ನ್ಯಾಯ ಮೂರ್ತಿಎ.ಜೆ.ಸದಾಶಿವ ಆಯೋಗದ ವರದಿಯ ಜಾರಿಗೊಳಿಸುವ ಸಲುವಾಗಿ ಬೃಹತ್ ಬೈಕ ಜಾತದ ಮುಖಾಂತರ ಮನವಿ…!!!

ನ್ಯಾಯ ಮೂರ್ತಿಎ.ಜೆ.ಸದಾಶಿವ ಆಯೋಗದ ವರದಿಯ ಜಾರಿಗೊಳಿಸುವ ಸಲುವಾಗಿ
ಕರ್ನಾಟಕ ರಾಜ್ಯ ಮಾದಿಗ ಸಮಾಜದ ಸಂಘಟನೆಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಬೈಕ ಜಾಯಾದ ಮುಖಾಂತರ ನಮ್ಮ ಮಾದಿಗ ಸಮಾಜದ ಜನರನ್ನ ಜಾಗೃತಗೊಳಿಸುತ್ತ ಹಾಲಿ ಶಾಸಕರನ್ನ ಸಂಪರ್ಕಿಸಿ ಆಳುವ ಸರ್ಕಾರದ ಕೊನೆಯ ಅಧಿವೇಶನವಾದ ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿಸೆಂಬರ 19 ರಿಂದ 30 ರ ವರೆಗೆ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಜನಸಂಖ್ಯಾ ವಾರು ಒಳಮೀಸಲಾತಿ ವರ್ಗೀಕರನವನ್ನ ಜಾರಿಗೊಳಿಸಿ ಆಯೋಗದ ವರದಿಯನ್ನು ಕೇಂದ್ರಕ್ಕೆ ಕಳಿಸಬೇಕೆಂದು ಒತ್ತಾಯಿಸುತ್ತಾ ಬೈಕ ಜಾತಾ ಸೈನಿಕರು ಮತ್ತು ಸಮಾಜ ಮುಖಂಡರ ತಂಡವು ದಿನಾಂಕ 14/12/2022 ರಂದು ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಸಮಾಜದ ಬಂದುಗಳನ್ನ ಜಾಗೃತಗೊಳಿಸುವ ವೇದಿಕೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಥಣಿ ಹಾಗೂ ಕಾಗವಾಡ ತಾಲೂಕಿನ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ನಮ್ಮ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣಕ್ಕೆ ನಿನ್ನೆ ಸಾಯಂಕಾಲ ಆಗಮಿಸಿದರು ಅಲ್ಲಿಯ ಗ್ರಾಮ ದೇವತೆಯಾದ ಶ್ರೀ ಮಾಯಕ್ಕಾದೇವಿಯ ಆಶೀರ್ವಾದ ಪಡೆದು ಬೈಕ ಮುಖಾಂತರ ಊರಲ್ಲಿ ಸಂಚರಿಸುತ್ತ ಸಮಾಜದ ಓಣಿಗೆ ಬಂದು ಅಲ್ಲಿನ ನಮ್ಮ ಕುಲದೈವವಾದ ಶ್ರೀ ಮರಗೂಬಾಯಿಯ ಆಶೀರ್ವಾದ ಪಡೆದು ದೇವಿಯ ಗುಡಿಯ ಮುಂಬಾಗದಲ್ಲಿ ಹಾಕಿರುವ ಭವ್ಯ ಮಂಟಪದ ವೇದಿಕೆಯಲ್ಲಿ ನಮ್ಮ ಸಮಾಜದ ಜನರನ್ನ ಜಾಗೃತಗೊಳಿಸುವ ಕ್ರಾತಿ ಗೀತೆ ಯನ್ನ ಹಾಗೂ ಸರ್ಕಾರವನ್ನ ಎಚ್ಚರಿಸುವ ಹೋರಾಟದ ಗೀತೆಗಳನ್ನ ಬೈಕ ಜಾತಾ ಸೈನಿಕರು ಹಾಡಿದರು ವೇದಿಕೆಯ ಕಾರ್ಯಕ್ರಮವನ್ನ ಮಾದಿಗ ಸಮಾಜದ ಮುಖಂಡರು ಹಾಗೂ ವಕೀಲರಾದ ಶ್ರೀ ವಿನಯನಿಧಿ ಕಮಾಲರವರು ನಿರೂಪಣೆ ಮಾಡಿದರು ವೇದಿಕೆಯ ಮೇಲಿದ್ದ ಎಲ್ಲ ಗಣ್ಯ ಮಾನ್ಯರನ್ನ ಸ್ವಾಗತಿಸಿದರು ಕ್ರಮವಾಗಿ ಶ್ರೀ ಮುತ್ತಣ್ಣಾ ಬೆಣ್ಣೂರ, ಶ್ರೀ ಚಂದ್ರಕಾಂತ ಕಾದ್ರೋಳಿ, ಶ್ರೀ ಎನ್ ಪ್ರಶಾಂತರಾವ್ ಐಹೊಳೆ ಹಾಗೂ ರಾಜೇಂದ್ರ ಐಹೊಳೆಯವರು ಹೋರಾಟದ ಬಗೆಗಿನ ಎಲ್ಲ ವಿವರಗಳನ್ನ ಅದರ ಅವಶ್ಯಕತೆಯನ್ನ ನಮ್ಮ ಸಮಾಜದ ಎಲ್ಲ ನಮ್ಮ ಬಂಧುಗಳಿಗೆ ವಿವರಿಸಿದರು ನಮ್ಮ ಸಮಾಜದ ಹಿರಿಯ ರಾಜಕಾರಣಿ ಸದಾ ನಗುಮೊಗದ ಹ್ಯಾಟ್ರಿಕ್ ಹೇರೋ ಆಗಿ ಆಯ್ಕೆಯಾಗಿರುವ ರಾಯಬಾಗದ ಶಾಸಕರು ಮತ್ತು ಕರ್ನಾಟಕ ರಾಜ್ಯ ಆದಿಜಾಂಭವ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಗಿರುವ ಸನ್ಮಾನ್ಯ ಶ್ರೀ ಧುರ್ಯೋಧನ ಮಹಾಲಿಂಗಪ್ಪ ಐಹೊಳೆಯವರನ್ನ ಈ ಬಾರಿಯೂ ಶಾಸಕರನ್ನಾಗಿ ಆಯ್ಕೆ ಮಾಡಲು ನಾವೆಲ್ಲ ಶ್ರಮಿಸೋಣ ಅವರನ್ನ ಮಂತ್ರಿ ಮಾಡೋಣ ಜೊತೆಗೆ ನಮ್ಮ ಸಮಾಜದವರನ್ನ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನಾಗಿ ಮಾಡೋಣ ಅದಕ್ಕಾಗಿ ಆಯೋಗದ ವರದಿಯ ಜಾರಿಗೊಳಿಸಲು ಆಳುವ ಸರ್ಕಾರ ಮತ್ತು ಮುಖ್ಯ ಮಂತ್ರಿಯವರಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿಯವರನ್ನ ಒತ್ತಾಯಿಸುವ ಮೂಲಕ ನಮ್ಮ ಸಮಾಜದ ಜನರನ್ನ ಎಲ್ಲ ರಂಗಗಳಲ್ಲಿ ಸಮಾನ ಹಕ್ಕು ಮತ್ತು ಅಧಿಕಾರ ಸಿಗುವಂತೆ ಮಾಡೋಣ ಎಂಬ ಕಿವಿಮಾತನ್ನ ಹೇಳಿದರು. ಬೈಕ ಜಾತಾ ಸೈನಿಕರನ್ನ ವೇದಿಕೆಯಲ್ಲಿ ಸತ್ಕರಿಸಲಾಯಿತು. ನಂತರ ಚಿಂಚಲಿ ಪಟ್ಟಣದ ನಮ್ಮ ಕುಲಬಾಂದವರು ತಯಾರಿಸಿದ ರುಚಿಕಟ್ಟಾದ ಶಾಖಾಹಾರಿ ಮತ್ತು ಮಾಂಸಾಹಾರದ ರಾತ್ರಿಯ ಊಟ ಮುಗಿಸಿ ಹೋರಾಟಗಾರರು ನಿದ್ರೆಗೆ ಜಾರಿದರು. ಇಂದು ದಿನಾಂಕ 17/12/2022 ರ ಬೆಳಗಿನ ಜಾವ ಶ್ರೀ ಮಾಯಕ್ಕ ದೇವಿಯ ಪುಣ್ಯ ಕ್ಷೇತ್ರದ ಹಾಲಳ್ಳದಲ್ಲಿ ಪುಣ್ಯ ಸ್ನಾನ ಮಾಡಿದ ನಂತರ ಬೆಳಗಿನ ತಿಂಡಿಯ ನಂತರ ನಮ್ಮ ತಾಲೂಕಿನ ಸಮಾಜದ ಬಾಂದವರ ಸುಮಾರು 200ಕ್ಕೂ ಹೆಚ್ಚು ಬೈಕ ಹಾಗೂ ಹೋರಾಟಗಾರರ 200 ಒಟ್ಟು 400 ಬೈಕಗಳೊಂದಿಗೆ ತಾಲೂಕಿನ ಮತ್ತು ಕ್ಷೇತ್ರದ ಚಿಂಚಲಿ ಗ್ರಾಮದಿಂದ ಬಿರಡಿ ಗ್ರಾಮಕ್ಕೆ ಬಂದು ಬಿರಡಿಯಲ್ಲಿ ಬಂದು ಸಭೆ ಮಾಡಿದರು.ನಮ್ಮ ಸಂಘಟನೆಯ ಹೋರಾಟಗಾರರನ್ನ ವಿಶೇಷವಾಗಿ ಸ್ವಾತಿಸಿದರು ನಂತರ ಸಭೆಮಾಡಿ ಉಪಹಾರ ನೀಡಿ ಗೌರವ ಪೂರ್ವಕವಾಗಿ ಬಿಳ್ಕೊಟ್ಟರು ಅಲ್ಲಿಂದ ಬಾವಾನ ಸವದತ್ತಿಗೆ ಹೋದಾಗ ಅವರೂಕೂಡ ನಮ್ಮನ್ನ ವಿಶೇಷ ರೀತಿಯಲ್ಲಿ ಸ್ವಾಗತಿಸಿ ಗೌರವಿಸಿದರು ನಂತರ ಮಾಲಾರ್ಪಣೆ ಮಾಡಿ ಸನ್ಮಾನಿ ಸಿದರು ಪ್ರಮುಖರ ಬಾಷಣ ದೊಂದಿಗೆ ಕಾರ್ಯಕ್ರಮ ಮುಗಿಯಿತು ಅಲ್ಲಿಂದ ನಸಲಾಪೂರ ಹಾಗೂ ಯಡ್ರಾಂವ ಗ್ರಾಮದ ನಮ್ಮ ಮಾದಿಗ ಸಮಾಜದ ಜನರನ್ನ ಬೇಟಿಯಾಗುತ್ತ ರಾಯಬಾಗ
ಪಟ್ಟಣಕ್ಕೆ ಬಂದು ತಲುಪಿದೆವು. ರಾಯಬಾಗದಲ್ಲಿ ನೂತನವಾಗಿ ನಿರ್ಮಿಸಿರುವ ಡಾ!! ಬಾಬು ಜಗಜೇವನ ರಾಮರವರ ಸಮುದಾಯ ಭವನದ ಮುಂಭಾಗ ದಲ್ಲಿ ಇರುವ ಮಾಜಿ ಉಪ ಪ್ರಧಾನಿಯಾದ ಡಾ!! ಬಾಬು ಜಗಜೀವನ ರಾಮ ರವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ರಾಯಬಾಗ
ದಲ್ಲಿನ ಪಠಾಣ ಹಾಲದಲ್ಲಿ ನಮ್ಮ ಹೋರಾಟಗಾರರಿಗೆ ಮತ್ತು ಸಮಾಜ ಬಾಂಧವರೆಲ್ಲರಿಗೆ ತಯಾರಿಸಿದ ರುಚಿಕಟ್ಟಾದ ವಿಶೇಷ ಊಟವನ್ನ ಸವೆದೆವು. ನಂತರ ರಾಯಬಾಗದ ಹೃದಯ ಭಾಗದಲ್ಲಿರುವ ಝೇಂಡಾ ಕಟ್ಟೆಯಲ್ಲಿ ಕ್ರಾಂತಿಯ ಗೀತೆಗಳನ್ನ ಹಾಡಿದರು. ಅಲ್ಲಿ ನಮ್ಮ ಸಮಾಜದ ಪ್ರಮುಖ ಬೇಡಿಕೆಯಾದ ನ್ಯಾಯ ಮೂರ್ತಿಎ.ಜೆ.ಸದಾಶಿವ ಆಯೋಗದ ವರದಿಯ ಜಾರಿ ಗೊಳಿಸುವ ಸಲುವಾಗಿ ಕರ್ನಾಟಕ ರಾಜ್ಯ ಸರ್ಕಾರವನ್ನ ಎಚ್ಚರಿಸುವ ಮನವಿಯನ್ನ ಮಾನ್ಯ ತಹಸೀಲ್ದಾರ ಸಾಹೇಬರು ರಾಯಬಾಗ ಇವರ ಮುಖಾಂತರ ಮುಖ್ಯ ಮಂತ್ರಿಯವರಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಯವರಿಗೆ ನೀಡಲಾಯಿತು.

ಸದರಿ ಮನವಿಯ ಪ್ರತಿಯನ್ನ ಎಲ್ಲ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದ ವರದಿಗಾರರಿಗೆ ಎಲ್ಲ ನಮ್ಮ ಮಾದಿಗ ಸಮಾಜದ ತಾಲೂಕಿನ ಮುಖಂಡರ ಮತ್ತು ನಮ್ಮ ಸಮಾಜದ ಆದಿಜಾಂಭವ ಗುರುಪೀಠದ ಸ್ವಾಮಿಜಿಗಳಾದ ಶ್ರೀ ಅನಂತಾನಂದ ಮಹಾಸ್ವಾಮಿಗಳು ರಾಯಬಾಗ ಇವರ ಸಮ್ಮುಖದಲ್ಲಿ ನೀಡಿದೆವು. ನಂತರ ಸಂವಿಧಾನ ಶಿಲ್ಪಿಯಾದ ವಿಶ್ವ ರತ್ನ ಡಾ!! ಬಾಬಾಸಾಹೇಬ ಅಂಬೇಡಕರರವರ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿ ಮುಂದೆ ಸಾಗಿದೆವು. ಸಮಯದ ಅಭಾವ ಇರುವ ಕಾರಣ ಮಾವಿನಹೊಂಡಾ ಗ್ರಾಮದ ತಾಯಂದಿರು ನಮ್ಮನ್ನು ನೀರು ನೀಡಿ ಆರತಿ ಬೆಳಗುವ ಮೂಲಕ ಹರಿಸಿ ಕಳಿಸಿದರು ಮೇಖಳಿ,ಮಂಟೂರ ಗ್ರಾಮಗಳ ಸಮಾಜದ ಸಭೆಗೆ ಹೋಗಲು ಆಗಲಿಲ್ಲ ನೇರವಾಗಿ ಬೆಂಡವಾಡ ಗ್ರಾಮದ ನಮ್ಮ ಮಾದಿಗ ಸಮಾಜದ ಓಣಿಯಲ್ಲಿರುವ ಶ್ರೀ ಶಾಂತಲಕ್ಷ್ಮೀ ದೇವಿಯ ಗುಡಿಯ ಮುಂಬಾಗದಲ್ಲಿ ಕಾರ್ಯಕ್ರಮ ಮಾಡಲಾಯಿತು. ಈ ಸಭೆಯಲ್ಲಿ ಸಮಯದ ಅಭಾವದ ಕಾರಣ ಶ್ರೀ ಚಂದ್ರಕಾಂತ ಕಾದ್ರೋಳಿಯವರು ಮಾತ್ರ ಮಾತನಾಡಿದರು. ಎಲ್ಲರನ್ನ ಹೃದಯ ಪೂರ್ವಕವಾಗಿ ನೀರು ನೀಡಿ ಆರತಿ ಬೆಳಗುವ ಮೂಲಕ ನಮಗೆಲ್ಲ ಸ್ವಾಗತಿಸಿಕೊಂಡರು. ನಂತರ ಬಾನಿಕಟ್ಟೆಗೆ ಹೋಗಿ ನಮಸ್ಕಾರ ಮಾಡಿ ಆಶೀರ್ವಾದ ಪಡೆದು ವೇದಿಕೆಯ ಕಾರ್ಯಕ್ರಮವನ್ನ ಪ್ರಾರಂಭಿಸಿದೆವು. ಎಲ್ಲರನ್ನ ಮಾಲಾರ್ಪನೆ ಮಾಡುವ ಮೂಲಕ ಸನ್ಮಾನಿಸಿದರು ಹಿರಿಯ ವಕೀಲರಾದ ಶ್ರೀ ವಿನಯನಿಧಿ ಕಮಾಲ ರವರು ನಿರೂಪಿಸಿದರು. ಸ್ಥಳೀಯರ ಒತ್ತಾಯದ ಮೇರೆಗೆ ಚಹಾ ಸ್ವಿಕರಿಸಿ ನೇರವಾಗಿ ಚಿಕ್ಕೋಡಿಯ ತಾಲೂಕಿನ ಉಮರಾಣಿ ಗ್ರಾಮಕ್ಕೆ ಹೋದೆವು. ಅಲ್ಲಿ ನಮ್ಮ ಸಮಾಜದ ತಾಯಂದಿರು ನಮಗೆಲ್ಲ ನೀರು ನೀಡಿ ಆರತಿ ಬೆಳಗಿ ನಮಸ್ಕಾರ ಮಾಡಿ ತಮ್ಮ ಗ್ರಾಮಕ್ಕೆ ಹಾಗೂ ಸಮಾಜದ ಓಣೆಗೆ ಸ್ವಾಗತಿಸಿ ಕೊಂಡರು. ಹೋರಾಟಗಾರರು ಕ್ರಾಂತಿಯ ಮತ್ತು ಜಾಗೃತ ಗೊಳಿಸುವ ಗೀತೆಗಳನ್ನ ಹಾಡಿ ರಂಜಿಸಿದರು.ಅಲ್ಲಿಂದ ಚಿಕ್ಕೋಡಿಯಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಡಲಾಯಿತು. ಈ ಎಲ್ಲ ಕಾರ್ಯಕ್ರಮಕ್ಕೆ ಸಹಕರಿಸಿದ ಹಿರಿಯರಾದ ಶ್ರೀ ಸಂಜು ಮೈಶಾಳೆ, ಶ್ರೀ ಉದಯ ರೆಡ್ಡಿ, ಶ್ರೀ ರಾಜು ಮೈಶಾಳೆ, ಶ್ರೀ ಅನೀಲ ಮೈಶಾಳೆ, ಶ್ರೀ ಉಮೇಶ ಪೂಜೆರಿ, ಶ್ರೀ ಪ್ರಹ್ಲಾದ ದೇವಋಷಿ, ಶ್ರೀ ರಿತೇಶ ಅವಳೆ ಮತ್ತು ಶ್ರೀ ರವಿ ದೇವರಮನಿ ಹಾಗೂ ಇತರ ಎಲ್ಲ ಮುಖಂಡರೆಲ್ಲ ರಿಗೂ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ನಾನೂ ಹೃದಯ ಪೂರ್ವಕ ಅಭಿನಂದನೆಗಳನ್ನ ಸಲ್ಲಿಸುತ್ತೇನೆ…

ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend