ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಕಾನಹೊಸಹಳ್ಳಿ…!!!

ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ
ಕಾನಹೊಸಹಳ್ಳಿ :– ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಕಾನೂನು ಬಗ್ಗೆ ಗೌರವ ಹಾಗೂ ಪ್ರಸ್ತುತ ಸಮಾಜದಲ್ಲಿ ಸಂಭವಿಸುತ್ತಿರುವ ಘಟನೆಗಳ ಬಗ್ಗೆ ಮುಂಜಾಗ್ರತೆ ವಹಿಸಿದರೆ ನಡೆಯುತ್ತಿರುವ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ಎಂದು ಕಾನಹೊಸಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಶ್ರೀ ಎರಿಯಪ್ಪ ನವರು ಹೇಳಿದರು.
ಸ್ಥಳೀಯ ಶ್ರೀ ಶರಣೇಶ್ವರ ವಿದ್ಯಾ ಸಂಸ್ಥೆ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಪೋಲಿಸ್ ಇಲಾಖೆಯಿಂದ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಸ್ತುತ ಸಮಾಜದಲ್ಲಿ ಒಂದಲ್ಲ ಒಂದು ರೀತಿಯ ಅಪರಾದಗಳು ಆಗುತ್ತವೆ ಕಾನೂನಿನ ಬಗ್ಗೆ ಅವರಿಗಿರುವ ತಾತ್ಸರ ಮನೋಭಾವನೆ ಇದಕ್ಕೆ ಕಾರಣ. ಇಂತಹ ಪ್ರಕರಣಗಳ ಬಗ್ಗೆ ವಿದ್ಯಾರ್ಥಿ ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸಿ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹಾಗೂ ಪೋಲಿಸ್ ಇಲಾಖೆ ಅಪರಾಧ ತಡೆಗಟ್ಟುವ ಮಾಸಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ವಿದ್ಯಾರ್ಥಿ ಸಮೂಹದ ಮೇಲೆ ಅಪರಾಧ ತಡೆಗಟ್ಟುವ ಗುರುತರ ಜವಾಬ್ದಾರಿ ಇದ್ದು ಮೊದಲು ವಿದ್ಯಾರ್ಥಿಗಳು ಜಾಗೃತಿ ಗಂಡು ಸಾರ್ವಜನಿಕರಿಗೆ ತಿಳಿ ಹೇಳಬೇಕು. ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಲೈಂಗಿಕ ಕಿರುಕುಳ ಮತ್ತಿತರ ದೌರ್ಜನ್ಯಗಳ ಬಗ್ಗೆ ಸದಾ ಜಾಗೃತಿ ವಹಿಸಬೇಕು, 18 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡುವಂತಿಲ್ಲ ಬಾಲ್ಯ ವಿವಾಹ ಅಪರಾಧದ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು, ಇಂತಹ ಬಾಲ್ಯ ವಿವಾಹಗಳಿಗೆ ಅವಕಾಶ ಕೊಡಬೇಡಿ ನಿಮ್ಮ ತಂದೆ ತಾಯಿಗಳಿಗೆ ಮಕ್ಕಳ ಮೇಲೆ ಹೆಚ್ಚಿನ ಆಸೆ ಇರುತ್ತದೆ ನಮ್ಮ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಮಾಡಿ ಒಂದು ಉನ್ನತ ಹುದ್ದೆಗೆ ಹೋಗಬೇಕೆಂದು ಆಸೆ ಇರುತ್ತದೆ, ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಜವಾಬ್ದಾರಿ ನಿಮ್ಮದು, ಯಾವುದೇ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗದಂತೆ ನಿಮ್ಮ ತಂದೆ ತಾಯಿಗಳಗೆ ಹಾಗು ಸಮಾಜಕ್ಕೆ ಮತ್ತು ನಿಮ್ಮ ವಿದ್ಯಾಸಂಸ್ಥೆಗೆ ಗೌರವ ತರುವ ಕೆಲಸ ನಿಮ್ಮದಾಗಬೇಕು ಆದುದರಿಂದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಯಾರಾದರೂ ನಿಮಗೆ ಕಿರುಕುಳ ಕೊಟ್ಟರೆ ಅಪರಿಚಿತ ವ್ಯಕ್ತಿಗಳ ಮೇಲೆ ಅನುಮಾನ ಕಂಡರೆ ತಕ್ಷಣ ೧೧೨ ಫೋನ್ ನಂಬರಿಗೆ ಕರೆ ಮಾಡಿ 24 ಗಂಟೆಗಳ ಕಾಲ ಪೊಲೀಸ್ ಇಲಾಖೆ ನಿಮಗೆ ರಕ್ಷಣೆ ಕೊಡುಲುಸದಾ ಸಹಕಾರಿಯಾಗಿರುತ್ತದೆ. ನಿಮ್ಮ ಸಹಕಾರ ನಮ್ಮ ಇಲಾಖೆಗೆ ಅತಿ ಮುಖ್ಯ ಎಂದು ಈ ಸಂದರ್ಭದಲ್ಲಿ ಮಾನ್ಯಪಿಎಸ್ಐ ಹೇಳಿದರು.


ಶರಣೆ ಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಕೆಎಂ ಶಶಿಧರ್ ರವರು ಮಾತನಾಡಿ ಪೊಲೀಸ್ ಇಲಾಖೆ ಸಾರ್ವಜನಿಕವಾಗಿ ಅತ್ಯಂತ ಒತ್ತಡವಿದ್ದರೂ ವರ್ಷಪೂರ್ತಿ 24 ಗಂಟೆ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಯಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ರಕ್ಷಣೆಗಾಗಿರುವ ಪೊಲೀಸರಿಗೆ ಸಾರ್ವಜನಿಕರು ನೈತಿಕ ಬೆಂಬಲ ನೀಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶರಣೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ. ಎಂ. ಹರ್ಷವರ್ಧನ, ಉಪನ್ಯಾಸಕ ರಾಜು ನಾಯ್ಕ್, ತಿಪ್ಪೇಸ್ವಾಮಿ, ಕೈಗಾರಿಕಾ ತರಬೇತಿ ಕೇಂದ್ರದ ನಾಗೇಶ್, ಚನ್ನವೀರ ಸ್ವಾಮಿ,ಗಿರೀಶ್ ದಂಡೆಪ್ಪ, ವಿಜಯಕುಮಾರ್ ಸೇರಿದಂತೆ ವಿದ್ಯಾಸಂಸ್ಥೆಯ ಸಿಬ್ಬಂದಿ ವರ್ಗ ಕಾಲೇಜು ವಿದ್ಯಾರ್ಥಿಗಳು ಇದ್ದರು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend