ವಿಶ್ವ ಮಾಧ್ಯಮ ಸೇವಾ ರತ್ನ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ದೊಡ್ಡ ಬಸವರಾಜ್ ಬಡಗಿ ಪತ್ರಕರ್ತ
ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತ ದೊಡ್ಡ ಬಸವರಾಜ್ ಬಡಗಿ!!
ಬೆಂಗಳೂರು: ಡಾ!! ಎಸ್ . ಎಸ್ ಪಾಟೀಲ್ ಇವರ ನೇತೃತ್ವದಲ್ಲಿ ಮತ್ತು ವಿಶ್ವ ದರ್ಶನ ದಿನಪತ್ರಿಕೆ ಹಾಗೂ ಕರ್ನಾಟಕ ಪ್ರಜಾ ದರ್ಶನ ಮಾಸಪತ್ರಿಕೆಯ ಆಶ್ರಯದಲ್ಲಿ ನಡೆಯಲಿರುವ ಭವ್ಯ ಸಮ್ಮೇಳನದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಪ್ರಖ್ಯಾತ ಹೊಂದಿದ ವಿವಿಧ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ಕೊಟ್ಟು ಸನ್ಮಾನಿಸಿ ಗೌರವಿಸಲಾಗುತ್ತದೆ.
ಇದೀಗ ಈ ರಾಷ್ಟ್ರೀಯ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ನಂ 5 ಬೆಳಗೊಡು ಹಾಳ್ ಗ್ರಾಮದ ಹಳ್ಳಿಯ ಪ್ರತಿಭೆ ದೊಡ್ಡ ಬಸವರಾಜ್ ಬಡಗಿ ಆಯ್ಕೆಯಾಗಿದ್ದಾರೆ. ಪತ್ರಿಕೋದ್ಯಮ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡು, ಸತ್ಯ, ನಿಷ್ಠೆ, ಧೈರ್ಯ, ಪ್ರಾಮಾಣಿಕವಾಗಿ ಗುರುತಿಸಿಕೊಂಡು ದಿನ – ದಲಿತರ ಬಡವರ ನಿರ್ಗತಿಕರ ಪರ ಅನೇಕ ಸುದ್ದಿಗಳನ್ನು ಬಿತ್ತರಿಸಿ ಹಲವಾರು ಕಲಾ ಫಲಶ್ರುತಿ ತಂದು ಕೊಟ್ಟು, ಕನ್ನಡ ವಿಶ್ವ ಮಾಧ್ಯಮ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿಗೆ ಭಜನರಾಗಿದ್ದಾರೆ,
ಬೆಂಗಳೂರಿನ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ ಕೆಂಗೇರಿಯ ರಾಮೋಹಳ್ಳಿಯಲ್ಲಿ ನಡೆಯಲಿರುವ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾದ ತಕ್ಷಣ ಸ್ನೇಹ ವೃಂದ, ಗುರು ಹಿರಿಯರ ಬಳಗ, ಆತ್ಮೀಯರು, ಹಿತೈಷಿಗಳು ಹಾಗೂ ಅನೇಕರು ಫೋನ್ ಕರೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದಿಸಿ ಶುಭ ಕೋರುತ್ತಿದ್ದಾರೆ..

ವರದಿ. ವಿರೇಶ್. ಸಿರಿಗುಪ್ಪ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
