ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ತಾಲೂಕು ಹೋರಾಟ ಸಮಿತಿ ಪ್ರತಿಭಟನೆ.
ಸಿಂಧನೂರು :ನ.26.ಕೇಂದ್ರ ಸರ್ಕಾರ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಸಂವಿಧಾನ ದಿನದ ಸಂದರ್ಭದಲ್ಲಿ ಭಾರತದಾದ್ಯಂತ ರೈತರು ಆಯಾ ರಾಜ್ಯಗಳಲ್ಲಿ ಬೀದಿಗಿಳಿದಿದ್ದಾರೆ. ಎಂದು ಬಸವಂತರಾಯಗೌಡ ಹೇಳಿದರು.
ಸಂಯುಕ್ತ ಹೋರಾಟ ಕರ್ನಾಟಕ,ರೈತ ವಿರೋಧಿ ಕೃಷಿ ಕಾನೂನುಗಳ ರದ್ದತಿ ಹೋರಾಟ ಸಮಿತಿಯಿಂದ ನಗರದ ಬಸವ ವೃತ್ತದಿಂದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ವೇಳೆಯಲ್ಲಿ ಮಾತನಾಡಿದರು. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಪಡಿಸಬೇಕು.ಕೃಷಿಯಲ್ಲಿ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳ ಆಧಾರವಾಗಿ ಬೆಳೆಗಳಿಗೆ ಲಾಭದಾಯಕ ಬೆಲೆಗಳನ್ನು ಪಡೆಯದ ಕಾರಣ, 80 ಪ್ರತಿಶತಕ್ಕೂ ಹೆಚ್ಚು ರೈತರು ಭಾರಿ ಸಾಲದ ಸುಳಿಯಲಿ, ಸಿಲುಕಿ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲಿ ಎಲ್ಲ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು.
ನಂತರ ನಾಗರಾಜ ಪೂಜಾರಿ ಮಾತನಾಡಿ ವಿದ್ಯುತ್ ತಿದ್ದುಪಡಿ ಮಸೂದೆ, 2011 ಅನ್ನು ಹಿಂಪಡೆಯಬೇಕು, 9 ಡಿಸೆಂಬರ್ 2021 ರಂದು ಸಂಯುಕ್ತ ಕಿಸಾನ್ ಮೋರ್ಚಾಗೆ ಬರೆದ ಪತ್ರದಲ್ಲಿ ಕೇಂದ್ರ ಸರ್ಕಾರವು “ಮೋರ್ಟಾದೊಂದಿಗೆ ಚರ್ಚಿಸಿದ ನಂತರವೇ ಸಂಸತ್ತಿನಲ್ಲಿ, ಮಸೂದೆಯನ್ನು ಮಂಡಿಸಲಾಗುವುದು’ ಎಂದು ಲಿಖಿತ ಭರವಸೆ ನೀಡಿದೆ. ಇದರ ಹೊರತಾಗಿಯ ಕೇಂದ್ರ ಸರ್ಕಾರ ಯಾವುದೇ ಚರ್ಚೆಯಿಲ್ಲದೆ ಈ ಮಸೂದೆಯನ್ನು, ಸಂಸತ್ತಿನಲ್ಲಿ ಮಂಡಿಸಿದೆ.ರೈತ ಚಳವಳಿಯಲ್ಲಿ, ಹುತಾತ್ಮರಾದ ಎಲ್ಲಾ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಮತ್ತು ಅವರ ಪುನರ್ವಸತಿಗೆ ವ್ಯವಸ್ಥೆ ಮಾಡಬೇಕು ಮತ್ತು ಸಿಂಘ ಗಡಿಯಲ್ಲಿ, ಚಳುವಳಿಯಲ್ಲಿ ಹುತಾತ್ಮ ರೈತರ ಸ್ಮಾರಕ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಬೇಕು.ರಾಜ್ಯದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ, ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆ, ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ನಿಷೇದ ಆಯ್ಕೆಗಳನ್ನು ವಾಪಸ್ ಪಡೆಯಬೇಕು ಆಕ್ರೋಶ ಭರಿತವಾಗಿ ಮಾತನಾಡಿದರು.
ಲಖೀಂಪುರ ಶೇರಿ ಬೆಲ್ಲೆಯ ಟಿಕೋನಿಯಾದಲ್ಲಿ, ನಾಲ್ವಾರು ರೈತರು ಮತ್ತು ಪತ್ರಕರ್ತನ ಹತ್ಯೆಯ ಪ್ರಮುಖ ಸಂಚುಕೋರ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಮತ್ತು ಬಂಧಿಸಿ ಜೈಲಿಗೆ ಕಳುಹಿಸಬೇಕು.

ಲಖೀಂಪುರ ಶೇರಿ ಹತ್ಯಾಕಾಂಡದಲ್ಲಿ, ಬಂಧಿಯಾಗಿರುವ ಅಮಾಯಕ ರೈತರನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಅವರ ವಿರುದ್ದ ದಾಖಲಿಸಿರುವ ನಕಲಿ ಪ್ರಕರಣಗಳನ್ನು, ಕೂಡಲೇ ಹಿಂಪಡೆಯಬೇಕು. ಹುತಾತ್ಮ, ರೈತರ ಕುಟುಂಬಗಳಿಗೆ ಹಾಗೂ ಗಾಯಗೊಂಡ ರೈತರಿಗೆ ಪರಿಹಾರ ನೀಡುವ ಭರವಸೆಯನ್ನು ಸರಕಾರ ಈಡೇರಿಸಬೇಕು. ಅನಾವೃಷ್ಟಿ, ಅತಿವೃಷ್ಟಿ, ಬೆಳೆಗೆ ಸಂಬಂಧಿಸಿದ ರೋಗಗಳು ಇತ್ಯಾದಿಗಳಿಂದಾದ ನಷ್ಟವನ್ನು ಸರಿದೂಗಿಸಲು ಸರ್ಕಾರವು ಎಲ್ಲಾ ಬೆಳೆಗಳಿಗೆ ಸಮಗ್ರ ಮತ್ತು ಪರಿಣಾಮಕಾರಿ ಬೆಳೆ ವಿಮೆಯನ್ನು ಜಾರಿಗೊಳಿಸಬೇಕು.ಎಲ್ಲಾ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಮಾಸಿಕ 5,000ರ ರೂಪಾಯಿ ರೈತ ಹಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ಸಮಿತಿಯು ಮಾನ್ಯ ರಾಷ್ಟ್ರಪತಿಗೆ ತಹಸೀಲ್ದಾರ ಮೂಲಕ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಿ.ಎಚ್.ಕಂಬಳಿ, ಚಂದ್ರಶೇಖರ ಗೋರೆಬಾಳ, ಎ.ಖಾದರ ಸುಭಾನಿ, ರಾಮಯ್ಯ ಜವಳಗೇರಾ , ರಮೇಶ ಮುಕುಂದ, ಮಂಜುನಾಥ ಗಾಂಧಿನಗರ, ಬಿ.ಎನ್.ಯರದಿಹಾಳ, ರಮೇಶ್ ಪಾಟೀಲ ಬೆರ್ಗಿ,ಚಿಟ್ಟಿಬಾಬು,ಬಸವರಾಜ ಬಾದರ್ಲಿ, ಗೋಪಾಲಕೃಷ್ಣ ಹುಸೇನಸಾಬ, ವೆಂಕನಗೌಡ, ಬಸವರಾಜ ಬಾದರ್ಲಿ, ಅಶೋಕ ನಂಜಲದಿನ್ನಿ, ಸಬ್ಬಜಲಿಸಾಬ, ಹಾಜಿಸಾಬ, ಆಯನೂರ ಶರಬಣ್ಣ, ನಾಗಾಪುರ ಬಿ.ಲಿಂಗಪ್ಪ, ಶೇಕ್ಷಾ ಖಾರ್ದಿ, ಚಿಟ್ಟಿ ಬಾಬು, ದೇವೇಂದ್ರ ಗೌಡ,ಖಾದರಸಾಬ, ಬಸವರಾಜ ಎಕ್ಕಿ, ಚಂದ್ರಪ್ಪ ನಾಯಕ ಸೇರಿದಂತೆ ಇತರರು ಇದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
