ದೇಶದ ವಿವಿಧ ರಾಜ್ಯಗಳ ಕಬ್ಬು ಬೆಳೆಗಾರರ ರೈತ ಮುಖಂಡರು ಹಾಗೂ ಸಂಸದರು ನಿಯೋಗ ದೆಹಲಿಯಲ್ಲಿ
ಇಂದು ದೇಶದ ವಿವಿಧ ರಾಜ್ಯಗಳ ಸಂಸದರು, ಕಬ್ಬು ಬೆಳೆಗಾರ ರೈತ ಮುಖಂಡರ ನಿಯೋಗ, ಕಬ್ಬು ಬೆಳೆಗಾರರ ಸಮಸ್ಯೆಗಳು, ಕಬ್ಬಿನ ಎಫ್‌ಆರ್‌ಪಿ ದರ ನಿಗದಿ ಮಾನದಂಡ, ಕಬ್ಬು ನಿಯಂತ್ರಣ ಕಾಯ್ದೆ1966 ತಿದ್ದುಪಡಿಗೆ ಒತ್ತಾಯಿಸಿ ಕೇಂದ್ರ ಕೃಷಿ ಸಚಿವರು ಹಾಗೂ ಕೆಂದ್ರ ಆಹಾರ ಸಚಿವರಾದ ನರೇಂದ್ರ ಸಿಂಗ್ ತೋಮಾರ್ ಅವರನ್ನು ಭೇಟಿ ಮಾಡಲಾಯಿತು.

ಈ ನಿಯೋಗದಲ್ಲಿ ಕರ್ನಾಟಕದಿಂದ ಸಂಸದರಾದ ಸುಮಲತಾ ಅಂಬರೀಶ್ , ರಾಜ್ಯಸಭಾ ಸದಸ್ಯರಾದ ಎಲ್ ಹನುಮಂತಯ್ಯ, ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್, ಧಾರವಾಡ ಜಿಲ್ಲೆಯ ಪರಶುರಾಮ್ ಎತ್ತಿನಗುಡ್ಡ,ಹಾಗೂ ಬೇರೆ ಬೇರೆ ರಾಜ್ಯಗಳ ಸಂಸದರು ರೈತ ಮುಖಂಡರು ಪಾಲ್ಗೊಂಡಿದ್ದರು.

ವರದಿ. ಸುರೇಶ್. ಮಂಡ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
