ರಾಜ್ಯ ಮಟ್ಟದ ಆಂಗ್ಲ ಮಾಧ್ಯಮ ಪ್ರಬಂಧ ಸ್ಪರ್ಧೆಗೆ ಆಯ್ಕೆಯಾದ ಕನ್ನಡ ಮಾಧ್ಯಮ ಕಲಾ ವಿಭಾಗದ ವಿದ್ಯಾರ್ಥಿ…!!!

ರಾಜ್ಯ ಮಟ್ಟದ ಆಂಗ್ಲ ಮಾಧ್ಯಮ ಪ್ರಬಂಧ ಸ್ಪರ್ಧೆಗೆ ಆಯ್ಕೆಯಾದ ಕನ್ನಡ ಮಾಧ್ಯಮ ಕಲಾ ವಿಭಾಗದ ವಿದ್ಯಾರ್ಥಿ. ರಾಜ್ಯ ಮಟ್ಟದ ಆಂಗ್ಲ ಮಾಧ್ಯಮ ಪ್ರಬಂಧ ಸ್ಪರ್ಧೆಗೆ ಆಯ್ಕೆಯಾದ ಗ್ರಾಮೀಣ ಪ್ರತಿಭೆ, ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಇಟ್ಟಿಗಿ ಪಂಚಮಸಾಲಿ ಕಾಲೇಜಿನ ವಿದ್ಯಾರ್ಥಿ ಬೇಬಿ. ದ್ವಿತೀಯ ಪಿ.ಯು. ಸಿ. ಫಲಿತಾಂಶದಲ್ಲಿ 4 ಮತ್ತು 6ನೇ ರ್ಯಾಂಕ್ ಪಡೆದು ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದ ಹೂವಿನ ಹಡಗಲಿ ತಾಲೂಕು ಇಟ್ಟಿಗಿ ಗ್ರಾಮದ ಶ್ರೀ ಪಂಚಮಸಾಲಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿ ಬೇಬಿ ಎಂ ನೂತನ ವಿಜಯನಗರ ಜಿಲ್ಲೆಯಿಂದ ಕಲಬುರುಗಿ ವಿಭಾಗ ಮಟ್ಟದ ಪದವಿ ಪೂರ್ವ ಕಾಲೇಜುಗಳ 2022-23ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಸಿ ಅತ್ಯುತ್ತಮ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ದಿನಾಂಕ ೦5/12/2022ರಂದು ಕಲಬುರುಗಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನೆಡದ ಪಿ. ಯು. ಸಿ ಆಂಗ್ಲ ಮಾಧ್ಯಮ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ವಿಭಾಗ ಮಟ್ಟದಲ್ಲಿ ವಿಜೇತಳಾಗಿ ರಾಜ್ಯ ಮಟ್ಟಕೆ ಆಯ್ಕೆಯಾದ ವಿದ್ಯಾರ್ಥಿನಿ ಬೇಬಿ ಗೆ ಶ್ರೀ ಪಂಚಮಸಾಲಿ ಕಾಲೇಜಿನ ಆಡಳಿತ ಮಂಡಳಿ. ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಶುಭ ಹಾರೈಸುತ್ತಾರೆ.ಹೀಗೇ ಇವರ ಸಾಧನೆಯ ಹಾದಿ ಮುನ್ನಡಯಲೆಂದು ನಮ್ಮ ಪತ್ರಿಕೆಯ ಆಶಯ.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend