ರಾಜ್ಯಸರ್ಕಾರ, ಅಥವಾ ಕೇಂದ್ರ ಸರ್ಕಾರ ಬಡವರ ಕಷ್ಟಕ್ಕೆ ಹಾಗೂ ಸರ್ಕಾರಗಳ ವಹಿವಾಟಿಗೋಸ್ಕರ ಬ್ಯಾಂಕ್ ಗಳನ್ನು ಸ್ಥಾಪನೆ ಮಾಡಿವೆ ಮತ್ತು ದೇಶದ ವಹಿವಾಟನ್ನು ಸಮತೋಲನ ವ್ಯವಸ್ಥೆಯಲ್ಲಿ ಮುನ್ನೆಡೆಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸ್ಥಾಪನೆ ಮಾಡಿದೆ ಆದರೆ ಕೆಲವು, ಬಂಡವಾಳಿಶಾಹಿಗಳು ತಮ್ಮ ಹಣವನ್ನು ಹಾಗೆ ನೇರವಾಗಿ ಬೇರೆಯವರ ನಡುವೆ ವ್ಯವಹರಿಸುವುದನ್ನು ಬಿಟ್ಟು ರಾಷ್ಟ್ರೀಕೃತ ಬ್ಯಾಂಕ್ ಗಳ ಒಂದು ಪರವಾನಿಗೆಯನ್ನು ಪಡೆದಿದ್ದೇವೆ ಎಂದು ಅದು ಸುಳ್ಳೋ ನಿಜವೋ ಅವರಿಗೆ ಗೊತ್ತು, ಅಂದರೆ ಮೈಕ್ರೋ ಫೈನಾನ್ಸ್ ಗಳಾದ, ಬಜಾಜ್, ಇಂಡಿಯನ್ ಬುಲ್ಸ್, ಹಾಗೂ ಇನ್ನಿತರ ಫೈನಾನ್ಸ್ ಕಂಪನಿಗಳು ಬಡವರ ಒಂದು ಬದುಕಿಗೆ ಬರೆಎಳೆಯುತ್ತಿವೆ ಅಂದರೆ ಕೈಸಾಲ, ವಸ್ತುಗಳ ಮೇಲಿನ ಪ್ರೈಸ್ ಗೆ ಸಾಲವನ್ನು ಕೊಟ್ಟು, ಗ್ರಾಹಕರಿಂದ ಬಡ್ಡಿಯ ದುಪ್ಪಟ್ಟು ಹಣವನ್ನು ವಸೂಲಿಮಾಡಲು ಮಾನವನ್ನು ಬಿಟ್ಟು ನಿಂತಿವೆ ಅಂದರು ತಪ್ಪಾಗಲಾರದು.
ಹಾಗೂ ಗ್ರಾಹಕರು ಹಣ ಕಟ್ಟಲು ಸ್ವಲ್ಪ ದಿನಗಳ ಮಟ್ಟಿಗೆ ತಡವಾದರೂ ರೌಡಿಗಳ ರೀತಿಯಲ್ಲಿ, ನಾನೊಬ್ಬ ಲೀಗಲ್ ಅಡ್ವಕೆಟ್ ಎಂಬುವ ಕರೆ ಬರುತ್ತದೆ ಇನ್ನೇನು ಬಡವರಿಗೆ ಹಾಗೂ ಸಾಲವನ್ನು ತೆಗೆದುಕೊಂಡ ಗ್ರಾಹಕರಿಗೆ ಮುಂದಿನ ದಾರಿ ಸಾಯುವುದೊಂದನ್ನು ಬಿಟ್ಟರೆ ಮತ್ತೇನು ದಾರಿ, ಕೆಲವು ಮೈಕ್ರೋ ಫೈನಾನ್ಸ್ ಬ್ಯಾಂಕ್ ಗಳು, ಮೊಬೈಲ್ ಅಥವಾ ಇನ್ನಿತರ ಒಂದು ರೀತಿಯಲ್ಲಿ ಸಾಲವನ್ನು ಕೊಟ್ಟು,30ರಿಂದ 40%ಬಡ್ಡಿಯನ್ನು ತೆಗೆದುಕೊಂಡು ಮತ್ತು ಬಡ್ಡಿಗೆ ಚಕ್ರಬಡ್ಡಿಯನ್ನು ತೆಗೆದುಕೊಳ್ಳುತ್ತಿವೆ ಎನ್ನುತ್ತಾರೆ ಕೆಲ ಗ್ರಾಹಕರು.
ನಮಗೆ ಒಂದೇ ಪ್ರಶ್ನೆ ಲೀಗಲ್ ಲಾಯರ್ ಎಂದು ನೋಟೀಸ್ ಕೊಡುತ್ತೇವೆ ಎಂದು ಆ ಒಂದು ಕಂಪನಿ ಹೆಸರಲ್ಲಿ ಕರೆ ಮಾಡುವ ಅಡ್ವಕೆಟ್ಗಳಿಗೆ ಒಂದೇ ಮನವಿ, ರಾಷ್ಟೀಕೃತ ಬ್ಯಾಂಕ್ ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಎಷ್ಟು ಅಸಲಿಗೆ ಬಡ್ಡಿಯನ್ನು, ವಿಧಿಸಬೇಕು ಎನ್ನುವುದೊಂದೇ ನಮಗೆ ಪ್ರಶ್ನೆ.

ಮತ್ತು ಲೀಗಲ್ ಅಡ್ವಕೆಟ್ ಎಂದು ಕಾಲ್ ಮಾಡುವ ಲಾಯರ್ ಅದೆಷ್ಟ್, ಅವರು ಲೀಗಲ್ ಆಗಿ ಕಾನೂನು ಜ್ಞಾನ ಹೊಂದಿರುವರೋ ಎನ್ನುವುದೇ ನಮ್ಮನ್ನು ಕಾಡುವ ಪ್ರಶ್ನೆ ಹಾಗೂ ಕಳೆದೆರಡು ವರ್ಷಗಳಿಂದ ಕೊರೋನಾ ವೆಂಬ ಮಹಾಮಾರಿಗೆ ದೇಶದ ಜನಗಳು ಸಿಕ್ಕು ಸಾಯುವ ಬದಲು ತಮ್ಮ ಒಂದು ಬಡ ಜೀವವನ್ನು ತಮ್ಮ ಮುಷ್ಟಿಯಲ್ಲಿ ಇಡಿದು ಬದುಕುವುದೇ ದೊಡ್ಡವಿಚಾರ ಅದರಲ್ಲಿ ಈ ಅಡ್ನಾಡಿ ಬ್ಯಾಂಕ್ ಗಳು ನೆಮಿಸಿಕೊಂಡಿರುವ ಈ ಲೀಗಲ್ ಗಳು ಗ್ರಹಕರನ್ನು ಏರುಧ್ವನಿಯಲ್ಲಿ ಬಡವರು ತೆಗೆದುಕೊಂಡಿರುವ ಸಾಲದ ಹಣಕ್ಕೆ, ದುಬಾರಿ ಬಡ್ಡಿ ಅದು ಬರೀ ಒಂದೇ ಒಂದು ಗಂಟೆಯಲ್ಲಿ ಕಟ್ಟಿದರೆ ನಿಮಗೆ ನೋಟೀಸ್ ಕೊಡುವುದಿಲ್ಲ ಇಲ್ಲವೆಂದರೆ ಲೀಗಲ್ ನೋಟೀಸ್ ಜಾರಿ ಮಾಡುತ್ತೇವೆ ನೀವೇ ವಿಚಾರ ಮಾಡಿ ನಮ್ಮ ದೇಶ ಹುಟ್ಟಿದಾಗಿನಿಂದ ನಮ್ಮದೇ ಆದ “ಭಾರತೀಯ ರಿಸರ್ವ್ ಬ್ಯಾಂಕ್ “ಸಾಲವನ್ನು ಪಡೆದ ಸಾಲಗಾರನಿಗೆ ಅಲ್ಪ ಬಡ್ಡಿಯನ್ನು ಕೊಟ್ಟು ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ಸಾಗುತ್ತಿದ್ದರೆ ಈ ದುಬಾರಿ ಬಡ್ಡಿ ಬ್ಯಾಂಕ್ ಗಳ ಸಾಲದ ಸುಳಿಯಲ್ಲಿ ಸಾಲಗಾರನು ಸಿಲುಕಿ ಇನ್ನೇನು, ಆಂಧ್ರ ಪ್ರದೇಶದ ಹೈದ್ರಾಬಾದ್ ನಲ್ಲಿ ಸತ್ತ ಹಾಗೆ ಇನ್ನೆಷ್ಟು ಜನರ ಪ್ರಾಣವನ್ನು ತೆಗೆದುಕೊಳ್ಳುತ್ತವೇಯೋ ಈ ಮೈಕ್ರೋ ಫೈನಾನ್ಸ್ ಬ್ಯಾಂಕ್ ಗಳು ಅದನ್ನು ಕೇಳಿದರೆ ನಿಮಗೆ ಸಾಲವನ್ನು ತೆಗೆದುಕೊಳ್ಳುವಾಗ ಗೊತ್ತಿರಲಿಲ್ಲವೆ, ನೀವು ಹೊಟ್ಟೆಗೆ ಏನೂ ತಿನ್ನುತ್ತಿರಿ ನಾನು ಲೀಗಲ್ ಅಡ್ವಕೆಟ್ ಮಾತನಾಡುತ್ತಿರುವುದು ಎನ್ನುವ ಉದ್ದಟತನದ ಮಾತು, ಅಂದರೆ ನಮ್ಮ ದೇಶದ ಕಾನೂನು ಎಲ್ಲರಿಗೂ ಸಮನವೋ ಅಥವಾ ಬೇರೆಯೋ ಎನ್ನುವುದು ಮಾತ್ರ ಇಲ್ಲಿ ಎಲ್ಲರನ್ನು ಕಾಡುವ ಪ್ರಶ್ನೆ, ಅಂದರೆ ಕೋಟ್ಯಾನುಗಟ್ಟಲೆ ಸರ್ಕಾರಿ, ಬ್ಯಾಂಕ್ ಗಳಲ್ಲಿ ಸಾಲವನ್ನು ಮಾಡಿರುವವರನ್ನು ಆರಾಮಾಗಿ ದೇಶದಿಂದ ಹೊರದೇಶದಲ್ಲಿ ಶೋಕಿ ಮಾಡಲು ಬಿಟ್ಟು ಸಣ್ಣ ಪುಟ್ಟ ಬಡವರ ಮೇಲೆ ಬ್ರಹ್ಮಸ್ರ ಇದು ಸರಿನಾ ನಮ್ಮ ಕಾನೂನು ಪರಿಪಾಲಕರಿಗೆ ಇಂತಹ ಬ್ಯಾಂಕ್ ಗಳು ಬಡವರ ಹಣವನ್ನು ಕೊಳ್ಳೇವೊಡೆಯುವುದನ್ನು ಬಿಟ್ಟು ಕಾನೂನಿನ. ಮತ್ತು ರಿಸರ್ವ್ ಬ್ಯಾಂಕ್ ನಿಗದಿಪಡಿಸಿರುವ ಬಡ್ಡಿಯನ್ನು ತೆಗೆದುಕೊಳ್ಳುವುದಕ್ಕೆ ಮಾರ್ಗಸೂಚಿಯನ್ನು ನೀಡಿ ಅದನ್ನು ಬಿಟ್ಟು ಅವರು ಕೊಡುವ ಬಿಡಿಗಾಸಿಗೆ, ಬಡವರ ಒಂದು ನೆಮ್ಮದಿಯನ್ನು ಹಾಳು ಮಾಡುವುದನ್ನು ಬಿಡಿ ಎಂಬುದೇ ನಮ್ಮ ಒಂದು ಕೋರಿಕೆ,,,

ಹಾಗೂ ಎದ್ದೇಳು ಗ್ರಾಹಕ ಎದ್ದೇಳು ಯಾರೇ ನಿಮಗೆ ಬ್ಯಾಂಕ್ ನವರ ಲೀಗಲ್ ಅಡ್ವಾಕೆಟ್ ಎಂದು ಕರೆ ಮಾಡಿದರೆ ದಯವಿಟ್ಟು ಎದುರಬೇಡಿ ಬದಲಿಗೆ ಎದುರು ಪ್ರಶ್ನೆ ಮಾಡಿ, ಕಾನೂನು ಯಾರಪ್ಪನ ಆಸ್ತಿಯಲ್ಲ ನಾವಿದ್ದರೆ ಕಾನೂನು ನಾವೇ ಕಾನೂನಿನ ಜ್ಞಾನವನ್ನು ಅರಿಯದೆ ಹೋದಲ್ಲಿ ದೇಶದ ಸಂವಿದಾನವನ್ನು ಕಾಪಾಡುವುದು ತುಂಬಾ ಕಷ್ಟ ಹಾಗೂ, ಇಂತಹ ಭ್ರಷ್ಟಚಾರ ಹಾಗೂ ದೌರ್ಜನ್ಯ ಮಾಡುವ ನಮಗೆ ಬೇಕಿಲ್ಲದ ಬ್ಯಾಂಕ್ ಗಳ ಜೊತೆಗೆ ವ್ಯವಹಾರ ಮಾಡಬೇಡಿ ಮತ್ತು ಭಯವನ್ನು ಬಿದ್ದು ಯಾರು ಅವರು ಹೇಳಿದಷ್ಟು ಹಣವನ್ನು ಕಟ್ಟಬೇಡಿ ಕೊಡಲಿ ನಿಮಗೆ ನೋಟೀಸ್ ಅದನ್ನು ನ್ಯಾಯಲಕ್ಕೆ ಕೊಡಿ ನ್ಯಾಯದೀಶರು ನ್ಯಾಯವನ್ನು ನೀಡಲಿ ಇಂತಹ ದುಬಾರಿ ಮೈಕ್ರೋ ಫೈನಾನ್ಸ್ ಗಳ ಉಪಟಳವನ್ನು ತೊಲಗಿಸಲಿ ಎಂದು ಹಲವು ಮಾಧ್ಯಮಗಳು ಸುದ್ದಿ ಮಾಡಿದರು ಸಹ ಇನ್ನು ಹಲವಾರು ಮೊಬೈಲ್ ಆಪ್ ಗಳಿಂದ ಸಹ ಮೋಸವನ್ನು ಮಾಡುತ್ತಿರುವುದನ್ನು ನೋಡಿದರೆ ಇದರ ಇಂದೆ ಯಾರ ಕೈವಾಡ ಇರಬಹುದು ಎಂಬುದೇ ಮೂಕ ವಿಸ್ಮಯ ಸಂಗತಿ ಯಾಕೆಂದರೆ 2100 ಅಮೌಂಟ್ ಕೊಟ್ಟು ಬರೀ 7 ದಿನಗಳಲ್ಲಿ 3500 ರೂಪಾಯಿಗಳನ್ನು ವಸೂಲಿ ಮಾಡುವ ಒಂದು ಮಾಪಿಯ ಮತ್ತೆ ಶುರುವಾಗಿದೆ ಇದನ್ನು ಪರೀಕ್ಷೆ ಮಾಡಲೆಂದೆ ನಮ್ಮ ಒಂದು ಪತ್ರಿಕಾ ತಂಡ ಪ್ರಯತ್ನ ಪಟ್ಟರೆ ಈ ಒಂದು ಫೈನಾನ್ಸಿಯಲ್ ಜಾಲದ ಸಿಬ್ಬಂದಿಗಳು ಸುಮಾರು ಭಾರಿ ಹಲವು ಅವಾಚ್ಯ ಶಬ್ದಗಳಿಂದ ಬೈದದನ್ನು ನೋಡಿದರೆ ಈ ಬೇವರ್ಸಿಗಳ ಉಪಟಳ ಇನ್ನು ತಡೆಯಲು ಯಾಕೆ ನಮ್ಮ RBI ಬ್ಯಾಂಕ್ ನ ಅಡಿಯಲ್ಲಿ ಸಾಧ್ಯವಾಗುತ್ತಿಲ್ಲ ಎನ್ನುವುದೇ ದೊಡ್ಡ ಯಕ್ಷ ಪ್ರಶ್ನೆ ಬರೀ ಒಂದು ವಾರದಲ್ಲಿ ಸುಮಾರು 1400 ಬಡ್ಡಿ ಅಬ್ಬಾ ಇದು ಯಾವ ದೇಶದಲ್ಲಿರುವ ಒಂದು ವ್ಯವಸ್ಥೆ ಎಂಬುದೇ ನಮ್ಮ ಒಂದು ಪತ್ರಿಕಾ ತಂಡದ ಆಶಯ….. ಎಚ್ಚರಿಕೆ ಇದು ಹೋರಾಟದ ಅಸ್ತ್ರ…

ವರದಿ. ಮುಕ್ಕಣ್ಣ ಹುಲಿಗುಡ್ಡ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
