ಸಾರ್ವಜನಿಕ ಮಹಿಳಾ ಶೌಚಾಲಯಗಳನ್ನು ಮರು ನಿರ್ಮಿಸಲು ಶಾಸಕರಿಂದ ಅನುಮತಿ…!!!

ಸಾರ್ವಜನಿಕ ಮಹಿಳಾ ಶೌಚಾಲಯಗಳನ್ನು ಮರು ನಿರ್ಮಿಸಲು ಶಾಸಕರಿಂದ ಅನುಮತಿ,,,, ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 9ನೇ ವಾರ್ಡಿನಲ್ಲಿ ಪಟ್ಟಣ ಪಂಚಾಯಿತಿ ಕಡೆಯಿಂದ ಇತ್ತೀಚಿಗೆ ತೆರವುಗೊಳಿಸಿದ್ದ ಮಹಿಳಾ ಸಾಮೂಹಿಕ ಶೌಚಾಲಯಗಳನ್ನು ಪುನಃ ಅದೇ ಸ್ಥಳದಲ್ಲಿ ಶೀಘ್ರವೇ ಶೌಚಾಲಯಗಳನ್ನು ನಿರ್ಮಿಸಬೇಕು. ಮೂರು ಮೂರು ವಾರ್ಡ್ಗಳ ಮಹಿಳೆಯರು ಹಾಗೂ ಸಿಐಟಿಯು ಸಂಘಟನೆಯ ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ಅವರ ನೇತೃತ್ವದಲ್ಲಿ ಸ್ಥಳೀಯ ತಾಲೂಕು ಆಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. ಈ ಮನವಿಯಲ್ಲಿ ಮಹಿಳಾ ಶೌಚಾಲಯಗಳನ್ನು ತೆರವುಗೊಳಿಸಿದ ಜಾಗದಲ್ಲಿಯೇ ಮರು ನಿರ್ಮಾಣ ಮಾಡುವವರೆಗೂ ನಮ್ಮಗಳ ಹೋರಾಟ ನಿಲ್ಲದು, ಇದಕ್ಕೆ ಸಂಬಂಧಿಸಿದಂತೆ ಇಲ್ಲಿನ ವಾರ್ಡ್ಗಳ ಬಡ ಮಹಿಳೆಯರು ಜನವಾದಿ ಮಹಿಳಾ ಸಂಘಟನೆ ಮತ್ತು ಸಿಐಟಿಯು ಸಂಘಟನೆ ಸಹಕಾರದೊಂದಿಗೆ. ಶೌಚಾಲಯಗಳ ಸೇವೆ ದೊರೆಯುವವರೆಗೂ ಬಿಡುವುದಿಲ್ಲ ಎಂದು ತಿಳಿಸಿದ್ದರು, ಈ ವಿಷಯ ಮಾನ್ಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಅವರಿಗೆ ಗಮನಕ್ಕೆ ಬಂದಾಗ ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕರು ಕೂಡಲೇ ತೆರವುಗೊಳಿಸಿದ ಜಾಗದಲ್ಲೇ ಮರು ನಿರ್ಮಾಣ ಮಾಡುವುದಕ್ಕೆ ಸಂಬಂಧಪಟ್ಟ ಪಟ್ಟಣ ಪಂಚಾಯ್ತಿ ಇಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಯಿಸಿ ಮಾತನಾಡಿ ನಾಳೆಯಿಂದಲೇ ಇದಕ್ಕೆ ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ಕರೆದು ಮೀಟಿಂಗ್ ಮಾಡಿ ಸ್ಥಳ ಪರಿಶೀಲಿಸಿ ಮಹಿಳಾ ಶೌಚಾಲಯಗಳನ್ನು ಅಲ್ಲಿಯೇ ನಿರ್ಮಿಸಿಕೊಡಲು ಅನುಮತಿ ನೀಡಿದರು, ಇದೇ ವೇಳೆ ಶಾಸಕರು ಮಾತನಾಡುತ್ತಾ ಹೇಳಿದರು..

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend