು ಯಾದಗಿರಿ ಎಸ್ ಪಿ ಎಲ್ಲರೂ, ಸುಮ್ಮನಿರುವುದನ್ನು ನೋಡಿದರೆ  ಕೃಷ್ಣಾ ನದಿ ನೈಸರ್ಗಿಕ ಸಂಪತ್ತು ಲೂಟಿ ಮಾಡುತ್ತಿರುವುದು ಇವರ ಕಣ್ಣಿಗೆ ಕಾಣಿಸಿಲ್ವೋ ಅಥವಾ ಯಾರಾದರೂ ಮೇಧಾವಿಗಳ ಕೈ ಗೊಂಬೆಗಳಾಗಿದ್ದರೋ ಎಂಬುದೇ ತಿಳಿಯುತ್ತಿಲ್ಲ ಎನ್ನುತ್ತಾರೆ ಅಲ್ಲಿನ ಗ್ರಾಮಗಳ, ಹಲವಾರು ಸಂಘಟನೆಗಳ ಹೋರಾಟಗಾರರು.

ಹೆಗೆಂದರೆ ನಮ್ಮ ದೇಶದ ಪ್ರತಿಯೊಂದು ಹಳ್ಳಿಗಳಲ್ಲಿನ ಸಂಪತ್ತು ಲೂಟಿ ಹಾಗುತ್ತಿದ್ದರು ಈ ನಮ್ಮ ದೇಶವನ್ನು ಹಾಳುತ್ತಿರುವ ಈ ಬಂಡ ಸರ್ಕಾರಗಳು ಅಂದರೆ ಬಿಜೆಪಿ ಕಾಂಗ್ರೆಸ್ ಗರು ನಮ್ಮ ದೇಶವನ್ನು ಹಾಳು ಮಾಡುತ್ತಿದ್ದಾರೆ, ಮತ್ತು ಇವರ ಕಪಿಮುಷ್ಟಿಯಲ್ಲಿ ಐಎಎಸ್, ಐಪಿಎಸ್, ಅಧಿಕಾರಿಗಳು ಇವರ ಕೈಗೊಂಬೆಗಳಂತೆ ಆಗುವುದನ್ನು ಬಿಟ್ಟು ಯಾವ ರಾಜಕೀಯ ಪಕ್ಷದವರು ನಮ್ಮ ದೇಶವನ್ನು ಆಳುವುದು ಬರೀ ಐದು ವರ್ಷ ಮಾತ್ರ, ನಿಮ್ಮಂತ ನಿಷ್ಠಾವಂತ ಹಾಗೂ ಉನ್ನತ ಹುದ್ದೆಯಲ್ಲಿ ಇರುವ ಅಧಿಕಾರಿಗಳು ಅಧಿಕಾರದಲ್ಲಿರುವುದು ಅರವತ್ತು ವರ್ಷ ದಯವಿಟ್ಟು ಮಾನ ಮರ್ಯಾದೆ ಬಿಟ್ಟು ಇವತ್ತು ತಮ್ಮ ಅಧಿಕಾರದ ಅಮಲಿಗೋಸ್ಕರ ನಮ್ಮ ನಮ್ಮಲ್ಲೇ ಜಗಳ ಹೊಚ್ಚಿ ತಾವುಗಳು ಮಾತ್ರ ವಿಧಾನ ಸೌದದಲ್ಲಿ ನೆಮ್ಮದಿಯಿಂದಿರುವವರನ್ನು ಈ ರಾಜ್ಯದ ಜನತೆಗೆ ನಂಬಿಕೆ ಇಲ್ಲ ನಂಬಿಕೆ ಇರುವುದೇ ನಿಮ್ಮಂತ ನಿಷ್ಠಾವಂತ ಹಾಗೂ ಪ್ರಜ್ಞಾವಂತ ಅಧಿಕಾರಿಗಳು ಸುಮ್ಮನೆ ಉಲ್ಲಂಘನೆ ಮಾಡಿ ಅಕ್ರಮ ಗಣಿಗಾರಿಕೆಗ ಮಾಡುವವರನ್ನು  ಇಗೆ ಬಿಟ್ಟರೆ ನಮ್ಮ ರಾಜ್ಯದಲ್ಲಿನ ಸಂಪತ್ತು ಲೂಟಿಕೋರರ ಪಾಲಾಗುತ್ತದೆ ಇನ್ನಾದರೂ ಇಂತವರ ಕುಮ್ಮಕ್ಕಿಗೆ ಯಾರು ನಿಂತಿರಬಹುದು, ಹಾಗೂ ಇದರ ಅಂದರೆ ಇಂತಹ ಮರಳು ಮಾಪಿಯಗಳ ಬಗ್ಗೆ ಹಲವಾರು ಹೋರಾಟಗಾರರು ಧ್ವನಿಯನ್ನು ಎತ್ತಿದರು ಅವರ ಧ್ವನಿಯನ್ನು ನಿಲ್ಲಿಸುತ್ತಿರುವರ ಬಗ್ಗೆ  ಐಎಎಸ್, ಐಪಿಎಸ್, ಅಧಿಕಾರಿಗಳು ಇನ್ನಾದರೂ ತಮ್ಮ ಕಾರ್ಯವೈಖರಿಯನ್ನು ಇಂತಹ ಭ್ರಷ್ಟರ ಬಂಡತನವನ್ನು ಕಾನೂನಿನ ಅಡಿಯಲ್ಲಿ ಬಗ್ಗು ಬಡಿಯಲು ಮುಂದಾಗಲಿ ಎಂಬುದೇ ನಮ್ಮ ಪತ್ರಿಕೆಯ ಆಶಯ ಹಾಗೂ ಅಲ್ಲಿನ ಕೆಲವು ಹಳ್ಳಿಗಳ ನೊಂದ ಸಾರ್ವಜನಿಕರು ನಾವು, ಬಾಯಿದ್ದು, ಮೂಕರು, ಕಣ್ಣಿದ್ದು ಕುರುಡರು ಸರ್ ನಿಮ್ಮಂತವರ ಪತ್ರಕರ್ತರು ಧ್ವನಿಯನ್ನು ಎತ್ತಿ ನಮ್ಮ ಹಳ್ಳಿಗಳ ಸುತ್ತಲೂ ನಡೆಯುವ ಈ ಕೃಷ್ಣ ನದಿ ತೀರದ ಮರಳು ಮಾಪಿಯವನ್ನು ತಡೆದರೆ ಅಷ್ಟೇ ಸಾಕು ನಾವು ಈ ಬೃಹತ್ ಗಾತ್ರದ ವಾಹನಗಳ ಓಡಾಟ ಹಾಗೂ ಜೆಸಿಬಿ, ಇಟಾಚಿಗಳ ಶಬ್ದ ದಿಂದ ಮುಕ್ತಿಯನ್ನು ಕೊಡಿಸಿ ಸ್ವಾಮಿ ಎನ್ನುವುದನ್ನು ನೋಡಿದರೆ ಗೊತ್ತಾಗುತ್ತದೆ ಇಲ್ಲಿನ ಜನರ ನೋವಿನ ಬದುಕಿನ ಪಯಣ ಇನ್ನಾದರೂ ಕೊನೆಯಾಗಿ ನೆಮ್ಮದಿ ಬದುಕಿಗೆ ದಾರಿ ಸಿಗಲಿ ನಿಮಗೆ ಇದು ನಿಮ್ಮ ಪರವಾಗಿ ನಮ್ಮ ಧ್ವನಿ…… ಎಚ್ಚರಿಕೆ

ವರದಿ. ವರದಿಗಾರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;