ರಾಜ್ಯಪಾಲರಿಂದ “ಸಾಮಾಜಿಕ ತುರ್ತು ಪ್ರತಿಕ್ರಿಯೆ ಸ್ವಯಂ ಸೇವಕರ” ತಂಡಕ್ಕೆ ಚಾಲನೆ
ಬಳ್ಳಾರಿ,: ಗೌರವಾನ್ವಿತ ರಾಜ್ಯಪಾಲರು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಅಧ್ಯಕ್ಷರಾದ ಥಾವರ್‍ಚಂದ್ ಗೆಹ್ಲೋಟ್ ಅವರು ಶುಕ್ರವಾರದಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಆಡಳಿತ ಭವನ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಥಮ ಚಿಕಿತ್ಸೆಯಲ್ಲಿ ನಿರತ ತರಬೇತುದಾರರ “ಸಾಮಾಜಿಕ ತುರ್ತು ಪ್ರತಿಕ್ರಿಯೆ ಸ್ವಯಂ ಸೇವಕರ” ತಂಡಕ್ಕೆ ಚಾಲನೆ
ನೀಡಿದರು.

ಈ ತಂಡದವರು ಪ್ರಥಮ ಚಿಕಿತ್ಸೆಯನ್ನು ಪ್ರವಾಹ ವೇಳೆಯಲ್ಲಿನ ರಕ್ಷಣೆ ಮತ್ತು ಅಗ್ನಿಶಮನ ಕುರಿತು ವಿಶೇಷ ತರಬೇತಿ ಹೊಂದಿರುತ್ತಾರೆ. ಇವರಿಗೆ ರೆಡ್ ಕ್ರಾಸ್ ಸಂಸ್ಥೆಯಿಂದ ಪ್ರಥಮ ಚಿಕಿತ್ಸೆಯ ಪೆಟ್ಟಿಗೆಯನ್ನು ಉಚಿತವಾಗಿ ನೀಡಲಾಗಿದೆ. ನಗರದಲ್ಲಿ ರಸ್ತೆ ಅಪಘಾತದ ಸಮಯದಲ್ಲಿ ಗಾಯಾಳುಗಳನ್ನು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯ ಸೇವೆಯನ್ನು ಮಾಡಲು ಮುಂದಾಗಿರುತ್ತಾರೆ. ರೆಡ್ ಕ್ರಾಸ್ ಸಂಸ್ಥೆಯಲ್ಲಿ ಇವರಿಗೆ ಸತತವಾಗಿ ನಾಲ್ಕು ವರ್ಷಗಳಿಂದ ತರಬೇತಿಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ರೆಡ್‍ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಡಾ.ಎಸ್.ಜೆ.ವಿ.ಮಹಿಪಾಲ್,
ಕಾರ್ಯದರ್ಶಿ ಎಂ.ಎ.ಷಕೀಬ್, ಇ.ಸಿ ಸದಸ್ಯರಾದ .ಕಪ್ಪಗಲ್ಲು ವಿರೇಶ್, ಸರ್ವ್ ತಂಡದ ಸದಸ್ಯರಾದ ನಿಸಾರ್ ಅಹಮದ್, ಪಿ.ವಾಸು, ಮಹಮ್ಮದ್ ಇಜಾಜ್, ತಾಹರ್ ಸೇಟ್, ಸಮೀರ್ ಸೇಟ್, ಚನ್ನ ಬಸವ, ನರೇಶ್ ಕುಮಾರ್, ಖಾಜಾ ಮೈನುಸ್ಸೇನ್, ರಿಜ್ವಾನ, ತಮೀಮ್ ಜಕಾಲಿ, ದಿವಾಕರ್, ಬಜರಂಗ್ ಶರ, ಮೆಹಬೂಬ್ ಬಾಷಾ ,ಮತ್ತು ಎಂ.ವಲಿ ಬಾಷಾ , ರಾಮಾಂಜಿನೇಯಲು, ಶಿಲ್ಪ ಹಾಗೂ ಇತರರು ಇದ್ದರು…

ವರದಿ. ವಿರೇಶ್.ಎಚ್. ಸಿರಿಗುಪ್ಪ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
