ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಚಿಣ್ಣರ ಚಿತ್ತಾರ ಅಭಿಯಾನ ಕಾರ್ಯಕ್ರಮ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಹೂಡೇಂ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಭಾನುವಾರ ಚಿಣ್ಣರ ಚಿತ್ತಾರ ಅಭಿಯಾನ ಕಾರ್ಯಕ್ರಮವನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಗುರು ಕನಕ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು, ಮತ್ತು ಹೂಡೇಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಭಾಗವಹಿಸಿದ್ದರು. ಎಲ್ಲಾ ಮಕ್ಕಳು ಸುಂದರವಾದ ಚಿತ್ರಗಳನ್ನು ಬಿಡಿಸಿದರು. ಅವರು ಬಿಡಿಸಿದ ಚಿತ್ರಗಳಲ್ಲಿ ಸುಂದರವಾದ ಗ್ರಂಥಾಲಯ ಚಿತ್ರ, ರಾಷ್ಟ್ರಧ್ವಜ ಚಿತ್ರ, ಪರಿಸರ ಚಿತ್ರ, ಮನೆ, ಶಾಲಾ ಚಿತ್ರ ಪ್ರಮುಖವಾಗಿದ್ದವು. ಇನ್ನೂ ಮುಂತಾದ ಚಿತ್ರಗಳನ್ನು ಬಿಡಿಸಿ ಮಕ್ಕಳು ಸಂತಸ ವ್ಯಕ್ತಪಡಿಸಿದರು. ಮಕ್ಕಳು ಕಂಪ್ಯೂಟರನಲ್ಲಿ ನೀತಿ ಕಥೆಗಳನ್ನು ವೀಕ್ಷಣೆ ಮಾಡಿದರು. ಈ ಸಮಯದಲ್ಲಿ ಗ್ರಂಥಾಲಯ ಓದುಗರು ಭಾಗವಹಿಸಿದ್ದರು. ಚಿಣ್ಣರ ಚಿತ್ತಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಗ್ರಂಥಪಾಲಕರು ಟಿ ಗುರುರಾಜ್ ಅಭಿನಂದನೆಗಳನ್ನು ಸಲ್ಲಿಸಿ, ಮಕ್ಕಳಿಗೆ ಕಥೆ ಪುಸ್ತಕಗಳನ್ನು ವಿತರಿಸಿ, ಸಿಹಿ ವಿತರಿಸಿದರು…

ವರದಿ.ವಿರೇಶ್. ಕೆ. ಎಸ್. ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
