ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ನೇಮಕ,,,, ವಿಜಯನಗರ ಜಿಲ್ಲಾ ಭಾರತೀಯ ಜನತಾ ಪಕ್ಷದ ಕೂಡ್ಲಿಗಿ ಮಂಡಲದ ಕಾನೂನು ಪ್ರಕೋಷ್ಠದ ಸಂಚಾಲಕರಾಗಿ ವಕೀಲರಾದ ತಿಪ್ಪೇಶ್ ಎಸ್ ಎನ್ ಇವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀ ಚನ್ನಬಸವನಗೌಡ ಪಾಟೀಲ್ ಆದೇಶದ ಮೇರೆಗೆ ಕೂಡ್ಲಿಗಿ ಮಂಡಲ ಬಿಜೆಪಿ ಅಧ್ಯಕ್ಷ ಕೆ ಚನ್ನಪ್ಪ ರವರು ಆದೇಶ ಪ್ರತಿ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ತಿಪ್ಪೇಶ್ ರವರು ನನ್ನ ಆಯ್ಕೆಗೆ ಸಹಕಾರ ನೀಡಿದ ಪಕ್ಷದ ಮುಖಂಡರುಗಳಾದ ಬಿಜೆಪಿ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಪೂಜಪ್ಪ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೂರ್ಯ ಪಾಪಣ್ಣ, ಡಾಕ್ಟರ್ ರಮೇಶ್, ಬಿ.ರಾಘವೇಂದ್ರ, ಹಾಗೂ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಶಿಂಧೆ ಮತ್ತು ಕೂಡ್ಲಿಗಿ ಮಂಡಲ ಬಿಜೆಪಿ ಕಾರ್ಯದರ್ಶಿ ಮಂಜಣ್ಣ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಗುಳಗಿ ವೀರೇಶ್ ಹಾಗೂ ಪಕ್ಷದ ಮುಖಂಡರಿಗೂ ಎಲ್ಲ ಪದಾಧಿಕಾರಿಗಳಿಗೆ ಹೃದಯಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇನೆ ಮತ್ತು ನನಗೆ ಬಿಜೆಪಿ ಪಕ್ಷ ನೀಡಿದ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ನೂತನ ಬಿಜೆಪಿ ತಾಲೂಕು ಪ್ರಕೋಷ್ಠದ ಸಂಚಾಲಕ ತಿಪ್ಪೇಶ್ ಎಸ್. ಎನ್ ತಿಳಿಸಿದರು..

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
