ದೇಶದಲ್ಲೇ ಕರ್ನಾಟಕದ ಜಾನಪದ ಸಂಸ್ಕೃತಿ ಶ್ರೀಮಂತ: ಶ್ರೀ ಪ್ರಶಾಂತಸಾಗರ ಶಿವಾಚಾರ್ಯ
ಕೂಡ್ಲಿಗಿ: ಕರ್ನಾಟಕದ ಜಾನಪದ ಸಂಸ್ಕೃತಿ ಶ್ರೀಮಂತವಾಗಿದೆ ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿದೆ ಗ್ರಾಮೀಣ ಭಾಗದಲ್ಲಿ ನಾಟಕ ಕಲೆ ಜೀವಂತ ಸಿರಿನುಡಿಯಾಗಿ ಹರಿದು ಬಂದಿರುವ ವೈಭವದ ಜಾನಪದ. ದೇಶದಲ್ಲೇ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ ಎಂದು ಶ್ರೀ ಪ್ರಶಾಂತಸಾಗರ ಶಿವಾಚಾರ್ಯ ಸ್ವಾಮಿಗಳು ದಿವ್ಯ ಸಾನಿಧ್ಯ ನುಡಿದರು. ತಾಲೂಕಿನ ಹಿರೇಹೆಗ್ಡಾಳ್ ಗ್ರಾಮದಲ್ಲಿ ಸೋಮವಾರ ನಡೆದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕಲಾಭಾರತಿ ಕಲಾ ಸಂಘ, ಹೀರೆಹೆಗ್ಡಾಳ್ ಇವರು ಆಯೋಜಿಸಿದ ಕರ್ನಾಟಕ ಜಾನಪದ ಕಲೋತ್ಸವ ಹಾಗು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು. ಕಲೆ, ಸಾಹಿತ್ಯ, ನೃತ್ಯ, ನಾಟಕ ಮುಂತಾದ ವಿವಿಧ ಪ್ರಕಾರಗಳನ್ನು ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದು. ಜಾನಪದ ಗೀತೆಗಳು ಅತ್ಯಂತ ವೈವಿಧ್ಯಮಯವಾಗಿವೆ. ನಾಡಿನಾಧ್ಯಂತ ಆಯಾ ಪ್ರದೇಶಗಳ ಪ್ರಾದೇಶಿಕ ಸೊಗಡುಗಳಲ್ಲಿ ಇಂದಿನ ಪೀಳಿಗೆಗೆ ಇಂತಹ ಕಾರ್ಯಕ್ರಮಗಳ ಮೂಲಕ ತಲುಪುತ್ತಿವೆ ಎಂದರು. ಇಂದಿನ ಪಾಶ್ಚಾತ್ಯ ಶೈಲಿಯ ಸಂಗೀತದ ಅಬ್ಬರಗಳ ನಡುವೆಯೂ ವೈಭವದ
ಜಾನಪದ ಗೀತೆಗಳು ಉಳಿದುಕೊಂಡಿವೆ ಎಂದರೆ, ಇಂತಹ ಕಲಾವಿದರಿಂದ ಮಾತ್ರ ಸಾಧ್ಯವಾಗಿದೆ.
ಜಾನಪದ ಗೀತೆಗಳ ಸೃಷ್ಟಿಸಿದವರು ಯಾರೆಂದು ಹೇಳುವುದಕ್ಕೆ ಸಾಧ್ಯವಿಲ್ಲ. ಗ್ರಾಮೀಣ ಭಾಗದ ಸಾಮಾನ್ಯ ಜನರ ನಡುವೆ ಹುಟ್ಟಿ ಬಾಯಿಂದ ಬಾಯಿಗೆ ಹರಿದು ಬಂದಿರುವ ಸಿರಿನುಡಿ ಎನ್ನಬಹುದು ಎಂದರು. ಕಂಸಾಳೆ ಪದ, ಗೀಗಿಪದ, ಕೋಲಾಟದ ಪದ, ರಾಗಿ ಬೀಸೋ ಪದ, ಸುಗ್ಗಿ ಹಾಡುಗಳು, ಹೀಗೆ ಇನ್ನೂ ಅನೇಕ ವಿವಿಧ ಬಗೆಯ ಜಾನಪದ ಗೀತೆಗಳು ಜನರ ದೈನಿಂದಿನ ಚಟುವಟಿಕೆಗಳನ್ನು, ಕೌಟುಂಬಿಕ ಜೀವನವನ್ನು, ಸಂಬಂಧಗಳನ್ನು, ದೇವರುಗಳನ್ನು ಹಾಗೂ ಧಾರ್ಮಿಕ ಆಚರಣೆಗಳನ್ನು ಇಂದಿಗೂ ನಮ್ಮ ಮುಂದೆ ತೆರೆದಿಡುವಲ್ಲಿ ಯಶಸ್ವಿಯಾಗಿವೆ ಎಂದರು. ಹಿರೇಮಠ ತಾವರಗೆರೆಯ ಪೂಜ್ಯ ಶ್ರೀ ರುದ್ರಯ್ಯ ತಾತನವರು ಆಶೀರ್ವದಿಸಿದರು. ಪ್ರಾಸ್ತವಿಕವಾಗಿ ಕಲಾಭಾರತಿ ಕಲಾ ಸಂಘದ ಅಧ್ಯಕ್ಷ ಬಣಕಾರ ಮೂಗಪ್ಪ ಮಾತನಾಡಿದರು. ಕೆ.ಎಂ ವೀರೇಶ್ ಕಜಾಪ ಅಧ್ಯಕ್ಷ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಲೋಕೇಶ್ ವಿ. ನಾಯಕ, ನಾಗಮಣಿ ಜಿಂಕಲ್, ಸೂರ್ಯಪಾಪಣ್ಣ, ಪಿ ಮಂಜುನಾಥ ನಾಯಕ, ಪಿ.ಡಿ ರಂಗಪ್ಪ, ಹಿರೇಹೆಗ್ಡಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಶ್ವಿನಿ ಪಕೀರಪ್ಪ, ಅಭಿವೃದ್ಧಿ ಅಧಿಕಾರಿ ಟಿ ಮಂಗಳ ಗೌರಿ, ಹಿರೇಹೆಗ್ಡಾಳ ಗ್ರಾಮದ ಸಮಾಜ ಸೇವಕ ಹಾಗೂ ಗುತ್ತಿಗೆದಾರ ಅಕ್ಷಯ್ ಕುಮಾರ್, ಶೆಟ್ರು ವಿಶ್ವನಾಥ, ಗೌರಮ್ಮ, ಟಿ.ಬಸವರಾಜ್, ಗಂಟಿ ವಿಮಲಾಕ್ಷಿ, ಹುಚ್ಚೆಂಗೆಮ್ಮ, ಕೆ.ನಿರ್ಮಲ, ಹೆಚ್.ಪಿ ಶ್ರೀನಿವಾಸ್, ವೀರಭದ್ರಯ್ಯ, ಎಂ ನೇತ್ರಾ, ಹೆಚ್ ಹಾವಪ್ಪ, ಸುಶೀಲ, ಬಿ ಅಂಜಿನಪ್ಪ, ಕೆ ಕರಿಯಪ್ಪ, ಹೆಚ್ ಗೋಣೆಪ್ಪ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು…
ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
