ಕಾನಹೋಸಹಳ್ಳಿ ವಿಶೇಷ ಚೇತನರ ಗ್ರಾಮ ಸಭೆ,,,!!!

ವಿಶೇಷ ಚೇತನರ ಗ್ರಾಮ ಸಭೆ,,,,, ಕಾನಹೊಸಹಳ್ಳಿ ,ದಿ.21.12.22ರ ಬುಧವಾರ ನಡೆದ ಅಂಗವಿಕಲರ ವಿಶೇಷ ಗ್ರಾಮ ಸಭೆಯನ್ನು ಕಾನಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನೀಲಮ್ಮ ಉದ್ಘಾಟನೆ ಮಾಡಿದರು.ಇದೇ ಸಂದರ್ಭದಲ್ಲಿ ಪಿ.ಡಿ.ಓ ಬಸಮ್ಮ ಮಾತನಾಡಿ ಅಂಗವಿಕಲರನ್ನು ಮುಖ್ಯ ವಾಹಿನಿಗೆ ತರಲು ಗ್ರಾಮ ಪಂಚಾಯಿತಿಯಿಂದ ವಿಶೇಷ ಅನುದಾನ ನೀಡಲು ಪ್ರಾಮಾಣಿಕವಾಗಿ ಕೆಲಸ ಎಂದು ತಿಳಿಸಿದರು. ಹಾಗೂ ಈ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲೆಯ ಹ್ಯೂಮನ್ ರೈಟ್ಸ್ ಜಿಲ್ಲಾಧ್ಯಕ್ಷರಾದ ಸಿ.ಬಿ.ನಾಗೇಶ್ ರವರು ಅಂಗವಿಕಲರನ್ನು ದೇವರಂತೆ ಕಾಣಬೇಕು ಮತ್ತು ಅವರಿಗೆ ಸಿಗುವ ಸೌಲಭ್ಯಗಳನ್ನು ಅಧಿಕಾರಿಗಳು ನಿಷ್ಠೆಯಿಂದ ಕೆಲಸ ನಿರ್ವಹಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು ಎಂದು ಹೇಳಿದರು.ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೋರಣ್ಣ, ತಿಪ್ಪೇಸ್ವಾಮಿ, ಪ್ರಭಾಕರ್,ಸಿದ್ದಮ್ಮ, ಅಂಗವಿಕಲರ ನೌಕರರು, ಹಾಗೂ ಸುತ್ತಮುತ್ತಲಿನ ವಿಶೇಷ ಚೇತನರು, ಸಾರ್ವಜನಿಕರು, ಗ್ರಂಥಾಲಯ ಮೇಲ್ವಿಚಾರಕರು,ಗ್ರಾಮ ಪಂಚಾಯತಿ ಸಿಬ್ಬಂದಿಯವರು ಹಾಜರಿದ್ದರು…

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend