ಕಾರುಣ್ಯಾಶ್ರಮದಲ್ಲಿ ಆಶ್ರಯ ಪಡೆದ ಹನುಮಂತಮ್ಮಳಿಂದ ನೂತನ ಕಾರುಣ್ಯ ಆಶ್ರಮದ ಕಟ್ಟಡಕ್ಕೆ ಸಹಾಯ ಹಸ್ತ…!!!

ಕಾರುಣ್ಯಾಶ್ರಮದಲ್ಲಿ ಆಶ್ರಯ ಪಡೆದ ಹನುಮಂತಮ್ಮಳಿಂದ ನೂತನ ಕಾರುಣ್ಯ ಆಶ್ರಮದ ಕಟ್ಟಡಕ್ಕೆ ಸಹಾಯ ಹಸ್ತ.. ಸಿಂಧನೂರು ತಾಲೂಕಿನ ಕಲ್ಲೂರು ಕ್ರಾಸ್ ನಲ್ಲಿ ವಾಸವಾಗಿದ್ದ ಅನಾಥ ಜೀವಿ ಹನುಮಂತಮ್ಮ ವಯಸ್ಸು-56 ಎನ್ನುವ ಅನಾಥೆ ಸುಮಾರು ಒಂದು ವರ್ಷಗಳಿಂದ ಕಾರುಣ್ಯ ಆಶ್ರಮದಲ್ಲಿ ಆಶ್ರಯ ಪಡೆದಿದ್ದಳು. ಮೊದಲು ತಾನು ಸ್ವತಃ ಕೂಲಿ ಮಾಡಿದ್ದ ಸುಮಾರು 21.500 ರೂಪಾಯಿಗಳನ್ನು ನಗರದ ಒಳಬಳ್ಳಾರಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಾರುಣ್ಯ ಆಕ್ರಮದ ಕಟ್ಟಡ ಕಾಮಗಾರಿಗೆ ವಿತರಿಸಿ ಮಾನವೀಯತೆ ಮೆರೆದಿದ್ದಾಳೆ. ಅನಾರೋಗ್ಯದಿಂದ ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹನುಮಂತಮ್ಮ ನಮ್ಮ ಆಶ್ರಮದ ಕಣ್ಣುಗಳಾದ ಚನ್ನಬಸಯ್ಯ ಸುಜಾತಮ್ಮ ನಮ್ಮಂತಹ ಎಷ್ಟೋ ಅಂಧ ಅನಾಥ ಜೀವಿಗಳಿಗೆ ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಗಳು ಎಂದೆನಿಸಿಕೊಂಡಿದ್ದಾರೆ ನನ್ನ ದುಡಿಮೆಯ ಫಲ ಅನಾಥ ಜೀವಿಗಳ ಬದುಕಿಗೆ ಸಿಗುತ್ತಿರುವುದು ನನ್ನ ಅದೆಷ್ಟೋ ಜನ್ಮಗಳ ಪುಣ್ಯ ನಮ್ಮ ಸಿಂಧನೂರ್ನ ಅದೆಷ್ಟೋ ಶ್ರೀಮಂತರು ಆಶ್ರಮದಲ್ಲಿ ತಮ್ಮ ಕಾರ್ಯಕ್ರಮಗಳನ್ನು ಮಾಡಿಕೊಳ್ಳುವಾಗ ಕೊಟ್ಟ ಭರವಸೆಗಳು ಮಾತಲ್ಲೇ ಉಳಿದಿವೆ. ನಮ್ಮ ಸಿಂಧನೂರಿನ ಪುಣ್ಯಾತ್ಮ ವೈದ್ಯರುಗಳಾದ ಕಣ್ಣಿನ ಡಾ.ಚನ್ನನ ಗೌಡ ಆರ್ ಪಾಟೀಲ್. ಹಾಗೂ ಸಹನಾ ಆಸ್ಪತ್ರೆಯ ಡಾ. ಕೆ.ಶಿವರಾಜ ಪದ್ಮಾ ನರ್ಸಿಂಗ್ ಹೋಮ್ ನ ಡಾ. ಸುಧೀರ್ ಡಾ. ನಾಗಮಣಿ ಇವರುಗಳಿಂದ ನಮಗೆ ನಿರಂತರ ಸಹಾಯ ಸಿಗುತ್ತಿದೆ. ಕಾರುಣ್ಯ ಆಶ್ರಮದ ಬಾಡಿಗೆ ಕಟ್ಟುವುದು ತಪ್ಪಿದರೆ ನಮ್ಮಂತ ಹಲವಾರು ನೊಂದು ಬೆಂದ ಜೀವಿಗಳಿಗೆ ಪ್ರೀತಿಯ ಅರಮನೆ ಸಿಗುತ್ತದೆ ಹರೇಟನೂರು ಗ್ರಾಮದ ಶ್ರೀ ಆದಿಶಕ್ತಿ ದ್ಯಾವಮ್ಮ ದೇವಿಯ ಮಂಗಳಾರತಿ ತಟ್ಟೆ ನಮ್ಮಂತಹ ಅನಾಥರನ್ನು ರಕ್ಷಣೆ ಮಾಡಿ ಕಾಪಾಡುತ್ತಿದೆ ಎಂದು ಭಾವನಾತ್ಮಕವಾಗಿ ಮಾತನಾಡಿದರು. ಈ ಸಹಾಯವನ್ನು ಆಶ್ರಮದ ಆಡಳಿತಾಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಸ್ವೀಕರಿಸಿದರು. ಈ ಸಮಯದಲ್ಲಿ ಅವರ ದುಡಿಮೆಯ ಹಣವನ್ನು ಕಲ್ಲೂರು ಕ್ರಾಸ್ ನ ಅಂಗನವಾಡಿ ಕಾರ್ಯಕರ್ತೆಯಾದ ತಾಯಮ್ಮ ಅವರು ಆಶ್ರಮಕ್ಕೆ ವಿತರಿಸುವ ಮೂಲಕ ಮಾನವತೆ ಮೆರೆದರು. ಈ ಸಮಯದಲ್ಲಿ ಆಶ್ರಮದ ಸೇವಾಕರ್ತರುಗಳಾದ ಗಿರಿಜಮ್ಮ ಬಸಮ್ಮ ಮತ್ತು ಇನ್ನಿತರ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ. ಉಮೇಶ್, ಎಚ್, ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend